ಮುಂಬೈ: 21 ಬಾರಿಯ ಗ್ರ್ಯಾಂಡ್‌ಸ್ಲಾಮ್ ವಿಜೇತ ನೊವಾಕ್ ಜೊಕೊವಿಕ್ ಭಾನುವಾರ ಏಳನೇ ವಿಂಬಲ್ಡನ್ ಪ್ರಶಸ್ತಿ ಗೆದ್ದರು. ಸರ್ಬಿಯಾದ ಚಾಂಪಿಯನ್ ಆಟಗಾರನನ್ನು ಹೊಗಳಿದ ವಿಶ್ವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಸತತವಾಗಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವುದು ಸಾಮಾನ್ಯ ಸಂಗತಿಯಲ್ಲ ಎಂದು ತಿಳಿಸಿದ್ದಾರೆ.
-
4️⃣ straight Wimbledon’s in a row is no mean feat. @DjokerNole’s composure, focus and consistency has been the hallmark of his game over the years.
— Sachin Tendulkar (@sachin_rt) July 10, 2022 " class="align-text-top noRightClick twitterSection" data="
Lovely to see Novak appreciating @NickKyrgios & the staff at #Wimbledon after this win. pic.twitter.com/N6nEf3TntK
">4️⃣ straight Wimbledon’s in a row is no mean feat. @DjokerNole’s composure, focus and consistency has been the hallmark of his game over the years.
— Sachin Tendulkar (@sachin_rt) July 10, 2022
Lovely to see Novak appreciating @NickKyrgios & the staff at #Wimbledon after this win. pic.twitter.com/N6nEf3TntK4️⃣ straight Wimbledon’s in a row is no mean feat. @DjokerNole’s composure, focus and consistency has been the hallmark of his game over the years.
— Sachin Tendulkar (@sachin_rt) July 10, 2022
Lovely to see Novak appreciating @NickKyrgios & the staff at #Wimbledon after this win. pic.twitter.com/N6nEf3TntK
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರನ್ನು ಸೋಲಿಸುವ ಮೂಲಕ ರೋಜರ್ ಫೆಡರರ್ ಅವರ ದಾಖಲೆಯ 20 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಪಟ್ಟಿಯನ್ನು ಹಿಂದಿಕ್ಕಿ 21ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಇದನ್ನೂ ಓದಿ: ಜೊಕೊವಿಕ್ ಮುಡಿಗೆ ವಿಂಬಲ್ಡನ್ ಕಿರೀಟ; ಸರ್ಬಿಯನ್ ಆಟಗಾರನಿದು 21ನೇ ಗ್ರ್ಯಾಂಡ್ ಸ್ಲಾಮ್
"ಸತತವಾಗಿ 4ನೇ ಬಾರಿ ವಿಂಬಲ್ಡನ್ ಪ್ರಶಸ್ತಿಗಳನ್ನು ಗಳಿಸುವುದು ಸಾಧಾರಣ ಸಾಧನೆಯಲ್ಲ. ಜೊಕೊವಿಕ್ ಅವರ ಶಾಂತಚಿತ್ತತೆ, ಗಮನ ಮತ್ತು ಸ್ಥಿರತೆ ಈ ವರ್ಷದ ಅವರ ಆಟದ ವೈಶಿಷ್ಟ್ಯತೆ. ಈ ಗೆಲುವಿನ ನಂತರ ನೊವಾಕ್ ಅವರು ಎದುರಾಳಿ ಕಿರ್ಗಿಯೋಸ್ ಮತ್ತು ವಿಂಬಲ್ಡನ್ ಸಿಬ್ಬಂದಿಯನ್ನು ಪ್ರೋತ್ಸಾಹಿಸಿರುವುದನ್ನು ನೋಡಿ ಸಂತಸವಾಯಿತು" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.