ಚೆನ್ನೈ(ತಮಿಳುನಾಡು): ಬಹುನಿರೀಕ್ಷಿತ 44ನೇ ಚೆಸ್ ಒಲಿಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಮೂಲಕ ಮುಂದಿನ ಎರಡು ವಾರಗಳ ಕಾಲ ತಮಿಳುನಾಡಿನ ಚೆನ್ನೈನಲ್ಲಿ ಚದುರಂಗದ ಚಮತ್ಕಾರ ನಡೆಯಲಿದೆ. ಇದೇ ಮೊದಲ ಬಾರಿ ಭಾರತದಲ್ಲಿ ಅಂತಾರಾಷ್ಟ್ರೀಯ ಚೆಸ್ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಆತಿಥೇಯ ಭಾರತಕ್ಕೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿ ಆಗಿದೆ.
-
#WATCH | Opening ceremony of the #ChessOlympiad in Chennai, Tamil Nadu. CM MK Stalin, Rajinikanth and others present here. Contingents of the participating nations greet the audience.
— ANI (@ANI) July 28, 2022 " class="align-text-top noRightClick twitterSection" data="
The Olympiad will be inaugurated by Prime Minister Modi at 6pm.
(Source: Tamil Nadu DIPR) pic.twitter.com/Bv7ClY4juw
">#WATCH | Opening ceremony of the #ChessOlympiad in Chennai, Tamil Nadu. CM MK Stalin, Rajinikanth and others present here. Contingents of the participating nations greet the audience.
— ANI (@ANI) July 28, 2022
The Olympiad will be inaugurated by Prime Minister Modi at 6pm.
(Source: Tamil Nadu DIPR) pic.twitter.com/Bv7ClY4juw#WATCH | Opening ceremony of the #ChessOlympiad in Chennai, Tamil Nadu. CM MK Stalin, Rajinikanth and others present here. Contingents of the participating nations greet the audience.
— ANI (@ANI) July 28, 2022
The Olympiad will be inaugurated by Prime Minister Modi at 6pm.
(Source: Tamil Nadu DIPR) pic.twitter.com/Bv7ClY4juw
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 44ನೇ ಚೆಸ್ ಒಲಿಂಪಿಯಾಡ್‌ಗೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಟೂರ್ನಿಯಲ್ಲಿ ರಷ್ಯಾ, ಚೀನಾ ಮತ್ತು ಪಾಕಿಸ್ತಾನ ಗೈರು ಹಾಜರಾಗಿವೆ. ಹೀಗಾಗಿ, ಭಾರತಕ್ಕೆ ಹೆಚ್ಚಿನ ಪದಕ ಹರಿದು ಬರುವ ಸಾಧ್ಯತೆ ಇದೆ.
98 ವರ್ಷಗಳ ಇತಿಹಾಸ ಇರುವ ಚೆಸ್ ಒಲಿಂಪಿಯಾಡ್‌ನ 44ನೇ ಆವೃತ್ತಿ ಆಗಸ್ಟ್ 10ರವರೆಗೆ ಚೆನ್ನೈನ ಮಲ್ಲಪುರಮ್‌ನ ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿದೆ. 61 ದೇಶಗಳ 350 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಭಾರತದಿಂದಲೂ ಅನೇಕ ಪ್ರತಿಭೆಗಳು ಇದರಲ್ಲಿ ಭಾಗಿಯಾಗಿದ್ದಾರೆ.
-
#WATCH PM Narendra Modi arrives in Chennai, to declare open the 44th Chess Olympiad shortly
— ANI (@ANI) July 28, 2022 " class="align-text-top noRightClick twitterSection" data="
(Source: DD) pic.twitter.com/oBElmIxiey
">#WATCH PM Narendra Modi arrives in Chennai, to declare open the 44th Chess Olympiad shortly
— ANI (@ANI) July 28, 2022
(Source: DD) pic.twitter.com/oBElmIxiey#WATCH PM Narendra Modi arrives in Chennai, to declare open the 44th Chess Olympiad shortly
— ANI (@ANI) July 28, 2022
(Source: DD) pic.twitter.com/oBElmIxiey
ಇದನ್ನೂ ಓದಿರಿ: 44 ನೇ ಚೆಸ್ ಒಲಿಂಪಿಯಾಡ್: 8 ತಿಂಗಳ ಗರ್ಭಿಣಿ ಹರಿಕಾ ಕೂಡಾ ಭಾಗಿ
ಭಾಗಿಯಾಗದ ಪಾಕ್: 44ನೇ ಒಲಿಂಪಿಯಾಡ್ನಲ್ಲಿ ಪಾಕಿಸ್ತಾನ ಭಾಗಿಯಾಗಿಲ್ಲ. ಒಲಿಂಪಿಯಾಡ್ ಟಾರ್ಚ್ ರಿಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗುತ್ತಿದೆ ಎಂದು ಹೇಳಿ ಪಾಕಿಸ್ತಾನ ಚೆಸ್ ಒಲಿಂಪಿಯಾಡ್ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಈ ರೀತಿಯ ಹೇಳಿಕೆ ಹಾಗೂ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವ ಮೂಲಕ ಪಾಕ್ ರಾಜಕೀಯ ಮಾಡಿದೆ ಎಂದಿದ್ದಾರೆ.