ನವದೆಹಲಿ: ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೈನಾ ನೆಹ್ವಾಲ್ ಫಿಟ್‌ನೆಸ್ ಸಮಸ್ಯೆಯಿಂದಾಗಿ ಏಷ್ಯನ್ ಗೇಮ್ಸ್‌ನ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮೇ 4 ರಿಂದ 7 ರವರೆಗೆ ತೆಲಂಗಾಣದ ಜ್ವಾಲಾ ಗುಟ್ಟಾ ಅಕಾಡೆಮಿಯಲ್ಲಿ ಏಷ್ಯನ್ ಗೇಮ್ಸ್‌ಗೆ ತಂಡವನ್ನು ಆಯ್ಕೆ ಮಾಡಲು ಟ್ರಯಲ್ಸ್ ನಡೆಸಲಿದೆ.
ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಫಿಟ್‌ನೆಸ್ ಕಾರಣದಿಂದ ಸೈನಾ ನೆಹ್ವಾಲ್ ಭಾಗವಹಿಸುವುದಿಲ್ಲ ಎಂದು ಬ್ಯಾಡ್ಮಿಂಟನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ತಿಳಿಸಿದ್ದಾರೆ. ಇದಲ್ಲದೇ ಕುಶಾಲ್ ರಾಜ್ ಮತ್ತು ಪ್ರಕಾಶ್ ರಾಜ್ ಕೂಡ ತಮ್ಮ ಹೆಸರನ್ನು ಟ್ರಯಲ್ಸ್ ನಿಂದ ಹಿಂಪಡೆದಿದ್ದಾರೆ.
-
Saina Nehwal has withdrawn from the national selection trials for the upcoming #AsianGames due to fitness issues. 💔
— Khel Now (@KhelNow) May 1, 2023 " class="align-text-top noRightClick twitterSection" data="
Full List of tournaments missed in 2023: https://t.co/x0kFuhrndb#Badminton #SainaNehwal pic.twitter.com/KxhR13i6Qd
">Saina Nehwal has withdrawn from the national selection trials for the upcoming #AsianGames due to fitness issues. 💔
— Khel Now (@KhelNow) May 1, 2023
Full List of tournaments missed in 2023: https://t.co/x0kFuhrndb#Badminton #SainaNehwal pic.twitter.com/KxhR13i6QdSaina Nehwal has withdrawn from the national selection trials for the upcoming #AsianGames due to fitness issues. 💔
— Khel Now (@KhelNow) May 1, 2023
Full List of tournaments missed in 2023: https://t.co/x0kFuhrndb#Badminton #SainaNehwal pic.twitter.com/KxhR13i6Qd
ಸೈನಾ ಕೊನೆಯ ಬಾರಿ ಓರ್ಲಿಯನ್ಸ್ ಮಾಸ್ಟರ್ಸ್ ನಲ್ಲಿ ಆಡಿದ್ದರು. ಕೆಲ ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಜನವರಿಯಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್‌ನ ಟ್ರಯಲ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಟ್ರಯಲ್ಸ್‌ನಲ್ಲೂ ಭಾಗವಹಿಸಲು ಸೈನಾಗೆ ಸಾಧ್ಯವಾಗಿರಲಿಲ್ಲ.
ವಿಶ್ವ ಶ್ರೇಯಾಂಕದ ಆಧಾರದಲ್ಲಿ ಪಿವಿ ಸಿಂಧು (ವಿಶ್ವ ರ‍್ಯಾಂಕಿಂಗ್ 11), ಎಚ್‌ಎಸ್ ಪ್ರಣಯ್ (ವಿಶ್ವ ರ‍್ಯಾಂಕಿಂಗ್ 9), ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ (ವಿಶ್ವ ರ‍್ಯಾಂಕಿಂಗ್ 6) ಮತ್ತು ಮಹಿಳೆಯರ ಜೋಡಿ ತ್ರಿಷಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ (ವಿಶ್ವ ರ‍್ಯಾಂಕಿಂಗ್ 6) ಏಷ್ಯನ್ ಗೇಮ್ಸ್‌ಗೆ ನೇರ ಆಯ್ಕೆಯನ್ನು ಪಡೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ದುಬೈನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕ ಗೆದ್ದರು. ಭಾರತಕ್ಕೆ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಎರಡನೇ ಚಿನ್ನದ ಪದಕ ಇದಾಗಿದ್ದು, ದಿನೇಶ್ ಖನ್ನಾ 1965ರಲ್ಲಿ ಪುರುಷರ ಸಿಂಗಲ್ಸ್ ಚಿನ್ನ ಗೆದ್ದಿದ್ದರು.
ಏಷ್ಯನ್ ಗೇಮ್ಸ್‌ಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿ ಹೀಗಿದೆ:
ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಪ್ರಿಯಾಂಶು ರಾಜಾವತ್, ಮಿಥುನ್ ಮಂಜುನಾಥ್, ಸಾಯಿ ಪ್ರಣೀತ್, ಮೈಸ್ನಮ್ ಮಿರಾಬಾ, ಭರತ್ ರಾಘವ್, ಅನ್ಸಲ್ ಯಾದವ್, ಸಿದ್ಧಾಂತ್ ಗುಪ್ತಾ.
ಮಹಿಳೆಯರ ಸಿಂಗಲ್ಸ್: ಆಕಾಶಿ ಕಶ್ಯಪ್, ಮಾಳವಿಕಾ ಬನ್ಸೋಡ್, ಅಶ್ಮಿತಾ ಚಲಿಹಾ, ಅದಿತಿ ಭಟ್, ಉನ್ನತಿ ಹೂಡಾ, ಅಲಿಶಾ ನಾಯ್ಕ್, ಶ್ರೀಯಂಶಿ ವಲಿಶೆಟ್ಟಿ, ಅನುಪಮಾ ಉಪಾಧ್ಯಾಯ.
ಪುರುಷರ ಡಬಲ್ಸ್: ಎಂಆರ್ ಅರ್ಜುನ್/ಧ್ರುವ ಕಪಿಲ, ಕೃಷ್ಣ ಪ್ರಸಾದ್/ವಿಶುವರ್ಧನ್, ಸೂರಜ್ ಗೋಲಾ/ಪೃಥ್ವಿ ರಾಯ್, ನಿತಿನ್ ಎಚ್ ವಿ/ಸಾಯಿ ಪ್ರತೀಕ್.
ಮಹಿಳೆಯರ ಡಬಲ್ಸ್: ಅಶ್ವಿನಿ ಭಟ್/ಶಿಖಾ ಗೌತಮ್, ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ, ರಾಧಿಕಾ ಶರ್ಮಾ/ತನ್ವಿ ಶರ್ಮಾ.
ಮಿಶ್ರ ಡಬಲ್ಸ್: ರೋಹನ್ ಕಪೂರ್/ಸಿಕ್ಕಿ ರೆಡ್ಡಿ, ಸಾಯಿ ಪ್ರತೀಕ್/ತನೀಶಾ ಕ್ರಾಸ್ಟೊ, ಹರಿಹರನ್/ವರ್ಷಿಣಿ, ಹೇಮಗೇಂದ್ರ ಬಾಬು/ಕನಿಕಾ ಕನ್ವಾಲ್.
ಇದನ್ನೂ ಓದಿ: RCB vs LSG: ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ, ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು?