ನವದೆಹಲಿ: ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಭಾರತದ ಜಾವೆಲಿನ್ ಆಟಗಾರ ಶಿವಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಾಲ್ಕು ವರ್ಷ ಅಮಾನತು ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ವೇಳೆ ಶಿವಪಾಲ್ರ ಡೋಪಿಂಗ್ ಸ್ಯಾಂಪಲ್ ಪಡೆಯಲಾಗಿತ್ತು. ಈ ವೇಳೆ ಉದ್ದೀಪನ ಮದ್ದು ದೃಢಪಟ್ಟ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು.
ನಿಷೇಧಿತ ವಸ್ತುವಾದ ಮೆಥಾಂಡಿನೋನ್ ಅನ್ನು ಶಿವಪಾಲ್ ಸಿಂಗ್ ಅವರು ಪಡೆದಿರುವುದು ಪರೀಕ್ಷೆಯಲ್ಲಿ ದೃಢಟ್ಟಿದೆ. ಇದರಿಂದ ಅವರನ್ನು ಎಲ್ಲ ಕ್ರೀಡಾಕೂಟದಿಂದ ಮುಂದಿನ 4 ವರ್ಷಗಳವರೆಗೆ ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದ 27 ವರ್ಷದ ಅಥ್ಲೀಟ್ ಕಳೆದ ವರ್ಷ ಅಕ್ಟೋಬರ್ 21 ರಿಂದಲೇ ಅಮಾನತಿನಲ್ಲಿದ್ದರು. ಇದೀಗ ಆ ಅವಧಿಯನ್ನು ಅಕ್ಟೋಬರ್ 2025 ರವರೆಗೆ ವಿಸ್ತರಿಸಲಾಗಿದೆ.
2019 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಶಿವಪಾಲ್ 86.23 ಮೀ ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ಗೆದ್ದಿದ್ದರು. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 12 ನೇ ಸ್ಥಾನ ಪಡೆದಿದ್ದರು. ಒಲಿಂಪಿಕ್ಸ್ ನಂತರ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.
ಓದಿ: ಟಿ20 ಸರಣಿ: ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ಸರಣಿ ಗೆದ್ದ ಭಾರತ