ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ನ ಮಿಶ್ರ ಡಬಲ್ಸ್ನಲ್ಲಿ ಅಮೆರಿಕಾದ ರಾಜೀವ್ ರಾಮ್ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ಸಾನಿಯಾ ಮಿರ್ಜಾ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೊ-ಅಮೆರಿಕನ್ ಜೋಡಿ ಸರ್ಬಿಯನ್ ಜೋಡಿ ಅಲೆಕ್ಸಾಂಡ್ರಾ ಕ್ರುನಿಕ್ ಮತ್ತು ನಿಕೋಲಾ ಕ್ಯಾಸಿಕ್ ವಿರುದ್ಧ 6-3, 7-6ರಲ್ಲಿ ಗೆಲುವು ಸಾಧಿಸಿದರು.
ಈಗಾಗಲೆ ಭಾರತೀಯರ ಪುರುಷರ ಡಬಲ್ಸ್ ಮಹಿಳಾ ಡಬಲ್ಸ್ನಲ್ಲಿ ಭಾರತೀಯ ಸವಾಲು ಆಂತ್ಯುಗೊಂಡಿದೆ. ಮಿಶ್ರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಶನಿವಾರ ಕ್ರೊವೇಷ್ಯಾದ ಡಾರಿಜಿ ಜುರಾಕ್ ಜೊತೆಗೂಡಿತಮ್ಮ ಮೊದಲ ಸುತ್ತಿನ ಪಂದ್ಯವನ್ನಾಡಲಿದ್ದಾರೆ.
ಗುರುವಾರ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ 2ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ 7-6, 6-4,4-6,6-2ರಲ್ಲಿ ಆಸ್ಟ್ರೇಲಿಯಾದ ನಿಕ್ ಕಿಗ್ರಿಯೋಸ್ ವಿರುದ್ಧ ಗೆದ್ದರೆ, 4ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ 7-6, 6-7, 6-3, 6-4ರಲ್ಲಿ ಅರ್ಜೆಂಟೀನಾದ ಸೆಬಾಸ್ಟಿಯನ್ ಬೇಜ್ ವಿರುದ್ಧ ಗೆಲುವು ಸಾಧಿಸಿದರು.
ಮಹಿಳೆಯರ ಸಿಂಗಲ್ಸ್ನಲ್ಲಿ 2ನೇ ಶ್ರೇಯಾಂಕದ ಅರಿನಾ ಸಬಲೆಂಕಾ ಚೀನಾದ ವಾಂಗ್ ಕ್ಷಿಯಾಂಗ್ ವಿರುದ್ಧ 1-6, 6-4, 6-2ರಲ್ಲಿ ಗೆಲುವು ಸಾಧಿಸಿದರೆ, 12 ಶ್ರೇಯಾಂಕದ ಎಲಿನಾ ರಿಬಾಕಿನಾ ನಿವೃತ್ತಿಯಾದ್ದರಿಂದ ಚೀನಾದ ಶ್ರೇಯಾಂಕ ರಹಿತ ಜಾಂಗ್ ಶುವಾಯ್ 3ನೇ ಸುತ್ತಿಗೆ ಸುಲಭವಾಗಿ ಪ್ರವೇಶ ಪಡೆದರು. 7ನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್ 6-2, 6-2ರಲ್ಲಿ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ:Syed Modi International: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿವಿ ಸಿಂಧು, ಪ್ರಣಯ್