ಹ್ಯಾಂಗ್‌ಝೌ (ಚೀನಾ): ಡೇವಿಸ್ ಕಪ್ ವರ್ಲ್ಡ್ ಗ್ರೂಪ್ II ಅನ್ನು ಗೆದ್ದಿದ್ದ ಭಾರತದ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಗೆಲ್ಲುವ ಫೇವ್ರೇಟ್ ಆಗಿದ್ದರು. ಆದರೆ ಇಂದು ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕೆಳ ಶ್ರೇಯಾಂಕದ ಉಜ್ಬೇಕಿಸ್ತಾನ್‌ನ ಸೆರ್ಗೆ ಫೋಮಿನ್ ಮತ್ತು ಖುಮೊಯುನ್ ಸುಲ್ತಾನೊವ್ ಅವರಿಂದ ಸೋಲು ಕಂಡು ಮಿನಿ ಒಲಂಪಿಕ್ಸ್ನಿಂದ ಹೊರಬರಬೇಕಾಯಿತು.
ಭಾರತದ ಈ ಜೋಡಿ ಗೆಲುವಿನ ಫೇವ್ರೆಟ್ ಆಗಲು ಪ್ರಮುಖ ಕಾರಣ ಅವರ ಶ್ರೇಯಾಂಕ. ಬೋಪಣ್ಣ ಡಬಲ್ಸ್‌ನಲ್ಲಿ ಟಾಪ್-10 ಆಟಗಾರನಾಗಿದ್ದರೆ, ಭಾಂಬ್ರಿ ಕೂಡ ಅಗ್ರ-100ರೊಳಗೆ ಸ್ಥಾನ ಪಡೆದಿದ್ದಾರೆ. ಉಜ್ಬೇಕಿಸ್ತಾನ್‌ನ ಜೋಡಿ ಶ್ರೇಯಾಂಕದಲ್ಲಿ 300ರ ಶ್ರೇಯಾಂಕಿದಿಂದಲೂ ಕೆಳ ಸ್ಥಾನದಲ್ಲಿದ್ದಾರೆ. ಆದರೆ ಬೋಪಣ್ಣ ಮತ್ತು ಭಾಂಬ್ರಿ ವಿರುದ್ಧ ಉಜ್ಬೇಕಿಸ್ತಾನ್‌ನ ಜೋಡಿ 2-6, 6-3 (10-6) ರಿಂದ ಗೆದ್ದರು. ಮೊದಲ ಸುತ್ತಿನಲ್ಲಿ ಭಾರತದ ಜೋಡಿ ಮುನ್ನಡೆ ಸಾಧಿಸಿದರೆ, ಎರಡನೇ ಮತ್ತು ಟೈ ಬ್ರೇಕರ್‌ನಲ್ಲಿ ಉಜ್ಬೇಕಿಸ್ತಾನ್‌ನದ ಆಟಗಾರರ ಪ್ರಾಬಲ್ಯ ಮೆರೆದರು.
ಸುಲ್ತಾನೋವ್ ಅವರು ಮೊದಲಿನಿಂದಲೂ ಉತ್ತಮವಾದ ಸರ್ವ್‌ಗಳನ್ನು ಮಾಡಿಕೊಂಡು ಬಂದರು. ಮೂರು ಸೆಟ್ನಲ್ಲಿ ಅವರೇ ಸರ್ವ್ ಅನ್ನು ಮಾಡಿದರು. ಯಾವುದೇ ಸರ್ವ್ ಪಾಯಿಂಟ್ ಬಿಟ್ಟುಕೊಡಲಿಲ್ಲ. ಸೂಪರ್-ಟೈ ಬ್ರೇಕರ್‌ನಲ್ಲಿ ಉಜ್ಬೆಕಿಸ್ 3-0 ಮುನ್ನಡೆ ಸಾಧಿಸಿತು ಮತ್ತು ಭಾರತ 1 ಅಂಕ ಪಡೆಯುವಷ್ಟರಲ್ಲಿ 5ಕ್ಕೆ ಏರಿಕೆ ಕಂಡಿದ್ದರು. ಟೈಬ್ರೇಕರ್ನಲ್ಲಿ ಸತತ ಅಂಕ ಕಲೆಹಾಕಿದ ಉಜ್ಬೇಕಿಸ್ತಾನ್‌ನ ಜೋಡಿ 10-6 ರಿಂದ ಸೆಟ್ ಗೆದ್ದು ಸ್ಪರ್ದೆಯ ಮುಂದಿನ ಹಂತಕ್ಕೆ ಪ್ರವೇಶಿಸಿದರು.
