ಪ್ಯಾರಿಸ್(ಫ್ರಾನ್ಸ್): ಚಾಂಪಿಯನ್ ಲೀಗ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಸ್ಪಾನಿಷ್ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ ಲಿವರ್‌ಪೂಲ್ ಅನ್ನು ಮಣಿಸಿತು. ಈ ಮೂಲಕ ದಾಖಲೆಯ 14ನೇ ಬಾರಿಗೆ ಈ ತಂಡ ಯುರೋಪಿಯನ್ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿತು. ಪ್ಯಾರಿಸ್ ನಗರಿಯ ಸ್ಟೇಡೆ ಡೇ ಪ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯು 1:0 ಗೋಲುಗಳಲ್ಲಿ ಅಂತ್ಯ ಕಂಡಿತು. ಪಂದ್ಯದ 59ನೇ ನಿಮಿಷದಲ್ಲಿ ರಿಯಲ್ ಮ್ಯಾಡ್ರಿಡ್‌ನ ಬ್ರೆಜಿಲ್ ಆಟಗಾರ ವಿಂಗರ್ ವಿನ್ಸಿಯಸ್ ಜೂನಿಯರ್ ಏಕೈಕ ಗೋಲು ಬಾರಿಸಿದರು.
-
Nice to see you again 🏆 pic.twitter.com/kl0adlP3xH
— Luka Modrić (@lukamodric10) May 28, 2022 " class="align-text-top noRightClick twitterSection" data="
">Nice to see you again 🏆 pic.twitter.com/kl0adlP3xH
— Luka Modrić (@lukamodric10) May 28, 2022Nice to see you again 🏆 pic.twitter.com/kl0adlP3xH
— Luka Modrić (@lukamodric10) May 28, 2022
ಇಲ್ಲಿಯವರೆಗೆ ನಡೆದ ನಾಲ್ಕು ಚಾಂಪಿಯನ್ ಲೀಗ್ ಜಯಭೇರಿಯೊಂದಿಗೆ ಇಟಾಲಿಯನ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಟೂರ್ನಿಯ ಇಲಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡದ ವ್ಯವಸ್ಥಾಪಕರಾಗಿ ಹೊರಹೊಮ್ಮಿದರು. ಈ ಮೂಲಕ ರಿಯಲ್ ಮ್ಯಾಡ್ರಿಡ್ 17ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಲಿವರ್ ಪೂಲ್ ತಂಡವನ್ನು 3ನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಿ ಯಶ ಸಾಧಿಸಿತು.
2018ರಲ್ಲಿ ನಡೆದ ಚಾಂಪಿಯನ್ ಲೀಗ್ ಫೈನಲ್‌ನಲ್ಲಿ ಇದೇ ಎರಡು ತಂಡಗಳು ಫೈನಲ್‌ನಲ್ಲಿ ಎದುರಾಳಿಗಳಾಗಿ ಹೋರಾಡಿದ್ದು, ರಿಯಲ್ ಮ್ಯಾಡ್ರಿಡ್ ರೋಚಕ ಗೆಲುವು ದಾಖಲಿಸಿತ್ತು. ರಿಯಲ್ ಮ್ಯಾಡ್ರಿಡ್ ಇತ್ತೀಚೆಗೆ 35ನೇ 'ಲಾಲಿಗಾ ಟ್ರೋಫಿ' ಗೆದ್ದ ಬಳಿಕ ಇದೀಗ ಪ್ರತಿಷ್ಟಿತ ಚಾಂಪಿಯನ್ ಟ್ರೋಫಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇದನ್ನೂ ಓದಿ: ಮಹಿಳಾ ಟಿ20 ಚಾಲೆಂಜ್: ಸೂಪರ್‌ನೋವಾಸ್ ಚಾಂಪಿಯನ್; ವೆಲಾಸಿಟಿ ವಿರುದ್ಧ 4 ರನ್ ರೋಚಕ ಗೆಲುವು