ಭೋಪಾಲ್(ಮರ್ಧಯ ಪ್ರದೇಶ): ಭಾರತದ ಮುಂಬರುವ ಭರವಸೆಯ ಶೂಟರ್ ಕೌರ್ ಸಾಮ್ರಾ ಅವರು ಐಎಸ್‌ಎಸ್‌ಎಫ್ ರೈಫಲ್/ಪಿಸ್ತೂಲ್ ವಿಶ್ವಕಪ್‌ನ ಅಂತಿಮ ದಿನವಾದ ಇಂದು 50 ಮೀಟರ್ ರೈಫಲ್ 3ಪಿ ಕಂಚು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಪದಕವನ್ನು ಮುಡಿಗೇರಿಸಿಕೊಂಡರು. ಚೀನಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿ, ಈವೆಂಟ್‌ನಲ್ಲಿ ಜಾಂಗ್ ಕಿಯೊಂಗ್ಯು ಚಿನ್ನ ಗೆದ್ದುಕೊಂಡರು. ಹಾಲಿ ರಾಷ್ಟ್ರೀಯ ಚಾಂಪಿಯನ್ ಸಾಮ್ರಾ, ಶ್ರೇಯಾಂಕದ ಸುತ್ತಿನಲ್ಲಿ ಒಟ್ಟು 403.9 ಪಾಯಿಂಟ್‌ಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು. ಜಾಂಗ್ (414.7 ಅಂಕ) ಮತ್ತು ಜೆಕ್ ಗಣರಾಜ್ಯದ ಅನೆಟಾ ಬ್ರಾಬ್ಕೋವಾ (411.3) ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು ಮತ್ತು ಜೆಕ್ ಗಣರಾಜ್ಯದ ಅನೆಟಾ ಬೆಳ್ಳಿ ಪಡೆದರು.
ಚಿನ್ನದ ಪದಕದ ಸುತ್ತಿನಲ್ಲಿ, ಜಾಂಗ್ ತನ್ನ ಪ್ರತಿಸ್ಪರ್ಧಿ ಜೆಕ್ ಅನ್ನು 16-8 ರಿಂದ ಸೋಲಿಸಿದರು. ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಚೀನಾದ ನಂತರ ಪದಕ ಪಟ್ಟಿಯಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಚೀನಾದ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಳೆದ ವರ್ಷ ಗೆದ್ದಿದ್ದ ಕಂಚಿನ ಪದಕಕ್ಕೆ ಸಮ್ರಾ ಸೇರ್ಪಡೆಯಾದರು.
3ಪಿ ಈವೆಂಟ್‌ನ ಪ್ರಾಥಮಿಕ ಸುತ್ತಿನಲ್ಲಿ ಏರ್ ರೈಫಲ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಅಂಜುಮ್ ಮೌದ್ಗಿಲ್ ಮೇಲೆ ಎಲ್ಲರ ಕಣ್ಣುಗಳು ಇದ್ದವು. ಆದರೆ ಸಾಮ್ರಾ ಭಾನುವಾರ ಎಲ್ಲಾ ಮೂರು ಸ್ಥಾನಗಳಲ್ಲಿ ಅತ್ಯುತ್ತಮ ಸರಣಿಯನ್ನು ಶೂಟ್ ಮಾಡಿ, ಅರ್ಹತಾ ಸುತ್ತಿನ ಕೊನೆಯಲ್ಲಿ 588 ಸ್ಕೋರ್‌ನೊಂದಿಗೆ ಎರಡನೇ ಅತ್ಯುತ್ತಮವಾಗಿ ಹೊರಹೊಮ್ಮಿದರು.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಐತಿಹಾಸಿಕ ಚಿನ್ನದ ಪದಕ ಗೆದ್ದ ನಿತು - ಸ್ವೀಟಿ ಬೂರಾ
ಸಾಮ್ರಾ ಮಂಡಿಯೂರಿ ಸ್ಥಾನದಲ್ಲಿ ಒಟ್ಟು 194 (99, 95), ಪ್ರೋನ್‌ನಲ್ಲಿ ಪರಿಪೂರ್ಣ ಸ್ಥಾನದಲ್ಲಿ 200 (100, 100) ಮತ್ತು 194 ಸ್ಟ್ಯಾಂಡಿಂಗ್‌ನಲ್ಲಿ (97, 97) ಅಂಕ ಪಡೆದರು. ಅಂಜುಮ್ 583 ಅಂಕಗಳೊಂದಿಗೆ 17 ನೇ ಸ್ಥಾನಕ್ಕೆ ಕುಸಿದರು. ಮೂರನೇ ಭಾರತೀಯ ಮಾನಿನಿ ಕೌಶಿಕ್ ಎಂಟನೇ ಮತ್ತು ಕೊನೆಯ ಅರ್ಹತಾ ಸ್ಥಾನವನ್ನು ಕಳೆದುಕೊಂಡರು.
ವಿಶ್ವಕಪ್‌ಗೆ ಮುನ್ನ ನವದೆಹಲಿಯಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಅತ್ಯುತ್ತಮ ಸ್ಕೋರ್‌ಗಳನ್ನು ಗಳಿಸಿದ 21 ವರ್ಷದ ಸಾಮ್ರಾ, ಶ್ರೇಯಾಂಕದ ಪಂದ್ಯದಲ್ಲಿ ಮೂರು ಸುತ್ತುಗಳನ್ನು ಹೊಂದಿದ್ದರು, ಇದು ಜಾಂಗ್ ಮತ್ತು ಬ್ರಾಬ್ಕೋವಾ ಅವರಿಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿತು. ಸಾಮ್ರಾ ಇಂದು ಸ್ಟಾಂಡಿಂಗ್ ಶೂಟ್ನಲ್ಲಿ ವಿಫಲತೆ ಕಂಡಿದ್ದು ಕಂಚಿಗೆ ತೃಪ್ತಿ ಪಡುವಂತಾಯಿತು.
ಭಾರತೀಯ ಆಟಗಾರ್ತಿ ಮಂಡಿಯೂರಿ 102.2 (51.7, 50.5) ಮತ್ತು ಪ್ರೋನ್‌ನಲ್ಲಿ 103.4 (51.8, 51.6) ಉತ್ತಮ ಸಾಧನೆ ಮಾಡಿದರು. ಮೊದಲ ಸ್ಟ್ಯಾಂಡಿಂಗ್ ಸರಣಿಯಲ್ಲಿ ಅವರು ಸರಾಸರಿ 50.4 ಗಳಿಸಿದರು. ನಂತರದ ಅವಕಾಶದಲ್ಲಿ ಮತ್ತಷ್ಟು ಕಡಿಮೆ ಅಂಕಗಳು ಬಂದವು. ಅವರು ಸ್ಟಾಡಿಂಗ್ನಲ್ಲಿ 196.3 (50.4, 49.0, 49.2 ಮತ್ತು 49.7) ಅಂಕವನ್ನು ಗಳಿಸಿ ಕಂಚನ್ನು ಗೆದ್ದುಕೊಂಡರು.
ಇದನ್ನೂ ಓದಿ: "ಫಿನಿಕ್ಸ್ನಂತೆ ಮತ್ತೆ ಉತ್ತುಂಗಕ್ಕೇರುವಂತಾಗಲಿ".. ಪಂತ್ ಭೇಟಿಯಾದ ರೈನಾ, ಬಜ್ಜಿ, ಶ್ರೀಶಾಂತ್