ETV Bharat / sports

ಏಷ್ಯನ್​ ಚಾಂಪಿಯನ್​​ಶಿಪ್: ಚಿನ್ನ ಗೆದ್ದ ಸಂಜೀತ್, ಬೆಳ್ಳಿಗೆ ತೃಪ್ತಿಪಟ್ಟ ಪಂಘಲ್ - ಅಮಿತ್ ಪಂಘಲ್​

91 ಕೆಜಿ ವಿಭಾಗದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಜೀತ್​ 3-2ರಲ್ಲಿ 5 ಬಾರಿಯ ಏಷ್ಯನ್ ಚಾಂಪಿಯನ್​ಶಿಪ್​ ಪದಕ ವಿಜೇತ ವಾಲಿ ವಿರುದ್ಧ ಜಯ ಸಾಧಿಸಿದರು.

ಏಷ್ಯನ್ ಬಾಕ್ಸಿಂಗ್​ ಚಾಂಪಿಯನ್​​ಶಿಪ್
ಏಷ್ಯನ್ ಬಾಕ್ಸಿಂಗ್​ ಚಾಂಪಿಯನ್​​ಶಿಪ್
author img

By

Published : May 31, 2021, 11:54 PM IST

ದುಬೈ: ಭಾರತದ ಭರವಸೆಯ ಬಾಕ್ಸರ್​ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದಿದ್ದ ಕಜಕಸ್ತಾನದ ವಾಸಿಲಿ ಲೆವಿಟ್ ಅವರನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

91 ಕೆಜಿ ವಿಭಾಗದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಸಂಜೀತ್​ 3-2ರಲ್ಲಿ 5 ಬಾರಿಯ ಏಷ್ಯನ್ ಚಾಂಪಿಯನ್​ಶಿಪ್​ ಪದಕ ವಿಜೇತ ವಾಲಿ ವಿರುದ್ಧ ಜಯ ಸಾಧಿಸಿದರು.

ಆದರೆ ಒಲಿಂಪಿಕ್ಸ್​ ಬೌಂಡ್​ ಬಾಕ್ಸರ್​ ಅಮಿತ್ ಪಂಘಲ್ 3-2ರ ಅಂತರದಲ್ಲಿ ಉಜ್ಬೆಕಿಸ್ತಾನದ ಹಾಲಿ ಒಲಿಂಪಿಕ್ಸ್​ ಚಾಂಪಿಯನ್​ ​ಜೊಯಿರೋವ್ ಶಖೋಬಿದಿನ್ ವಿರುದ್ಧ 2-3ರಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಶಿವ ಥಾಪ ಕೂಡ 64 ಕೆಜಿ ವಿಭಾಗದಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು.

ಟೂರ್ನಿಯಲ್ಲಿ ಭಾಗವಹಿಸಿದ್ದ 19 ಮಂದಿ ಬಾಕ್ಸರ್​ಗಳಲ್ಲಿ 15 ಮಂದಿ ಪದಕ ಪಡೆಯುವಲ್ಲಿ ಸಫಲರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ 10 ಮತ್ತು ಪುರುಷರ ವಿಭಾಗದಲ್ಲಿ 5 ಮಂದಿ ಪದಕ ಪಡೆದಿದ್ದಾರೆ. ಒಟ್ಟು 2 ಚಿನ್ನ 5 ಬೆಳ್ಳಿ, 8 ಕಂಚು ಪದಕ ಭಾರತದ ಪಾಲಾಗಿವೆ.

ಇದನ್ನು ಓದಿ:ಏಷ್ಯನ್​ ಬಾಕ್ಸಿಂಗ್ ಚಾಂಪಿಯನ್​ಶಿಪ್​: 10 ಪದಕಗಳಿಗೆ ಕೊರಳೊಡ್ಡಿದ ಭಾರತದ ಮಹಿಳಾ ಬಾಕ್ಸರ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.