ETV Bharat / sports

ಟೈಟಾನ್ಸ್ ವಿರುದ್ಧ ಪವನ್​ ಮಿಂಚು.. ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್​ - ತೆಲುಗು ಟೈಟಾನ್ಸ್

Pro Kabaddi League -2022: ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಜಯ ದಾಖಲಿಸಿದೆ.​

Pro Kabaddi League: Bengaluru Bulls Beat Telugu Titans
ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್​
author img

By

Published : Jan 23, 2022, 10:15 PM IST

ಬೆಂಗಳೂರು: ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ತೆಲುಗು ಟೈಟಾನ್ಸ್ ವಿರುದ್ಧ ಇಂದಿನ ಪಂದ್ಯದಲ್ಲಿ ಬೆಂಗಳೂರು 36-31ರ ಅಂತರದ ಜಯ ದಾಖಲಿಸಿದೆ.

ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿರುವ ಗ್ರ್ಯಾಂಡ್​ ಶೆರಟಾನ್​ ಹೋಟೆಲ್​​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಇಂದು ಪವನ್ ಸೆರಾವತ್ ಪಡೆ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಬುಲ್ಸ್ ಈ ಋತುವಿನ 8ನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 46 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಟೈಟಾನ್ಸ್ 10ನೇ ಸೋಲಿನೊಂದಿಗೆ 12ನೇ ಸ್ಥಾನದಲ್ಲೇ ಉಳಿಕೊಂಡಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮತ್ತೊಮ್ಮೆ ಮಿಂಚಿದ ಬುಲ್ಸ್​ ನಾಯಕ ಪವನ್ ಸೆರಾವತ್ 12 ಅಂಕಗಳೊಂದಿಗೆ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದರೆ, ಭರತ್ ನರೇಶ್ 7, ಸೌರಭ್ ನಂದಲ್, ಅಮನ್ ತಲಾ 4 ಅಂಕ ಕಬಳಿಸಿದರು. ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 7 ಅಂಕ, ರಾಕೇಶ್ ಗೌಡ ಮತ್ತು ಆಕಾಶ್ ಚೌಧರಿ 5 ಅಂಕಗಳೊಂದಿಗೆ ತೀವ್ರ ಹೋರಾಟ ನಡೆಸಿದರೂ ಪಂದ್ಯ ಗೆಲ್ಲಲಾಗಲಿಲ್ಲ.

ಈ ಹಿಂದಿನ ಸತತ ಮೂರು ಪಂದ್ಯಗಳಲ್ಲಿ ಬುಲ್ಸ್​ ತಂಡವು ಪಾಟ್ನಾ ಪೈರಟ್ಸ್,​ ಬೆಂಗಾಲ್​ ವಾರಿಯರ್ಸ್ ಹಾಗೂ​​ ಪುಣೆರಿ ಪಲ್ಟಾನ್ಸ್​ ವಿರುದ್ಧ ಸೋಲು ಅನುಭವಿಸಿ ನಿರಾಸೆ ಹೊಂದಿತ್ತು.

ಇದನ್ನೂ ಓದಿ: ರಾಜ್ಯದಲ್ಲಿಂದು 50,210 ಕೊರೊನಾ ಪಾಸಿಟಿವ್.. 165 ಜನರಿಗೆ ವಕ್ಕರಿಸಿದ ಒಮಿಕ್ರಾನ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.