ETV Bharat / sports

ಹೈದರಾಬಾದ್​ನಲ್ಲಿ ಫಿಟ್​ ಇಂಡಿಯಾ ಪರ ಬ್ಯಾಟಿಂಗ್​ ಮಾಡಿದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​

author img

By ETV Bharat Karnataka Team

Published : Nov 5, 2023, 4:05 PM IST

Sachin Tendulkar attends Marathon event in Hyderabad: ಏಜೆಸ್ ಫೆಡರಲ್ ಹೈದರಾಬಾದ್ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಸಚಿನ್​ ತೆಂಡೂಲ್ಕರ್​ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಂದೇಶ ನೀಡಿದ್ದಾರೆ.

Sachin Tendulkar attends Marathon event in Hyderabad

ಹೈದರಾಬಾದ್​ನಲ್ಲಿ ಫಿಟ್​ ಇಂಡಿಯಾದ ಪರ ಬ್ಯಾಟಿಂಗ್​ ಮಾಡಿದ ಮಾಸ್ಟರ್​ ಬ್ಲಾಸ್ಟರ್​ ಸಚಿನ್​

ಹೈದರಾಬಾದ್ (ತೆಲಂಗಾಣ): ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಭಾನುವಾರ ಇಲ್ಲಿ ಹೇಳಿದರು. ಏಜೆಸ್ ಫೆಡರಲ್ ಹೈದರಾಬಾದ್ ಹಾಫ್ ಮ್ಯಾರಥಾನ್‌ನ ಹಾಫ್ ಮ್ಯಾರಥಾನ್ ಮತ್ತು 10ಕೆ ಓಟವನ್ನು ಫ್ಲ್ಯಾಗ್ ಆಫ್ ಮಾಡಿದ ನಂತರ ಮಾತನಾಡಿದ ತೆಂಡೂಲ್ಕರ್, ಹೈದರಾಬಾದ್‌ನಲ್ಲಿ ಮ್ಯಾರಥಾನ್​​ಗೆ ಸಿಕ್ಕ ಪ್ರತಿಕ್ರಿಯೆಯನ್ನು ನೋಡಿ ಹೃದಯ ತುಂಬಿದೆ ಎಂದು ಹೇಳಿದರು.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಜೀವನಕ್ಕೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ನಿವೃತ್ತಿ ಪ್ರಕಟಿಸಿದ್ದರೂ ಫಿಟ್​ನೆಸ್​ನ್ನು ಹಾಗೇ ಕಾಯ್ದುಕೊಂಡಿದ್ದಾರೆ. ​16ನೇ ವರ್ಷಕ್ಕೆ ಕ್ರಿಕೆಟ್​ ಆಡಲು ಆರಂಭಿಸಿದ್ದ ಸಚಿನ್​ 40ನೇ ವಯಸ್ಸಿನವರೆಗೂ ಮೈದಾನಕ್ಕಿಳಿದು ದೇಶಕ್ಕಾಗಿ ಆಡಿದ್ದರು. 25 ವರ್ಷ ಕ್ರಿಕೆಟ್​ ಜೀವನದಲ್ಲಿ ಕಳೆದ ಅವರು ಎಂದೂ ಫಿಟ್​ನೆಸ್​ ಮತ್ತು ಫಾರ್ಮ್​ ಕೊರತೆಯಿಂದ ತಂಡದಿಂದ ಹೊರಗುಳಿದಿರಲಿಲ್ಲ. ಅಲ್ಲದೇ ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಕೆಲೆಹಾಕಿದ ಬ್ಯಾಟರ್​ ಎಂಬ ಕೀರ್ತಿಯೂ ಇವರಿಗಿದೆ.

'ಹೈದರಾಬಾದ್‌ನಲ್ಲಿರುವುದು ಅಸಾಧಾರಣ ಅನುಭವ. ಇದು ಫಿಟ್ ಇಂಡಿಯಾ, ಆರೋಗ್ಯಕರ ಭಾರತದ ಕುರಿತ ಆಂದೋಲನ. ಸುಮಾರು 8,000 ಜನ ಭಾಗವಹಿಸಿದ್ದಾರೆ. ಇದನ್ನು ಕೇಳಿ ನನಗೆ ಸಂತೋಷವಾಯಿತು. ಏಕೆಂದರೆ ನಾನು ಹೇಳಿದಂತೆ ನಾವು ಹಿಂದೆ ಕುಳಿತು ಇತರರನ್ನು ಮೆಚ್ಚುವ ಪ್ರವೃತ್ತಿಯನ್ನು ಹೊಂದಿದ್ದೇವೆ ಮತ್ತು ನಾವು ಇತರರಿಗಾಗಿ ಚಪ್ಪಾಳೆ ತಟ್ಟಲು ಇಷ್ಟಪಡುತ್ತೇವೆ, ಕ್ರೀಡೆಯನ್ನು ನೋಡಿ ಆನಂದಿಸುತ್ತೇವೆ' ಎಂದು ತೆಂಡೂಲ್ಕರ್ ತಿಳಿಸಿದರು.

'ಮ್ಯಾರಥಾನ್ ದೇಹರಚನೆ ಮತ್ತು ಆರೋಗ್ಯಕರ ಭಾರತದ ಕುರಿತಾದ ಆಂದೋಲನವಾಗಿದೆ. ಈ ಎಲ್ಲಾ ಘಟನೆಗಳು ತಾವಾಗಿಯೇ ಸಂಭವಿಸುವುದಿಲ್ಲ ಮತ್ತು ಸಾಕಷ್ಟು ಶ್ರಮ ಮತ್ತು ನಿರ್ಣಯದ ಅಗತ್ಯವಿರುತ್ತದೆ. ನನ್ನ ಹೃದಯವನ್ನು ಸ್ಪರ್ಶಿಸಿದ್ದು ದೃಷ್ಟಿ ವಿಕಲಚೇತನ ಕ್ರೀಡಾಪಟುಗಳು ಭಾಗವಹಿಸಿದ್ದು, ಅವರು ಈ ಸ್ಪರ್ಧೆಯ ಚಾಂಪಿಯನ್‌ಗಳು' ಎಂದು ಮಸ್ಟರ್​ ಬ್ಲಾಸ್ಟರ್​ ಬಣ್ಣಿಸಿದರು.

ಓಟಗಾರರು ಮೂರು ವಿಭಾಗಗಳಲ್ಲಿ ಭಾಗವಹಿಸಿದರು - ಹಾಫ್ ಮ್ಯಾರಥಾನ್ (21ಕೆ), 10ಕೆ ಮತ್ತು 5ಕೆ. ಗಚಿಬೌಲಿ ಕ್ರೀಡಾಂಗಣದಿಂದ ಆರಂಭವಾದ ಓಟದಲ್ಲಿ ದೃಷ್ಟಿ ವಿಕಲಚೇತನರು ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಅಡಿಲ್ಲೆ ಸುಮರಿವಾಲಾ ಮತ್ತು ಭಾರತದ ಮುಖ್ಯ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರ ಮತ್ತು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಅವರು ಓಟಗಾರರ ಮನೋಬಲವನ್ನು ಹೆಚ್ಚಿಸಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಅಬ್ಬರಿಸಿ ವಿಕೆಟ್​ ಕೊಟ್ಟ ರೋಹಿತ್​.. ಬರ್ತ್​​ ಡೇ ಬಾಯ್​ ವಿರಾಟ್​​ ಆಸರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.