ಶಾಂಘೈ (ಚೈನಾ): ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಜಯಿಸಿದ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಎಟಿಪಿ ಪುರುಷರ ಡಬಲ್ಸ್ ಫೈನಲ್‌ನಲ್ಲಿ ರನ್ನರ್‌ಅಪ್ ಆದರು. ಭಾನುವಾರ ಶಾಂಘೈನ ಕಿಝೋಂಗ್ ಫಾರೆಸ್ಟ್ ಸ್ಪೋರ್ಟ್ಸ್ ಸಿಟಿ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯಾದ ಪಾಲುದಾರ ಮ್ಯಾಥ್ಯೂ ಎಬ್ಡೆನ್ ಅವರು ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಾಲ್ಲೋಸ್ ವಿರುದ್ಧ 7-5, 2-6, 7-10 ರಿಂದ ಸೋಲನುಭವಿಸಿದರು.
-
🎾 𝗧𝗢𝗨𝗚𝗛 𝗟𝗨𝗖𝗞 𝗧𝗢 𝗧𝗛𝗘 𝗦𝗧𝗔𝗥 𝗗𝗨𝗢! Rohan Bopanna & Matthew Ebden lost their final contest against Granollers-Zeballos pair at the Shanghai Masters 2023.
— Sportwalk Media (@sportwalkmedia) October 15, 2023 " class="align-text-top noRightClick twitterSection" data="
📷 Getty • #RohanBopanna #ShanghaiMasters #Tennis #IndianTennis #Cheer4India #TeamIndia #Sportwalk pic.twitter.com/POblaT1has
">🎾 𝗧𝗢𝗨𝗚𝗛 𝗟𝗨𝗖𝗞 𝗧𝗢 𝗧𝗛𝗘 𝗦𝗧𝗔𝗥 𝗗𝗨𝗢! Rohan Bopanna & Matthew Ebden lost their final contest against Granollers-Zeballos pair at the Shanghai Masters 2023.
— Sportwalk Media (@sportwalkmedia) October 15, 2023
📷 Getty • #RohanBopanna #ShanghaiMasters #Tennis #IndianTennis #Cheer4India #TeamIndia #Sportwalk pic.twitter.com/POblaT1has🎾 𝗧𝗢𝗨𝗚𝗛 𝗟𝗨𝗖𝗞 𝗧𝗢 𝗧𝗛𝗘 𝗦𝗧𝗔𝗥 𝗗𝗨𝗢! Rohan Bopanna & Matthew Ebden lost their final contest against Granollers-Zeballos pair at the Shanghai Masters 2023.
— Sportwalk Media (@sportwalkmedia) October 15, 2023
📷 Getty • #RohanBopanna #ShanghaiMasters #Tennis #IndianTennis #Cheer4India #TeamIndia #Sportwalk pic.twitter.com/POblaT1has
ಇಂಡೋ-ಆಸ್ಟ್ರೇಲಿಯನ್ ಜೋಡಿಯು ಗ್ರಾನೋಲ್ಲರ್ಸ್ ಮತ್ತು ಜೆಬಾಲ್ಲೋಸ್ಗೆ ಕಠಿಣ ಪೈಪೋಟಿ ನೀಡಿದರು. ಮೊದಲ ಸೆಟ್‌ನಲ್ಲಿ ಉತ್ತಮ ಆರಂಭ ಪಡೆದು, ನಂತರ ಎರಡು ಸೆಟ್‌ನಲ್ಲಿ ಎಡವಿದ್ದರಿಂದ ಮಣಿದರು. ಮೊದಲ ಸೆಟ್‌ನಲ್ಲಿ ಎರಡೂ ತಂಡ ಸರ್ವ್ ಕಾಪಾಡಿಕೊಂಡು ಅಂಕ ಬಿಟ್ಟುಕೊಡಲಿಲ್ಲ. 12 ಗೇಮ್ನ ನಂತರ ರೋಹನ್ ಮತ್ತು ಎಬ್ಡೆನ್ ನಿರ್ಣಾಯಕ ಬ್ರೇಕ್ ಪಾಯಿಂಟ್ ಪಡೆದು ಮುನ್ನಡೆ ಸಾಧಿಸಿದರು.
ಆದರೆ ಸ್ಪ್ಯಾನಿಷ್-ಅರ್ಜೆಂಟೀನಾ ಜೋಡಿ ವೇಗವಾಗಿ ಕಮ್ಬ್ಯಾಕ್ ಮಾಡಿದರು. ಮೊದಲ ಸೆಟ್ ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದೇ ಎರಡನೇ ಸೆಟ್‌ನಲ್ಲಿ 4-0 ಮುನ್ನಡೆ ಸಾಧಿಸಿದರು. ಹಾಗೆಯೇ ಸೆಟ್ ಅನ್ನು 6-2 ರಿಂದ ಗೆದ್ದರು. ಈ ಮೂಲಕ ಪಂದ್ಯ ಡ್ರಾ ಮಾಡಿಕೊಂಡರು. ಮೂರನೇ ಮತ್ತು ನಿರ್ಣಾಯಕ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡುಬಂದರೂ ಸ್ಪ್ಯಾನಿಷ್-ಅರ್ಜೆಂಟೀನಾ ಜೋಡಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದರಿಂದ 10-7 ರಿಂದ ಸೆಟ್ ವಶಪಡಿಸಿಕೊಂಡು ವಿಜಯಮಾಲೆ ಧರಿಸಿದರು.
ಇದು ಬೋಪಣ್ಣ ಅವರ ವರ್ಷದ ಮೂರನೇ ಎಟಿಪಿ ಮಾಸ್ಟರ್ಸ್ 1000 ಫೈನಲ್ ಆಗಿತ್ತು. 43 ವರ್ಷದ ಭಾರತೀಯ ಆಟಗಾರ ಈ ವರ್ಷಾರಂಭದಲ್ಲಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲಲು ಎಬ್ಡೆನ್ ಜೊತೆಗೂಡಿದ್ದರು. ಈ ಗೆಲುವಿನಿಂದ ಬೋಪಣ್ಣ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಎಟಿಪಿ ಮಾಸ್ಟರ್ಸ್ ಚಾಂಪಿಯನ್ ಆಗಿದ್ದಾರೆ. ದೋಹಾದಲ್ಲಿ ಇವರಿಬ್ಬರೂ ಟ್ರೋಫಿ ಗೆದ್ದಿದ್ದರು. ಬೋಪಣ್ಣ ಮತ್ತು ಎಬ್ಡೆನ್ ಯುಎಸ್ ಓಪನ್‌ನಲ್ಲಿ ಪ್ರಮುಖ ಫೈನಲ್‌ಗೆ ತಲುಪಿತು. ಮ್ಯಾಡ್ರಿಡ್‌ನಲ್ಲಿ ಮತ್ತೊಂದು ಮಾಸ್ಟರ್ಸ್ 1000 ಫೈನಲ್‌ಗೂ ಪ್ರವೇಶ ಪಡೆದರು. ಇದರಿಂದಾಗಿ ಈ ಜೋಡಿಗೆ ಸೀಸನ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ತಂಡವಾಗಿ ತಮ್ಮ ಮೊದಲ ಋತುವಿನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಎಟಿಪಿ ಫೈನಲ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಎಟಿಪಿ ಫೈನಲ್ಸ್‌ನಲ್ಲಿ ಬೋಪಣ್ಣ ಅವರ ನಾಲ್ಕನೇ ಪ್ರದರ್ಶನ. 2015 ರ ನಂತರ ಮೊದಲನೆಯದು. ಎಬ್ಡೆನ್ ಮೊದಲ ಬಾರಿಗೆ ಸೀಸನ್ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಇಂಡಿಯಾ-ಪಾಕ್ ಕ್ರಿಕೆಟ್ ಮ್ಯಾಚ್ ವೇಳೆ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡ ನಟಿ ಊರ್ವಶಿ ರೌಟೇಲಾ