ವಾರ್ಸಾ (ಪೊಲೆಂಡ್): ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್ ರ್ಯಾಂಕಿಂಗ್ ಸಿರೀಸ್ನಲ್ಲಿ ಉಕ್ರೇನ್ ಕ್ರಿಸ್ಟಿಯಾನ ಬ್ರೀಜಾ ಅವರನ್ನು 8-0ಯಲ್ಲಿ ಮಣಿಸುವ ಮೂಲಕ ಭಾರತದ ಒಲಿಂಪಿಕ್ ಬೌಂಡ್ ಕುಸ್ತಿ ಪಟು ವಿನೇಶ್ ಫೋಗಟ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಒಲಿಂಪಿಕ್ ಕ್ರೀಡಾಕೂಡಕ್ಕೆ 50 ದಿನಗಳಿಗೂ ಕಡಿಮೆಯಿದೆ, ಆದರೆ ಪೋಗಟ್ (53 ಕೆಜಿ) ಡಿಫೆನ್ಸ್ ಮತ್ತು ಸ್ವಿಫ್ಟ್ನಲ್ಲಿ ತುಂಬಾ ಬಲಿಷ್ಠರಾಗಿ ಕಾಣಿಸುತ್ತಿದ್ದಾರೆ. ಶುಕ್ರವಾರ ನಡೆದ ಫೈನಲ್ನಲ್ಲಿ ಬ್ರೀಜಾ ಅವರನ್ನು 8-0 ಅಂಕಗಳ ಅಂತರದಿಂದ ಸುಲಭವಾಗಿ ಮಣಿಸಿ ಜುಲೈ 23 ರಿಂದ ಆಗಸ್ಟ್ 8ರವರೆಗೆ ನಡೆಯುವ ಟೋಕಿಯೋ ಒಲಿಂಪಿಕ್ಸ್ಗೆ ಭರ್ಜರಿಯಾಗಿ ತಯಾರಾಗಿರುವುದಾಗಿ ತೋರಿಸಿದ್ದಾರೆ.
ಇದು ಪೋಗಟ್ ಈ ಋತುವಿನಲ್ಲಿ ಗೆದ್ದ ಮೂರನೇ ಚಿನ್ನದ ಪದಕವಾಗಿದೆ. ಅವರು ಮಾರ್ಚ್ನಲ್ಲಿ ನಡೆದ ಮೆಟ್ಟಿಯೂ ಪೆಲಿಕಾನ್ ಇವೆಂಟ್ ಮತ್ತು ಏಪ್ರಿಲ್ನಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಪೋಗಟ್ಗೂ ಮುನ್ನ ಪೊಲೆಂಡ್ ಕುಸ್ತಿ ಟೂರ್ನಿಯಲ್ಲಿ ಪುರುಷರ 61 ಕೆ.ಜಿ.ವಿಭಾಗದಲ್ಲಿ ರವಿಕುಮಾರ್ ದಹಿಯಾ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು. ಆದರೆ ಭರವಸೆಯ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಅಂನ್ಶು ಮಲಿಕ್ ಆರೋಗ್ಯ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಇದನ್ನು ಓದಿ: French Open 2021: ನಡಾಲ್ಗೆ ಶಾಕ್ ಕೊಟ್ಟ ಜೋಕೊವಿಕ್ ಫೈನಲ್ಗೆ ಎಂಟ್ರಿ!