ETV Bharat / sports

ಫೆ.25ಕ್ಕೆ ಫೈನಲ್ ಪ್ರೊ ಕಬಡ್ಡಿ ಲೀಗ್ : ಪ್ಲೇ ಆಫ್​ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ ನೋಡಿ

ಫೆಬ್ರವರಿ 23ರಂದು ಅಂಕಪಟ್ಟಿಯ ಅಗ್ರಸ್ಥಾನಿ ತಂಡದೊಂದಿಗೆ ಮೊದಲ ಎಲಿಮಿನೇಟರ್​ ಪಂದ್ಯ ಗೆದ್ದ ತಂಡದೊಂದಿಗೆ ಮೊದಲ ಸೆಮಿಫೈನಲ್​ ಮತ್ತು 2ನೇ ಸೆಮಿಫೈನಲ್​ನಲ್ಲಿ 2ನೇ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ತಂಡದೊಂದಿಗೆ ಸೆಣಸಾಡಲಿವೆ..

PKL season 8 final to be held on February 25
ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್​ ವೇಳಾ ಪಟ್ಟಿ
author img

By

Published : Feb 16, 2022, 7:03 PM IST

ಬೆಂಗಳೂರು : 8ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ ನಾಕೌಟ್​ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಫೈನಲ್ ಫೆಬ್ರವರಿ 25ರಂದು ನಡೆಯಲಿದೆ. ಫೆ.21ರಂದು ಎಲಿಮಿನೇಟರ್​ ಮತ್ತು ಫೆ.23ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಪ್ರೋ ಕಬಡ್ಡಿ ಲೀಗ್​ನಲ್ಲಿ ಒಟ್ಟು 12 ತಂಡಗಳಲ್ಲಿ ಅಂಕಪಟ್ಟಿಯಲ್ಲಿ ಮೊದಲ ಆರು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್​ ಪ್ರವೇಶಿಸಲಿವೆ. ಫೆಬ್ರವರಿ 21ರಂದು 3 ಮತ್ತು 6ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಮೊದಲ ಎಲಿಮಿನೇಟರ್​, 4 ಮತ್ತು 5ನೇ ಸ್ಥಾನದಲ್ಲಿರುವ ತಂಡಗಳ ನಡುವೆ 2ನೇ ಎಲಿಮಿನೇಟರ್ ಪಂದ್ಯ ನಡೆಯಲಿವೆ.

ಫೆಬ್ರವರಿ 23ರಂದು ಅಂಕಪಟ್ಟಿಯ ಅಗ್ರಸ್ಥಾನಿ ತಂಡದೊಂದಿಗೆ ಮೊದಲ ಎಲಿಮಿನೇಟರ್​ ಪಂದ್ಯ ಗೆದ್ದ ತಂಡದೊಂದಿಗೆ ಮೊದಲ ಸೆಮಿಫೈನಲ್​ ಮತ್ತು 2ನೇ ಸೆಮಿಫೈನಲ್​ನಲ್ಲಿ 2ನೇ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ತಂಡದೊಂದಿಗೆ ಸೆಣಸಾಡಲಿವೆ.

ಪ್ರಸ್ತುತ 80 ಅಂಕ ಪಡೆದಿರುವ ಪಾಟ್ನಾ ಪೈರೇಟ್ಸ್​ ಪ್ಲೇ ಆಫ್​ ಪ್ರವೇಶಿಸಿರುವ ಏಕೈಕ ತಂಡವಾಗಿದೆ. ಉಳಿದ 5 ಸ್ಥಾನಕ್ಕಾಗಿ 8 ತಂಡಗಳು ಪೈಪೊಟಿ ನಡೆಸಲಿವೆ.

ಇದನ್ನೂ ಓದಿ:IPL 2022: ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್​ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.