ETV Bharat / sports

ಕೊರೊನಾ ವಿರುದ್ಧದ ಹೋರಾಟಕ್ಕೆ ಗೋಪಿಚಂದ್ ₹26 ಲಕ್ಷ, ಪಂಕಜ್​ ಅಡ್ವಾಣಿ ₹5 ಲಕ್ಷ ದೇಣಿಗೆ - corona lock down

ಮಾರಣಾಂತಿಕ ವೈರಸ್​ ತಡೆಗೆ ಕ್ರೀಡಾ ಕ್ಷೇತ್ರದ ದಿಗ್ಗಜರು ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಪಠಾಣ್​ ಬ್ರದರ್ಸ್​, ಹರ್ಭಜನ್​ ಸಿಂಗ್​ ಕೂಡ ಕೆಲ ಬಡಜನರಿಗೆ ಆಹಾರ ಪೂರೈಸಿದ್ದರು.

ಕೊರೊನಾ ವಿರುದ್ಧ ಹೋರಾಟಕ್ಕೆ ಗೋಪಿಚಂದ್ ದೇಣಿಗೆ

author img

By

Published : Apr 7, 2020, 9:40 AM IST

ಮುಂಬೈ : ದೇಶಾದ್ಯಂತ ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಸಿನಿಮಾ ನಟರು, ಬ್ಯುಸಿನೆಸ್‌ಮೆನ್​ಗಳು, ಕ್ರೀಡಾಪಟುಗಳು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಆ ಸಾಲಿಗೆ ಭಾರತ ಬ್ಯಾಡ್ಮಿಂಟನ್​ನ ಮುಖ್ಯ ಕೋಚ್​ ಪುಲ್ಲೇಲು ಗೋಪಿಚಂದ್​ ಕೂಡ ಸೇರಿಕೊಂಡಿದ್ದಾರೆ.

ಈಗಾಗಲೇ ಭಾರತ ಕ್ರಿಕೆಟ್​ ತಂಡದ ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳು ದೇಣಿಗೆ ನೀಡಿ ಮಾನವೀಯತೆ ತೋರಿದ್ದರು. ಇದೀಗ ಬ್ಯಾಡ್ಮಿಂಟನ್​ ದಿಗ್ಗಜ ಪುಲ್ಲೇಲು ಗೋಪಿಚಂದ್​ ₹25 ಲಕ್ಷ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಗೋಪಿಚಂದ್​ ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹15 ಲಕ್ಷ, ತೆಲಂಗಾಣ ಹಾಗೂ ಆಂಧ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹5 ಲಕ್ಷ ಸೇರಿದಂತೆ ಒಟ್ಟು 26 ಲಕ್ಷ ದೇಣಿಗೆ ನೀಡಿದ್ದಾರೆ.

ಸ್ನೂಕರ್​ ಚಾಂಪಿಯನ್​ ಕನ್ನಡಿಗ ಪಂಕಜ್​ ಅಡ್ವಾಣಿ ಹಾಗೂ ಹಾಕಿ ಆಟಗಾರ ಧನರಾಜ್​ ಪಿಳ್ಳೆ ಕೂಡ ಪ್ರಧಾನಮಂತ್ರಿ ಪರಿಹಾರ ನಿಧಿಗೆ ತಲಾ ₹5 ಲಕ್ಷ ದೇಣಿಗೆ ನೀಡಿದ್ದಾರೆ. ಐ-ಲೀಗ್​ನ ಫುಟ್​ಬಾಲ್​ ಕ್ಲಬ್​ ಮಿನೆರ್ವ್‌ ಪಂಜಾಬ್,​ ಪ್ರಧಾನಿ ಪರಿಹಾರ ನಿಧಿಗೆ 2 ಲಕ್ಷ ಹಾಗೂ ಪಂಜಾಬ್​, ಚಂಡೀಗಢ್​, ಹರಿಯಾಣ ಸರ್ಕಾರಕ್ಕೆ ತಲಾ ಒಂದು ಲಕ್ಷ ದೇಣಿಗೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.