ETV Bharat / sports

ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ ಆರ್ಭಟಕ್ಕೆ ಮಣಿದ ತಮಿಳು ತಲೈವಾಸ್‌ - ಪ್ರೋ ಕಬಡ್ಡಿ 2022

ಭರತ್‌ ಸೂಪರ್‌ ಟೆನ್‌ ಹಾಗೂ ವಿಕಾಶ್‌ ಕಂಡೋಲ ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ತಮಿಳು ತಲೈವಾಸ್‌ ವಿರುದ್ಧ ಭರ್ಜರಿ ಜಯ ಗಳಿಸಿದೆ.

pro-kabaddi-league-tamil-thalaivas-surrender-to-bengaluru-bulls
ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ ಆರ್ಭಟಕ್ಕೆ ಮಣಿದ ತಮಿಳು ತಲೈವಾಸ್‌
author img

By

Published : Oct 20, 2022, 11:13 AM IST

ಬೆಂಗಳೂರು: ಪ್ರೋ ಕಬಡ್ಡಿ ಲೀಗ್​ನಲ್ಲಿ ಆಲ್​ರೌಂಡ್​​ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ಮನೆಯಂಗಣದಲ್ಲಿ ತಮಿಳು ತಲೈವಾಸ್‌ ವಿರುದ್ಧ 45-28 ಅಂತರದಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ. ಭರತ್‌ ಸೂಪರ್‌ ಟೆನ್‌ (12) ಹಾಗೂ ವಿಕಾಶ್‌ ಕಂಡೋಲ (7) ಅದ್ಭುತ ರೈಡಿಂಗ್‌ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ತಮಿಳು ತಲೈವಾಸ್‌ ವಿರುದ್ಧ ಜಯ ಗಳಿಸಿದೆ. ನಾಯಕ ಮಹೇಂದರ್‌ ಸಿಂಗ್‌ ಮತ್ತು ಸೌರಭ್‌ ನಂದಾಲ್‌ ಟ್ಯಾಕಲ್‌ನಲ್ಲಿ ತಲಾ 3 ಅಂಕ ಪಡೆದು ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ತಮಿಳು ತಲೈವಾಸ್‌ ತಂಡವು ಸ್ಟಾರ್​ ಆಟಗಾರ ಪವನ್‌ ಶೆರಾವತ್‌ ಅನುಪಸ್ಥಿತಿಯಲ್ಲಿ ಮತ್ತೊಂದು ಪಂದ್ಯ ಸೋತಿದೆ. ತಂಡದ ಪರ ನರೇಂದರ್‌ ರೈಡಿಂಗ್‌ನಲ್ಲಿ ಸೂಪರ್‌ ಟೆನ್‌ ಸಾಧನೆ ಮಾಡಿದರೂ ಸೋಲಿನಿಂದ ಪಾರು ಮಾಡಲಾಗಲಿಲ್ಲ.

pro-kabaddi-league-tamil-thalaivas-surrender-to-bengaluru-bulls
ಬೆಂಗಳೂರು ಬುಲ್ಸ್‌ - ತಮಿಳು ತಲೈವಾಸ್‌ ಪಂದ್ಯ

ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ: ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ತಂಡ ತಮಿಳು ತಲೈವಾಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 18-12 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ತಮಿಳು ತಲೈವಾಸ್‌ ಆರಂಭದಲ್ಲಿ ಬೃಹತ್‌ ಅಂತರದಲ್ಲಿ ಹಿನ್ನಡೆ ಕಂಡರೂ, ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿ ಅಂಕಗಳ ಅಂತರ ಕಡಿಮೆ ಮಾಡಿಕೊಂಡಿತು.

ಬೆಂಗಳೂರು ಬುಲ್ಸ್‌ ಪರ ಭರತ್‌ ಹಾಗೂ ನೀರಜ್‌ ನರ್ವಾಲ್‌ ತಲಾ 5 ರೈಡಿಂಗ್‌ ಅಂಕಗಳನ್ನು ಗಳಿಸಿ ಪ್ರಥಮಾರ್ಧದ ಮುನ್ನಡೆಗೆ ನೆರವಾದರು. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್‌ ತಂಡಕ್ಕೆ ಈ ಮುನ್ನಡೆ ಆತ್ಮವಿಶ್ವಾಸ ಹೆಚ್ಚಿಸಿದೆ.

ತಮಿಳು ತಲೈವಾಸ್‌ ಪರ ನರೆಂದರ್‌ 7 ಅಂಕ ಗಳಿಸಿ ಉತ್ತಮ ಪೈಪೋಟಿ ನೀಡುವಲ್ಲಿ ನೆರವಾದರು. ಟ್ಯಾಕಲ್‌ನಲ್ಲಿ ತಮಿಳು ತಲೈವಾಸ್‌ 4 ಅಂಕ ದೋಚಿತು. ಬೆಂಗಳೂರು ಬುಲ್ಸ್‌ ಆರಂಭದಲ್ಲಿ ತೋರಿದ ಉತ್ಸಹವನ್ನು ಕೊನೆಯ ಕ್ಷಣದವರೆಗೂ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್‌ ಪಡೆಯನ್ನು ಆಲೌಟ್‌ ಮಾಡುವ ಮೂಲಕ ಮುನ್ನಡೆಗೆ ಮತ್ತೆರಡು ಅಂಕ ಗಳಿಸಿತ್ತು.

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್: ಯುಪಿ ಯೋಧಾಸ್‌ ವಿರುದ್ಧ ಗುಜರಾತ್ ಜೈಂಟ್ಸ್​ಗೆ ಭರ್ಜರಿ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.