ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್ಒಐ)ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಖೇಲೋ ಇಂಡಿಯಾದ 2,783 ಕ್ರೀಡಾಪಟುಗಳಿಗೆ ಒಪಿಎ( ಔಟ್ ಆಫ್ ಪಾಕೆಟ್) ಭತ್ಯೆಯಾಗಿ 5.78 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಒಪಿಎ ಹಣ(ಸುಮಾರು 1.20 ಲಕ್ಷ) ನೇರವಾಗಿ ಕ್ರೀಡಾಪಟುಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಉಳಿದ ಮೊತ್ತವನ್ನು ಖೇಲೋ ಇಂಡಿಯಾ ಅಕಾಡೆಮಿಯಲ್ಲಿ ಕ್ರೀಡಾ ತರಬೇತಿ, ಆಹಾರ, ವಸತಿ ಮತ್ತು ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತದೆ.
![ಭಾರತೀಯ ಕ್ರೀಡಾಪ್ರಾಧಿಕಾರ](https://etvbharatimages.akamaized.net/etvbharat/prod-images/logo---sai_571_855_1211newsroom_1605196103_837.jpg)
ಎಸ್ಎಐ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪಸ್ತುತ ಬಿಡುಗಡೆಯಾಗಿರುವ ಹಣವನ್ನು ಕ್ರೀಡಾಪಟುಗಳು ತಮ್ಮ ಊರಿಗೆ ಪ್ರಯಾಣಿಸಲು ತಗಲುವ ವೆಚ್ಚ, ಅವರು ಮನೆಯಲ್ಲಿ ಇರುವಾಗ ಸೇವಿಸುವ ಆಹಾರದ ಶುಲ್ಕ ಮತ್ತು ಕ್ರೀಡಾಪಟುಗಳು ಮಾಡುವ ಇತರೆ ಖರ್ಚುಗಳಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಖೇಲೋ ಇಂಡಿಯಾ ಟ್ಯಾಲೆಂಟ್ ಡೆವಲಪ್‌ಮೆಂಟ್ (ಕೆಐಟಿಡಿ) ಯೋಜನೆಯ ಪ್ರಕಾರ ಹಣವನ್ನು ಕೇಂದ್ರ ಭಾರತೀಯ ಕ್ರೀಡಾ ಪ್ರಾಧಿಕಾರ ನೀಡುತ್ತಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 35 ರಾಜ್ಯಗಳಿಂದ 24 ಕ್ರೀಡಾ ವಿಭಾಗಗಳ ಕ್ರೀಡಾಪಟುಗಳು ಒಪಿಎ ಯೋಜನೆಯ ಲಾಭ ಪಡೆಯಲು ಸಮರ್ಥರಾಗಿದ್ದಾರೆ.