ETV Bharat / sports

ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಸೋಲುಂಡ ಸರೆನಾ ವಿಲಿಯಮ್ಸ್​ - sarena loses first wimbledon match after 1 year later

ಕಳೆದ ವಾರ ವಿಂಬಲ್ಡನ್​ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ್ದ ಸರೆನಾ ಮಗಳವಾರ ನಡೆದ ಮೊದಲ ಸರ್ವಿಸ್​ ಪಂದ್ಯದಲ್ಲಿ ಫ್ರಾನ್ಸ್​ನ ಹಾರ್ಮನಿ ಟ್ಯಾನ್​ ವಿರುದ್ದ ​ ಸೋಲನ್ನಪ್ಪಿದ್ದಾರೆ. ಈ ಮೂಲಕ ಒಂದು ವರ್ಷದ ನಂತರ ಆಡಿದ ಮೊದಲ ಪಂದ್ಯದಲ್ಲಿ ಸರೆನಾ ಆಘಾತ ಎದುರಿಸಿದ್ದಾರೆ.

sarena first match after 1 year
ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಸೋಲುಂಡ ಸರೆನಾ
author img

By

Published : Jun 29, 2022, 1:25 PM IST

ಇಂಗ್ಲೆಂಡ್​: ಮಂಗಳವಾರ ನಡೆದ ವಿಂಬಲ್ಡನ್​ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸರೆನಾ ವಿಲಯಮ್ಸ್​ ಸೋಲನುಭವಿಸಿದ್ದಾರೆ. ಮಂಗಳವಾರ ಆಲ್​ ಇಂಗ್ಲೆಂಡ್​ ಕ್ಲಬ್​ನಲ್ಲಿ ನಡೆದ ವಿಂಬಲ್ಡನ್‌ನ ಮೊದಲ ಸರ್ವಿಸ್​ ಪಂದ್ಯದಲ್ಲಿ, ಸೆರೆನಾ ವಿಲಿಯಮ್ಸ್​ ಫ್ರಾನ್ಸ್​ನ 115ನೇ ಶ್ರೇಯಾಂಕದ ಹಾರ್ಮನಿ ಟ್ಯಾನ್‌ ವಿರುದ್ದ 7-5, 1-6, 7/6 (10/7) ಸೆಟ್​ಗಳ ಅಂತರದಲ್ಲಿ ಪರಾಜಯ ಹೊಂದಿದ್ದಾರೆ.

ಏಳು ಬಾರಿಯ ಚಾಂಪಿಯನ್ ಆಗಿದ್ದ ಸರೆನಾ ಅವರು ಸಂಜೆಯ ಪಂದ್ಯಕ್ಕಾಗಿ ಕೋರ್ಟ್ ಸೆಂಟರ್​ಗೆ ಆಗಮಿಸಿದಾಗ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಸ್ವಾಗತ ಕೋರಿದ್ದರು. ಆದರೆ ಮೊದಲ ಸರ್ವಿಸ್ ಆಟದಲ್ಲಿ ಸೋಲುವ ಮೂಲಕ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರು. ಇದರೊಂದಿಗೆ ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಸರೆನಾ, ಫ್ರಾನ್ಸ್​ನ ಹಾರ್ಮನಿ ಟ್ಯಾನ್​ ವಿರುದ್ಧ ಸೋಲು ಕಂಡರು.

ಒಂದು ವರ್ಷದಿಂದ ವಿಂಬಲ್ಡನ್​ ಆಟದಿಂದ ದೂರೂಳಿದಿದ್ದ ಸರೆನಾ ವಿಲಿಯಮ್ಸ್ ಕಳೆದ ವಾರ ಅಭ್ಯಾಸ ಪಂದ್ಯದಲ್ಲಿ ಒನ್ಸ್ ಜಬುರ್ ವಿರುದ್ದ ಭರ್ಜರಿ ಜಯಗಳಿಸಿದ್ದರು. ಈ ಮೂಲಕ ಅಭಿಮಾನಿಗಳು ಕಂಬ್ಯಾಕ್​ ಆಗಿರುವ ಸರೆನಾ ಕುರಿತು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಭಾರತದ ಬೌಲರ್​ಗಳನ್ನು ಬೆಂಡೆತ್ತಿದ ಐರ್ಲೆಂಡ್​.. ಗೆಲುವಿನ ಹಾದಿಯಲ್ಲಿ ರೋಚಕ ಸೋಲುಂಡ ಬಲ್ಬಿರ್ನಿ ಬಾಯ್ಸ್​!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.