ETV Bharat / sports

ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್​: 38-36 ಅಂಕಗಳಿಂದ ಮೊದಲ ಗೆಲುವು ಕಂಡ ಬೆಂಗಳೂರು

Pro Kabaddi League: ಪಿಕೆಎಲ್‌ 10ನೇ ಆವೃತ್ತಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋಲುಂಡಿದ್ದ ಬೆಂಗಳೂರು ಬುಲ್ಸ್​ ತಂಡ, ಯುಪಿ ಯೋಧಾಸ್​ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.

ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್​:
ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್​:
author img

By ETV Bharat Karnataka Team

Published : Dec 12, 2023, 10:07 AM IST

ಬೆಂಗಳೂರು: ರೋಚಕತೆ, ಕಠಿಣ ಸವಾಲುಗಳಿಂದ ಕೂಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​​ ತಂಡ 38-36 ಅಂಕಗಳಿಂದ ಯು.ಪಿ. ಯೋಧಾಸ್‌ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿ ತನ್ನ ಮೊದಲ ಜಯ ದಾಖಲಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಕಾಸ್‌ ಕಂಡೋಲಾ ಮತ್ತು ಭರತ್‌ ಇಬ್ಬರೂ ತಲಾ 11 ಅಂಕಗಳನ್ನು ದಾಖಲಿಸಿದರು.

ಪಂದ್ಯದ ಆರಂಭಿಕ ನಾಲ್ಕು ನಿಮಿಷಗಳಲ್ಲಿ ಪರ್ದೀಪ್‌ ನರ್ವಾಲ್‌ ಸೂಪರ್‌ ರೈಡ್‌ ಮಾಡಿ ಯೋಧಾಸ್‌ ತಂಡಕ್ಕೆ 4-1ರ ಮುನ್ನಡೆ ತಂದುಕೊಟ್ಟರು. ಕೆಲವೇ ನಿಮಿಷಗಳಲ್ಲಿ ಬುಲ್ಸ್‌ ಆಲೌಟ್‌ ಆಗುವ ಭೀತಿ ಎದುರಿಸಿತು. ಆದರೆ ಮ್ಯಾಟ್ ನಲ್ಲಿ ಉಳಿದಿದ್ದ ಕೊನೆಯ ಆಟಗಾರ ವಿಕಾಸ್‌ ಕಂಡೋಲಾ ಸೂಪರ್ ರೈಡ್‌ ಮೂಲಕ 2 ಅಂಕ ತಂದರಲ್ಲದೆ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಹಸ ಮಾಡಿದರು.

ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್
ಯುಪಿ ಯೋಧಾಸ್​ಗೆ ಗುದ್ದಿದ ಬುಲ್ಸ್

ಸ್ವಲ್ಪ ಸಮಯದ ನಂತರ ಆಟದ ದಿಕ್ಕು ಬದಲಾಯಿತು. ಮೋನು ಯೋಧಾಸ್ ತಂಡದ ಪರ್ದೀಪ್ ನರ್ವಾಲ್‌ ಅವರನ್ನು ಔಟ್‌ ಮಾಡುವ ಮೂಲಕ ಯೋಧಾಸ್‌ ಪ್ರಾಬಲ್ಯಕ್ಕೆ ತಡೆಯೊಡ್ಡಿದರು. ಕೆಲವೇ ನಿಮಿಷಗಳಲ್ಲಿ ಯೋಧಾಸ್‌ ತಂಡವನ್ನ ಬುಲ್ಸ್‌ ಆಲ್‌ ಔಟ್‌ ಮಾಡುವ ವಿರಾಮದ ವೇಳೆಗೆ ಐದು ಅಂಕಗಳಿಂದ ಮುನ್ನಡೆ ಕಂಡುಕೊಂಡಿತು.

ದ್ವಿತೀಯಾರ್ಧದಲ್ಲಿ ಯೋಧಾಸ್‌ ನಿಧಾನವಾಗಿ ತಮ್ಮ ಲಯವನ್ನು ಮರಳಿ ಪಡೆಯಿತು. ಆದರೆ, ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಬುಲ್ಸ್‌ ದ್ವಿತೀಯಾರ್ಧದಲ್ಲಿ ಎರಡನೇ ಬಾರಿ ಸಹ ಎದುರಾಳಿಯನ್ನು ಕಟ್ಟಿಹಾಕಿ 29- 21ರಲ್ಲಿ ಮುನ್ನಡೆ ಸಾಧಿಸಿತು. ಹೂಡಾ ಅವರ ಸೂಪರ್‌ ರೈಡ್‌ ಬುಲ್ಸ್ ಪಾಳೆಯಕ್ಕೆ ಮತ್ತಷ್ಟು ಲೀಡ್ ನೀಡಿತು.

ಯುಪಿ ಯೋಧಾಸ್​ ತಂಡದ ಪರ್ದಿಪ್​ ನರ್ವಾಲ್​ ರೈಡಿಂಗ್​

ಆಟದ ಕೊನೆಯ ಎರಡು ನಿಮಿಷಗಳಲ್ಲಿ ಯೋಧಾಸ್‌ 40 ಸೆಕೆಂಡ್‌ಗಳು ಬಾಕಿ ಇರುವಾಗ ಬುಲ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಹೋರಾಟವನ್ನು ಜೀವಂತವಾಗಿರಿಸಿತಾದರೂ, ಭರತ್‌ ಚಾಣಾಕ್ಷತನದಿಂದ ಬುಲ್ಸ್‌ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೊದಲ ಗೆಲುವು ಸಾಧಿಸಿತು.

ಜೈಪುರಕ್ಕೆ ಗೆಲುವು: ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ಆಟದ ನೆರವಿನಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಗುಜರಾತ್​ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಮೊದಲಾರ್ಧದ ಅಂತ್ಯಕ್ಕೆ 12-20 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದ ಪಿಂಕ್ ಪ್ಯಾಂಥರ್ಸ್ ದ್ವಿತೀಯಾರ್ಧದಲ್ಲಿ 35-32 ಅಂಕಗಳಿಂದ ಜಯ ಸಾಧಿಸಿತು. ಪಂದ್ಯದಲ್ಲಿ 15 ಅಂಕಗಳನ್ನು ಗಳಿಸಿದ ದೇಶ್ವಾಲ್‌, ಪಿಕೆಎಲ್‌ ನಲ್ಲಿ 700ನೇ ರೈಡ್‌ ಪಾಯಿಂಟ್ಸ್‌ ದಾಖಲಿಸಿದರು.

ಇಂದಿನ ಪಂದ್ಯ: ಬೆಂಗಾಲ್‌ ವಾರಿಯರ್ಸ್‌ V/s ಪಾಟ್ನಾ ಪೈರೇಟ್ಸ್‌ - ರಾತ್ರಿ 8 ಗಂಟೆಗೆ

ಇದನ್ನೂ ಓದಿ: 700ನೇ ರೈಡ್‌ ಪಾಯಿಂಟ್‌ ಕಲೆಹಾಕಿದ ಅರ್ಜುನ್‌ ದೇಶ್ವಾಲ್‌; ಜೈಪುರ ಪಿಂಕ್‌ ಪ್ಯಾಂಥರ್ಸ್​ಗೆ ಮೊದಲ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.