ETV Bharat / sports

Pro Kabaddi League: ಯು ಮುಂಬಾ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆಂಗಳೂರು ಬುಲ್ಸ್​ ಕಾತರ

ತನ್ನ ಕೊನೆ ಪಂದ್ಯದಲ್ಲಿ ಎರಡೂ ತಂಡಗಳು ದುರ್ಬಲ ತೆಲುಗು ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿವೆ. ಆದರೆ ಬೆಂಗಳೂರು ಬುಲ್ಸ್​ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು ಮತ್ತು 5 ಸೋಲು ಕಂಡು 46 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಯು ಮುಂಬಾ 12 ಪಂದ್ಯಗಳಲ್ಲಿ 4 ಗೆಲುವು 3 ಸೋಲು ಮತ್ತು 5 ಟೈ ಸಾಧಿಸಿ 36 ಅಂಕ ಪಡೆದು 7ನೇ ಸ್ಥಾನದಲ್ಲಿದೆ.

Pro Kabaddi League
ಯು ಮುಂಬಾ vs ಬೆಂಗಳೂರು ಬುಲ್ಸ್
author img

By

Published : Jan 26, 2022, 5:28 PM IST

ಬೆಂಗಳೂರು: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 46-30ರ ಹೀನಾಯ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಬೆಂಗಳೂರು ಬುಲ್ಸ್​ ಇಂದು ನಡೆಯುವ ಪಂದ್ಯದಲ್ಲಿ ಮತ್ತೆ ಯು ಮುಂಬಾ ವಿರುದ್ಧ ಕಣಕ್ಕಿಳಿಯುತ್ತಿದೆ.

ತನ್ನ ಕೊನೆ ಪಂದ್ಯದಲ್ಲಿ ಎರಡೂ ತಂಡಗಳು ದುರ್ಬಲ ತೆಲುಗು ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿವೆ. ಆದರೆ ಬೆಂಗಳೂರು ಬುಲ್ಸ್​ ಆಡಿರುವ 14 ಪಂದ್ಯಗಳಲ್ಲಿ 8 ಗೆಲುವು ಮತ್ತು 5 ಸೋಲು ಕಂಡು 46 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಯು ಮುಂಬಾ 12 ಪಂದ್ಯಗಳಲ್ಲಿ 4 ಗೆಲುವು 3 ಸೋಲು ಮತ್ತು 5 ಟೈ ಸಾಧಿಸಿ 36 ಅಂಕ ಪಡೆದು 7ನೇ ಸ್ಥಾನದಲ್ಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಟೂರ್ನಿಯಲ್ಲಿ ಗರಿಷ್ಠ ಅಂಕ ಪಡೆದು ಅದ್ಭುತ ಪ್ರದರ್ಶನ ತೋರುತ್ತಿರುವ ಹೈ ಫ್ಲೈಯರ್ ಪವನ್​ ಶೆರಾವತ್​ ಬೆಂಗಳೂರು ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರಿಗೆ ಯುವ ರೈಡರ್​ ಭರತ್​ ಸಾಥ್​ ನೀಡಲಿದ್ದಾರೆ. ಡಿಫೆಂಡಿಗ್​ನಲ್ಲಿ ಸೌರಭ್ ನಂಡಲ್​, ಮಹೇಂದ್ರ ಸಿಂಗ್, ಅಮನ್​ ಉತ್ತಮ ಫಾರ್ಮ್​ನಲ್ಲಿರುವುದರಿಂದ ಬುಲ್ಸ್​ ಯು ಮುಂಬಾ ವಿರುದ್ಧ ಗೆಲ್ಲಬಹುದಾದ ಸಾಧ್ಯತೆ ಹೆಚ್ಚಿದೆ.

ಇತ್ತ ಸುಲ್ತಾನ್ ಫಜಲ್​ ಅಟ್ರಾಚಲಿ ನೇತೃತ್ವದ ಮುಂಬೈ ತಂಡ ಡಿಫೆಂಡಿಂಗ್​ನಲ್ಲಿ ಬಲಿಷ್ಠವಾಗಿದೆ. ಆದರೆ ರೈಡಿಂಗ್​ನಲ್ಲಿ ಅಭಿಷೇಕ್ ಸಿಂಗ್ ಅವರನ್ನೇ ಹೆಚ್ಚು ಅವಲಂಭಿಸಿದೆ. ಒಂದು ವೇಳೆ ಅಭಿಷೇಕ್​ರನ್ನು ನಿಯಂತ್ರಿಸುವಲ್ಲಿ ಬುಲ್ಸ್​ ಯಶಸ್ವಿಯಾದರೆ ಖಂಡಿತ ಸೇಡು ತೀರಿಸಿಕೊಳ್ಳುವುದಲ್ಲದೆ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:ನಾನು ಕಂಡಂತಹ ತೀಕ್ಷ್ಣಕ್ರಿಕೆಟ್ ಮೈಂಡ್​ ಹೊಂದಿದವರಲ್ಲಿ ಎಂಎಸ್​ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.