ಚಾಂಗ್ವಾನ್ (ದಕ್ಷಿಣ ಕೊರಿಯಾ) : ಭಾರತದ ಯುವ ಶೂಟರ್ ಅರ್ಜುನ್ ಬಾಬುತಾ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಲುಕಾಸ್ ಕೊಜೆನಿಸ್ಕಿ ಅವರನ್ನು ಸೋಲಿಸಿ ತಮ್ಮ ಖಾತೆ ತೆರೆದಿದ್ದಾರೆ. ಚಿನ್ನದ ಪದಕದ ಹಣಾಹಣಿಯಲ್ಲಿ ಅರ್ಜುನ್ ಯುಎಸ್ಎಯ ಕೊಜೆನಿಸ್ಕಿಯನ್ನು 17-9 ರಿಂದ ಏಕಪಕ್ಷೀಯವಾಗಿ ಸೋಲಿಸಿದ್ದಾರೆ. ಇದು ಅರ್ಜುನ್‌ಗೆ ಚೊಚ್ಚಲ ಚಿನ್ನವಾಗಿದೆ. ಇವರು ಅಜೆರ್ಬೈಜಾನ್‌ನ ಗಬಾಲಾದಲ್ಲಿ ನಡೆದ 2016 ರ ಜೂನಿಯರ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಪಡೆದಿದ್ದರು.
-
Fantastic effort from @arjunbabuta to win India’s first Gold Medal at the @ISSF_Shooting World Cup Changwon. Great start to the competition with a dominating win in the 10m Air Rifle Mens Event. #TeamIndia #ShootingSport pic.twitter.com/netsrvu0vP
— Suma Shirur OLY (@SumaShirur) July 11, 2022 " class="align-text-top noRightClick twitterSection" data="
">Fantastic effort from @arjunbabuta to win India’s first Gold Medal at the @ISSF_Shooting World Cup Changwon. Great start to the competition with a dominating win in the 10m Air Rifle Mens Event. #TeamIndia #ShootingSport pic.twitter.com/netsrvu0vP
— Suma Shirur OLY (@SumaShirur) July 11, 2022Fantastic effort from @arjunbabuta to win India’s first Gold Medal at the @ISSF_Shooting World Cup Changwon. Great start to the competition with a dominating win in the 10m Air Rifle Mens Event. #TeamIndia #ShootingSport pic.twitter.com/netsrvu0vP
— Suma Shirur OLY (@SumaShirur) July 11, 2022
2016 ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಪಂಜಾಬ್‌ನ 23 ವರ್ಷದ ಆಟಗಾರರಾದ ಇವರು, ಈ ಹಿಂದೆ 261.1 ಅಂಕಗಳೊಂದಿಗೆ ರ‍್ಯಾಂಕಿಂಗ್ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಅರ್ಹತೆ ಪಡೆದಿದ್ದರು.
ಈವೆಂಟ್‌ನಲ್ಲಿ ಭಾಗವಹಿಸಿದ ಮತ್ತೊಬ್ಬ ಭಾರತೀಯ ಪಾರ್ಥ್ ಮಖಿಜಾ 258.1 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇಸ್ರೇಲ್‌ನ 33 ವರ್ಷದ ಸೆರ್ಗೆಯ್ ರಿಕ್ಟರ್ 259.9 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ 27 ಮಂದಿ ನೋಡಿ ಪೊಲೀಸರಿಗೇ ಶಾಕ್: ವಿಡಿಯೋ ವೈರಲ್