ETV Bharat / sports

ವಿಶ್ವ ಯೂನಿರ್ವಸಿಟಿ ಗೇಮ್ಸ್‌ನಲ್ಲಿ ಭಾರತಕ್ಕೆ ದಾಖಲೆಯ 26 ಪದಕ: ಅಥ್ಲೀಟ್‌ಗಳಿಗೆ ಶುಭಾಶಯ ಕೋರಿದ ಪ್ರಧಾನಿ

author img

By

Published : Aug 9, 2023, 7:21 AM IST

FISU World University Games ದಾಖಲೆಯ 26 ಪದಕ ಜಯಿಸಿದ ಭಾರತೀಯ ಅಥ್ಲೀಟ್‌ಗಳಿಗೆ ಪ್ರಧಾನಿ ಮೋದಿ ಶುಭಾಶಯಗಳನ್ನು ಕೋರಿದ್ದಾರೆ.

Indian athletes
ವಿಶ್ವ ಯೂನಿರ್ವಸಿಟಿ ಗೇಮ್ಸ್‌ನಲ್ಲಿ ಭಾಗಿಯಾದ ಅಥ್ಲೀಟ್‌ಗಳು

ನವದೆಹಲಿ: ಚೀನಾದ ಚೆಂಗ್ಡುವಿನಲ್ಲಿ ನಡೆದ ಎಫ್‌ಐಎಸ್‌ಯು(ಇಂಟರ್ನ್ಯಾಷನಲ್ ಯೂನಿವರ್ಸಿಟಿ ಸ್ಪೋರ್ಟ್ಸ್ ಫೆಡರೇಶನ್) ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸಿ 26 ಪದಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿನಂದಿಸಿದ್ದಾರೆ.

  • A sporting performance that will make every Indian proud!

    At the 31st World University Games, Indian athletes return with a record-breaking haul of 26 medals! Our best performance ever, it includes 11 Golds, 5 Silvers, and 10 Bronzes.

    A salute to our incredible athletes who… pic.twitter.com/bBO1H1Jhzw

    — Narendra Modi (@narendramodi) August 8, 2023 " class="align-text-top noRightClick twitterSection" data=" ">

ಎಫ್‌ಐಎಸ್‌ಯು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಭಾರತ ದಾಖಲೆಯ 26 ಪದಕಗಳೊಂದಿಗೆ ಅಭಿಯಾನ ಕೊನೆಗಳಿಸಿತು. 11 ಚಿನ್ನ, 5 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿತು. ಯೂನಿವರ್ಸಿಟಿ ಗೇಮ್ಸ್​ನ 31ನೇ ಆವೃತ್ತಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಚೆಂಗ್ಡುದಲ್ಲಿ ನಡೆಯಿತು.

2015ರಲ್ಲಿ ಗ್ವಾಂಗ್ಜುನಲ್ಲಿ ನಡೆದ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅಲ್ಲಿ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚು ಸೇರಿ ಒಟ್ಟು 5 ಪದಕಗಳನ್ನು ಗೆದ್ದಿದ್ದರು.

ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ಕ್ರೀಡಾ ಪ್ರದರ್ಶನ: "31ನೇ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್​ನಲ್ಲಿ, ಭಾರತೀಯ ಕ್ರೀಡಾಪಟುಗಳು ದಾಖಲೆಯ 26 ಪದಕಗಳನ್ನು ಪಡೆದಿದ್ದಾರೆ. ಇದು ನಮ್ಮ ಅತ್ಯುತ್ತಮ ಪ್ರದರ್ಶನ. ರಾಷ್ಟ್ರಕ್ಕೆ ಕೀರ್ತಿ ತಂದ ಮತ್ತು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದ ನಮ್ಮ ಅಸಾಧಾರಣ ಅಥ್ಲೀಟ್‌ಗಳಿಗೆ ಒಂದು ಸೆಲ್ಯೂಟ್" ಎಂದು ಪ್ರಧಾನಿ ಮೋದಿ ಎಕ್ಸ್ (ಟ್ವಿಟರ್‌)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಐಶ್ವರಿ ಪ್ರತಾಪ್ ಸಿಂಗ್ ತೋಮರ್ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದು ಅತ್ಯಂತ ಯಶಸ್ವಿ ಭಾರತೀಯ ಅಥ್ಲೀಟ್ ಆಗಿದ್ದಾರೆ. ಪುರುಷರ 10 ಮೀ ಏರ್ ರೈಫಲ್ ಮತ್ತು 50 ಮೀ ರೈಫಲ್ 3 ಸ್ಥಾನಗಳಲ್ಲಿ ತೋಮರ್ ಚಿನ್ನದ ಪದಕಗಳನ್ನು ಗಳಿಸಿದರು. ಜೊತೆಗೆ ಪುರುಷರ 10 ಮೀಟರ್ ಏರ್ ರೈಫಲ್ ತಂಡದ ಸದಸ್ಯರಾಗಿದ್ದರು. ಪುರುಷರ 50 ಮೀಟರ್ ರೈಫಲ್​​​ನಲ್ಲಿ ಅವರು ಕಂಚಿನ ಪದಕವನ್ನು ಪಡೆದರು. ಮನು ಭಾಕರ್, ಯೂತ್ ಒಲಿಂಪಿಕ್ ಗೇಮ್ಸ್ ಚಾಂಪಿಯನ್ ಮತ್ತು ಸಿಫ್ಟ್ ಕೌರ್ ಸಮ್ರಾ ಇಬ್ಬರೂ ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ವೈಯಕ್ತಿಕ ಮತ್ತು ತಂಡ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10,000 ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಪಡೆದಿರುವ ಪ್ರಿಯಾಂಕಾ ಗೋಸ್ವಾಮಿ ಏಳನೇ ಸ್ಥಾನ ಪಡೆದರು. ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್​ನ ಮುಂದಿನ ಆವೃತ್ತಿ 2025ರಲ್ಲಿ ಜರ್ಮನಿಯಲ್ಲಿ ನಡೆಯಲಿದೆ.

ದಾಖಲೆಯ 26 ಪದಕ: 2023ರ ಎಫ್‌ಐಎಸ್‌ಯು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್​ನಲ್ಲಿ ಭಾರತ 11 ಚಿನ್ನ, ಐದು ಬೆಳ್ಳಿ ಮತ್ತು 10 ಕಂಚಿನ 26 ಪದಕಗಳೊಂದಿಗೆ ಏಳನೇ ಸ್ಥಾನ ಗಳಿಸಿದೆ. ಕ್ರೀಡಾಕೂಟದಲ್ಲಿ ಸುಮಾರು 230 ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಆತಿಥೇಯಾ ಚೀನಾ 178 ಪದಕಗಳೊಂದಿಗೆ (103 ಚಿನ್ನ, 40 ಬೆಳ್ಳಿ,35 ಕಂಚು) ಅಗ್ರಸ್ಥಾನ ಪಡೆಯಿತು.

ಇದನ್ನೂ ಓದಿ: ODI World Cup: ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಸಿದ್ಧತೆ; ಸಂಭಾವ್ಯ ಭಾರತ ತಂಡ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.