ಬೆಲ್ಗ್ರೇಡ್: ಒಲಿಂಪಿಕ್ ಭರವಸೆಯ ಈಜುಪಟುಗಳಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಅವರು ಬೆಲ್ಗ್ರೇಡ್ ಟ್ರೋಫಿ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಆದರೆ ಟೋಕಿಯೋ ಕ್ರೀಡಾಕೂಟದ 'ಎ' ಅರ್ಹತಾ ಅಂಕವನ್ನು ತಪ್ಪಿಸಿಕೊಂಡಿದ್ದಾರೆ.
ಶನಿವಾರ ನಡೆದ FINA ಮಾನ್ಯತೆ ಪಡೆದ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ ಪುರುಷರ 200 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಪ್ರಕಾಶ್ 1ನಿಮಿಷ 56.96 ಸೆಕೆಂಡ್ಗಳಲ್ಲಿ ತಲುಪಿ ಚಿನ್ನದ ಪದಕ ಪಡೆದುಕೊಂಡರು. ಈ ಮೂಲಕ 2018ರಲ್ಲಿ ಒಂದು ನಿಮಿಷ 57.73 ಸೆಕೆಂಡುಗಳಲ್ಲಿ ತಲುಪಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ತಾವೇ ಬ್ರೇಕ್ ಮಾಡಿದರು.
ಆದರೆ 27 ವರ್ಷ ಈಜುಪಟು ಕೇವಲ 0.48 ಸೆಕೆಂಡ್ಗಳಲ್ಲಿ ಒಲಿಂಪಿಕ್ ಕೋಟಾವನ್ನು ತಪ್ಪಿಸಿಕೊಂಡರು.
ನಟರಾಜ್ 100 ಮೀಟರ್ ಬ್ಯಾಕ್ಸ್ಟ್ರೋಕ್ ಸ್ಪರ್ಧೆಯಲ್ಲಿ 54.45 ಸೆಕೆಂಡ್ಗಳಲ್ಲಿ ತಲುಪಿ ಮೊದಲ ಸ್ಥಾನ ಪಡೆದರು. ಆದರೆ 20 ವರ್ಷದ ಈಜುಪಟು ಕೂಡ ಎ ಮಾರ್ಕ್ ತಪ್ಪಿಸಿಕೊಂಡರು.
ಆದರೆ ಈ ಇಬ್ಬರು ತಮ್ಮ ಪ್ರತ್ಯೇಕ ವಿಭಾಗದಲ್ಲಿ ಬಿ ಮಾರ್ಕ್ನಲ್ಲಿ ಈಗಾಗಲೇ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್ 200 ಮೀಟರ್ ಬಟರ್ಫ್ಲೈನಲ್ಲಿ ಅರ್ಹತೆ ಪಡೆಯಲೂ 1:56:48 ಮತ್ತು 100 ಮೀಟರ್ ಬ್ಯಾಕ್ಸ್ಟೋಕ್ಗೆ 53:85 ಸಮಯ ನಿಗದಿ ಮಾಡಲಾಗಿದೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 10 ವರ್ಷ ಪೂರೈಸಿದ ಕಿಂಗ್ ಕೊಹ್ಲಿ: ಇಲ್ಲಿದೆ ದಶಕದ ಸಾಧನೆ..