ETV Bharat / sports

Syed Modi International: ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಪಿವಿ ಸಿಂಧು, ಪ್ರಣಯ್ - ಕ್ವಾರ್ಟರ್ ಫೈನಲ್ಸ್​ ಪ್ರವೇಶಿಸಿದ ಪಿವಿ ಸಿಂಧು

ಗುರುವಾರ ನಡೆದ ಪಂದ್ಯದಲ್ಲಿ ಟೂರ್ನಮೆಂಟ್​​ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಲಾರೆನ್ ಲ್ಯಾಮ್ ವಿರುದ್ಧ 21-16, 21-13ರ ಅಂತರದಲ್ಲಿ ಕೇವಲ 33 ನಿಮಿಷಗಳಲ್ಲೇ ಪಂದ್ಯವನ್ನು ಗೆದ್ದುಕೊಂಡರು.

Syed Modi International
ಸೈಯದ್ ಮೋದಿ ಇಂಟರ್​ನ್ಯಾಷನಲ್​ ಸೂಪರ್ 300
author img

By

Published : Jan 20, 2022, 6:22 PM IST

ನವದೆಹಲಿ: ಭಾರತದ ಖ್ಯಾತ ಶಟ್ಲರ್​ ಪಿವಿ ಸಿಂಧು ಸೈಯದ್ ಮೋದಿ ಇಂಟರ್​ನ್ಯಾಷನಲ್​ ಸೂಪರ್ 300 ಟೂರ್ನಮೆಂಟ್​​ನಲ್ಲಿ ಕ್ವಾರ್ಟರ್​ ಫೈನಲ್ಸ್​ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ ವಿಭಾಗದಲ್ಲಿ ಹೆಚ್​ಎಸ್​ ಪ್ರಣಯ್ 8ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಟೂರ್ನಮೆಂಟ್​​ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಲಾರೆನ್ ಲ್ಯಾಮ್ ವಿರುದ್ಧ 21-16, 21-13ರ ಅಂತರದಲ್ಲಿ ಕೇವಲ 33 ನಿಮಿಷಗಳಲ್ಲೇ ಪಂದ್ಯವನ್ನು ಗೆದ್ದುಕೊಂಡರು.

ಮಾಜಿ ವಿಶ್ವಚಾಂಪಿಯನ್​ ಸಿಂಧು 8ರ ಘಟ್ಟದ ಪಂದ್ಯದಲ್ಲಿ 6ನೇ ಶ್ರೇಯಾಂಕದ ಥಾಯ್ ಶಟ್ಲರ್​ ಸುಪನಿಡಾ ಕೆಟೆಥಾಂಗ್ ವಿರುದ್ಧ ಸೆಣಸಾಡಲಿದ್ದಾರೆ. ಇದೇ ಆಟಗಾರ್ತಿಯ ವಿರುದ್ಧ ಇಂಡಿಯಾ ಓಪನ್​ ಸೆಮಿಫೈನಲ್ಸ್​ನಲ್ಲಿ ಸೋಲು ಕಂಡಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮಹಿಳೆಯರ ಇತರೆ ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಿ 21-9, 21-6ರಲ್ಲಿ ಸಾಯಿ ಉತ್ತೇಜಿತ ರಾವ್​ರನ್ನು, ಸಮಿಯಾ ಇಮಾದ್ ಫಾರೂಕಿ 21-6, 21-15ರಲ್ಲಿ ಕನಿಕಾ ಕನ್ವಾಲ್​ರನ್ನು, ಮಾಳವಿಕಾ 21-10, 21-8ರಲ್ಲಿ ಪ್ರೇರಣಾರನ್ನು ಮಣಿಸಿದರು.

5ನೇ ಶ್ರೇಯಾಂಕ ಪಡೆದುಕೊಂಡಿರುವ ಪ್ರಣಯ್​ ಭಾರತದವರೇ ಆದ ಪ್ರಿಯಾನ್ಶು ರಾಜಾವತ್​ ವಿರುದ್ಧ 21-11, 16-21, 21-18ರ ರೋಚಕ ಕದನದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ಗೆ ಎಂಟ್ರಿಕೊಟ್ಟರು. ಮುಂದಿನ ಸುತ್ತಿನಲ್ಲಿ ಭಾರತದ ಕಾರ್ತಿಕೇಯಾ ಗುಲ್ಶಾನ್ ಕುಮಾರ್​ರನ್ನು ಮಣಿಸಿರುವ ಫ್ರಾನ್ಸ್​ನ ಅರ್ನಾಡ್ ಮೆರ್ಕಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ:ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ರೋಹಿತ್, ಪಂತ್, ಅಶ್ವಿನ್​ಗೆ ಸ್ಥಾನ... ವಿಲಿಯಮ್ಸನ್​ ನಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.