ಬೆಂಗಳೂರು: ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಸಂಪೂರ್ಣ ಡಮ್ಮಿ ತಂಡ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ಅಂಕಪಟ್ಟಿಯಲ್ಲಿ ತಳಭಾಗದಲ್ಲಿರುವ ಪುಣೇರಿ ಪಲ್ಟನ್ ವಿರುದ್ಧ ಹೀನಾಯ ಸೋಲು ಕಂಡಿದೆ.
ಸೋಮವಾರ ನಡೆದ ಪಂದ್ಯದಲ್ಲಿ ರೈಡಿಂಗ್ ಮತ್ತು ಡಿಫೆಂಡಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಪಲ್ಟನ್ಸ್ 42-25ರ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ದಬಾಂಗ್ ಡೆಲ್ಲಿಯನ್ನು 3 ಬಾರಿ ಆಲೌಟ್ ಮಾಡುವ ಮೂಲಕ ಪ್ರಾಬಲ್ಯ ಸಾಧಿಸಿತು. ರೈಡಿಂಗ್ನಲ್ಲಿ 21 ಅಂಕ ಪಡೆದರೆ, ಡಿಫೆಂಡಿಂಗ್ನಲ್ಲಿ 13 ಅಂಕ ಗಳಿಸಿದರು.
ಆದರೆ ಡೆಲ್ಲಿ ಮಂಜಿತ್ ಚಿಲ್ಲರ್, ಸಂದಿಪ್ ನರ್ವಾಲ್ ಅಂತಹ ಬಲಿಷ್ಠ ಪಡೆ ಹೊಂದಿದ್ದರೂ ಕೇವಲ 4 ಟ್ಯಾಕಲ್ ಅಂಕ ಪಡೆದು ನೀರಸ ಪ್ರದರ್ಶನ ತೋರಿತು. ಪುಣೆ ಪರ ಮೋಹಿತ್ ಗೋಯಟ್ 10, ಅಸ್ಲಾಮ್ ಇನಾಮ್ದರ್ 8, ನಿತಿನ್ ತೋಮರ್ 6, ಸೋಮ್ಬೀರ್ 6 ಅಂಕ ಪಡೆದು ಗೆಲುವಿನ ರೂವಾರಿಯಾದರು.
-
Paltan's motto: Keep calm and believe in Mohit-Aslam! 😎
— ProKabaddi (@ProKabaddi) January 24, 2022 " class="align-text-top noRightClick twitterSection" data="
Puneri Paltan have the last laugh as they get the better of @DabangDelhiKC with an emphatic win 💯#PUNDEL #SuperhitPanga #VIVOProKabaddi @PuneriPaltan pic.twitter.com/KDFvlhvdBW
">Paltan's motto: Keep calm and believe in Mohit-Aslam! 😎
— ProKabaddi (@ProKabaddi) January 24, 2022
Puneri Paltan have the last laugh as they get the better of @DabangDelhiKC with an emphatic win 💯#PUNDEL #SuperhitPanga #VIVOProKabaddi @PuneriPaltan pic.twitter.com/KDFvlhvdBWPaltan's motto: Keep calm and believe in Mohit-Aslam! 😎
— ProKabaddi (@ProKabaddi) January 24, 2022
Puneri Paltan have the last laugh as they get the better of @DabangDelhiKC with an emphatic win 💯#PUNDEL #SuperhitPanga #VIVOProKabaddi @PuneriPaltan pic.twitter.com/KDFvlhvdBW
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಕೂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 41-22ರ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ 13, ಇಸ್ಮಾಯಿಲ್ ನಬೀಭಕ್ಷ್ 6, ಸುಕೇಶ್ ಹೆಗ್ಡೆ 4, ರನ್ ಸಿಂಗ್ 4 ಅಂಕ ಪಡೆದರು. ಬೆಂಗಾಲ್ ವಾರಿಯರ್ಸ್ 24 ರೈಡಿಂಗ್ ಅಂಕ ಪಡೆದರೆ, 10 ಟ್ಯಾಕಲ್ ಮತ್ತು 6 ಆಲೌಟ್ ಅಂಕ ಪಡೆಯಿತು. ಇತ್ತ ಜೈಪುರ ತಂಡದಲ್ಲಿ ಅರ್ಜುನ್ ದೇಶ್ವಾಲ್ ಏಕಾಂಗಿ ಹೋರಾಟ ಇಂದಿನ ಪಂದ್ಯದಲ್ಲೂ ಮುಂದುವರೆಯಿತು. ಅರ್ಜುನ್ 10 ಅಂಕ ಪಡೆದರೆ, ಅಮಿತ್ 6 ಅಂಕ ಪಡೆದರು. ವಿಶಾಲ್ ಮತ್ತು ಸಂದೀಪ್ ತಲಾ 2 ಟ್ಯಾಕಲ್ ಅಂಕ ಸಂಪಾದಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