43ರ ಹರೆಯದ ಬೋಪಣ್ಣ ಕೊನೆಯ ಏಷ್ಯನ್ ಗೇಮ್ಸ್ ಆಡುತ್ತಿದ್ದಾರೆ. ಅವರು 2018 ರ ಆವೃತ್ತಿಯಲ್ಲಿ ದಿವಿಜ್ ಶರಣ್ ಅವರೊಂದಿಗೆ ಚಿನ್ನ ಗೆದ್ದಿದ್ದರು. ಬೋಪಣ್ಣ ಮತ್ತು ಭಾಂಬ್ರಿ ಇಬ್ಬರೂ ಈಗ ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಭಾಂಬ್ರಿ ಮತ್ತು ಅಂಕಿತಾ ರೈನಾ ಅಗ್ರ ಶ್ರೇಯಾಂಕದಲ್ಲಿದ್ದರೆ, ಬೋಪಣ್ಣ ಮತ್ತು ಭೋಸಲೆ ಎರಡನೇ ಶ್ರೇಯಾಂಕದಲ್ಲಿದ್ದಾರೆ. ಬೋಪಣ್ಣ ಕಳೆದ ವಾರ ಲಕ್ನೋದಲ್ಲಿ ಮೊರಾಕೊ ವಿರುದ್ಧ ಆಡುವ ಮೂಲಕ ತಮ್ಮ ಡೇವಿಸ್ ಕಪ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದರು.
ದಿನದ ಆರಂಭದಲ್ಲಿ ಭಾರತದ ಅಗ್ರ ಸಿಂಗಲ್ಸ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಶುಭಾರಂಭ ಮಾಡಿದರು, ಆದರೆ ಭೋಸಲೆ ಕೆಳ ಶ್ರೇಯಾಂಕದ ಅರುಜಾನ್ ಸಾಗಂಡಿಕೋವಾ ಅವರನ್ನು ಮಹಿಳೆಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತೆರಳಲು ಹೆಣಗಾಡಿದರು. ರೈನಾ ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಒಂದೇ ಒಂದು ಪಂದ್ಯವನ್ನು ಕಳೆದುಕೊಳ್ಳಲಿಲ್ಲ ಮತ್ತು ಉಜ್ಬೇಕಿಸ್ತಾನ್‌ನ 17 ವರ್ಷದ ಸಬ್ರಿನಾ ಒಲಿಮ್ಜೊನೊವಾ ಅವರನ್ನು 6-0, 6-0 ಅಂತರದಿಂದ ಕಳುಹಿಸಲು ಕೇವಲ 51 ನಿಮಿಷಗಳ ಅಗತ್ಯವಿದೆ. ಸಿಂಗಲ್ಸ್‌ನಲ್ಲಿ 198 ನೇ ಶ್ರೇಯಾಂಕ ಮತ್ತು 2018 ರ ಆವೃತ್ತಿಯಿಂದ ಕಂಚಿನ ಪದಕ ವಿಜೇತೆ ಮೂರನೇ ಶ್ರೇಯಾಂಕದ ರೈನಾ ಎಂಟರ ಹಂತಕ್ಕೆರುವ ಸ್ಪರ್ಧೆಯಲ್ಲಿ ಹಾಂಗ್ ಕಾಂಗ್‌ನ ಆದಿತ್ಯ ಪಿ ಕರುಣರತ್ನ ಅವರೊಂದಿಗೆ ಸೆಣಸಲಿದ್ದಾರೆ.
ಇದನ್ನೂ ಓದಿ: Caribbean Premier League 2023: ಚೊಚ್ಚಲ ಪ್ರಶಸ್ತಿ ಗೆದ್ದ ಗಯಾನಾ ವಾರಿಯರ್ಸ್..