ಮುಂಬೈ: ಬ್ಯಾಡ್ಮಿಂಟನ್ ಚಾಂಪಿಯನ್ ಪಿ ವಿ ಸಿಂಧು ಅವರು 2016ರ ಸಮ್ಮರ್ ಒಲಿಂಪಿಕ್ಸ್‌ನಲ್ಲಿ (ರಿಯೊ) ಬೆಳ್ಳಿ ಪದಕ ಗೆದ್ದಾಗ ಲೆಜೆಂಡ್ರಿ ಬ್ಯಾಟ್ಸ್ಮನ್ ಸಚಿನ್ ತಂಡೂಲ್ಕರ್ ಕಾರು ಉಡುಗೊರೆಯಾಗಿ ನೀಡಿ, ತಮ್ಮ ಗೆಲುವಿಗೆ ಸಚಿನ್ ಅವರು ಕರೆ ಮಾಡಿ ಅಭಿನಂದಿಸಿದ ರೀತಿಯನ್ನು ಈ ವಾರಾಂತ್ಯದಲ್ಲಿ ಪ್ರಸಾರವಾಗಲಿರುವ ಕಪಿಲ್ ಶರ್ಮಾ ಶೋನಲ್ಲಿ ನೆನಪಿಸಿಕೊಂಡಿದ್ದಾರೆ.
'ಅವರು ನನಗೆ ಕರೆ ಮಾಡಿ ಅಭಿನಂದಿಸಿದರು. ನನಗೆ ನೆನಪಿದೆ, 2014ರಲ್ಲಿ ಮೊದಲ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾನು ಭಾಗವಹಿಸಿದ್ದಾಗ, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಮತ್ತೊಮ್ಮೆ ಕಾರು ಉಡುಗೊರೆಯಾಗಿ ನೀಡುತ್ತೇನೆ ಎಂದಿದ್ದರು. ಆದ್ದರಿಂದ ಪದಗ ಗೆದ್ದಾಗ ಬಂದು ನನಗೆ ಕಾರು ಉಡುಗೊರೆಯಾಗಿ ನೀಡಿದರು. ಆ ಗೆಸ್ಚರ್ ನಿಜವಾಗಿಯೂ ನನಗೆ ಸಂತೋಷವನ್ನು ಉಂಟುಮಾಡಿದ್ದರಿಂದ ನಾನು ಅವರಿಗೆ ನಿಜವಾಗಿಯೂ ಕೃತಜ್ಞಳಾಗಿದ್ದೇನೆ' ಎಂದಿದ್ದಾರೆ.
ಸಚಿನ್ ಅವರು ಕ್ರೀಡಾಳುಗಳಿಗೆ ನೀಡುವ ಬೆಂಬಲ ಶ್ಲಾಘನೀಯ. ಅವರು ಬಹಳಷ್ಟು ಕ್ರೀಡಾಪಟುಗಳನ್ನು ಬೆಂಬಲಿಸಿದ್ದಾರೆ. ಈ ರೀತಿಯ ಬೆಂಬಲ ಕ್ರೀಡಾ ವ್ಯಕ್ತಿಗಳಿಗೆ ಬೇಕು. ಇದರಿಂದ ಅವರು ಇನ್ನೂ ಮುಂದೆ ಹೋಗಲು ಮತ್ತು ಉತ್ತಮ ಸಾಧನೆಗೆ ಪ್ರೇರಣೆಯಾಗುತ್ತದೆ. ಈ ರೀತಿಯ ಪ್ರಶಸ್ತಿಗಳು ಮತ್ತು ಬಹುಮಾನಗಳು ಎಲ್ಲ ಕ್ರೀಡಾಪಟುಗಳಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡುತ್ತದೆ. ನಾನು ನಿಜವಾಗಿಯೂ ಕಾರುಗಳನ್ನು ಇಷ್ಟಪಡುತ್ತೇನೆ ಮತ್ತು ಅವರು ನನಗೆ ಕಾರನ್ನು ಕೊಟ್ಟಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.
ಕಪಿಲ್ ಶರ್ಮಾ ಅವರೊಂದಿಗಿನ ಸಂಭಾಷಣೆಯಲ್ಲಿ, ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಗಾಯಗೊಂಡ ಬಗ್ಗೆ ಹಂಚಿಕೊಂಡಿದ್ದಾರೆ. ಪಿ.ವಿ. ಸಿಂಧು, ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್, ಲಾನ್ ಬೌಲ್ ತಂಡ - ರೂಪಾ ರಾಣಿ ಟಿರ್ಕಿ, ಲವ್ಲಿ ಚೌಬೆ, ಪಿಂಕಿ ಸಿಂಗ್ ಮತ್ತು ನಯನ್ಮೋನಿ ಸೈಕಿಯಾ ಈ ವಾರಾಂತ್ಯದಲ್ಲಿ 'ದಿ ಕಪಿಲ್ ಶರ್ಮಾ ಶೋ' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ ಕ್ರೀಡಾಪಟುಗಳಿಗೆ ರಾಜೌತಣ.. ಕ್ಯಾಪ್ಟನ್ ಆತಿಥ್ಯಕ್ಕೆ ಶರಣೆಂದ ಚೋಪ್ರಾ