ETV Bharat / sports

ಪಾಟ್ನಾ ಪೈರೇಟ್ಸ್​ ಬಲೆಗೆ ಬಿದ್ದ ಬುಲ್ಸ್​, ಆದ್ರೂ ಅಗ್ರಸ್ಥಾನ ಉಳಿಸಿಕೊಂಡ ಬೆಂಗಳೂರು - ಪಾಟ್ನಾ ಪೈರೇಟ್ಸ್

ಆರಂಭದಿಂದಲೂ 2 ಅಂಕಗಳ ಅಂತರವನ್ನು ಕಾಯ್ದುಕೊಂಡಿದ್ದ​ ಪಾಟ್ನಾ ಮೊದಲಾರ್ಧದ ವೇಳೆಗೆ 20-16ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ ಮೊದಲ ನಿಮಿಷದಲ್ಲೇ ಬುಲ್ಸ್​​ ತಂಡವನ್ನ ಆಲೌಟ್ ಮಾಡಿದ ಪಾಟ್ನಾ ಅಂತ್ಯದ ವರೆಗೂ ಪ್ರಾಬಲ್ಯ ಸಾಧಿಸಿ ಪಂದ್ಯದಲ್ಲಿ ವಿಜಯ ಸಾಧಿಸಿ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಡ್ತಿಪಡೆಯಿತು.

Patna Pirates beat table toppers Bengaluru Bulls 38-31
ಪಾಟ್ನಾ ಪೈರೇಟ್ಸ್​ ಬಲಗೆ ಬಿದ್ದ ಬುಲ್ಸ್
author img

By

Published : Jan 16, 2022, 10:13 PM IST

ಬೆಂಗಳೂರು: ಪಾಟ್ಲಾ ಪೈರೇಟ್ಸ್​ ಪ್ರಬಲ ಡಿಫೆಂಡರ್​ಗಳ ಮುಂದೆ ಮಂಕಾದ ಬೆಂಗಳೂರು ಬುಲ್ಸ್​ 31-38 ಅಂಕಗಳ ಅಂತರದಿಂದ ಸೋಲು ಕಂಡಿದೆ. ಆದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರಂಭದಿಂದಲೂ 2 ಅಂಕಗಳ ಅಂತರವನ್ನು ಕಾಯ್ದುಕೊಂಡಿದ್ದ​ ಪಾಟ್ನಾ ಮೊದಲಾರ್ಧದ ವೇಳೆಗೆ 20-16ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ ಮೊದಲ ನಿಮಿಷದಲ್ಲೇ ಬುಲ್ಸ್​​ ತಂಡವನ್ನ ಆಲೌಟ್ ಮಾಡಿದ ಪಾಟ್ನಾ ಅಂತ್ಯದ ವರೆಗೂ ಪ್ರಾಬಲ್ಯ ಸಾಧಿಸಿ ಪಂದ್ಯದಲ್ಲಿ ವಿಜಯ ಸಾಧಿಸಿದ್ದಲ್ಲದೆ, ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಡ್ತಿಪಡೆಯಿತು.

ಪಾಟ್ನಾಪರ ಡಿಫೆಂಡರ್​ ಸುನಿಲ್​ 9 ಟ್ಯಾಕಲ್​ ಪಾಯಿಂಟ್ ಪಡೆದು ತಂಡದ ಪರ ಹೆಚ್ಚು ಅಂಕಗಳಿಸಿದ ಪ್ಲೇಯರ್ ಎನಿಸಿಕೊಂಡರು. ರೈಡರ್ ಸಚಿನ್​ 8, ಗುಮನ್​ ಸಿಂಗ್ ಒಟ್ಟು 7 ಅಂಕ ಪಡೆದರು. ಸುನಿಲ್​ಗೆ ಸಾಥ್ ನೀಡಿದ ನೀರಜ್ ಕುಮಾರ್​ ಮತ್ತು ಮೊಹಮದ್ರೇಜಾ ತಲಾ 3 ಟ್ಯಾಕಲ್​ ಅಂಕ ಪಡೆದರು.

ಬೆಂಗಳೂರು ಪರ ಪವನ್​ 5 ಬೋನಸ್​ ಸಹಿತ 10 ಅಂಕ ಪಡೆದರು. ಇಂದು ರೈಡಿಂಗ್​ನಲ್ಲಿ ಮಂಕಾಗಿ ಕಂಡದ್ದು ಒಂದುಕಡೆಯಾದರೆ, ಬೇರೆ ರೈಡರ್​ಗಳು ದಯಾನೀಯ ವೈಫಲ್ಯ ಅನಭವಿಸಿದ್ದರಿಂದ ಅವರು ಪಂದ್ಯದಲ್ಲಿ 25ಕ್ಕೂ ಹೆಚ್ಚು ನಿಮಿಷ ಹೊರಗುಳಿಯಬೇಕಾಯಿತು. ಈ ಕಾರಣ ಪಾಟ್ನಾ ವಿರುದ್ಧ ತಿರುಗಿ ಬೀಳುವುದಕ್ಕೆ ಬುಲ್ಸ್​ಗೆ ಅವಕಾಶ ಸಿಗಲಿಲ್ಲ. ಮಹೇಂದ್ರ ಸಿಂಗ್ 3 ಟ್ಯಾಕಲ್ ಸಹಿತ 6, ಸೌರಭ್ ನಂಡಲ್ 2 ಬೋನಸ್​ ಸಹಿತ 6 ಅಂಕ ಪಡೆದರೆ, ಚಂದ್ರನ್ ರಂಜಿತ್ ಕೇವಲ 3 ಅಂಕ ಪಡೆದು ನಿರಾಶೆ ಮೂಡಿಸಿದರು.

ತಮಿಳ್ ತಲೈವಾಸ್​ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಮತ್ತೊಂದು ಪಂದ್ಯ 31-31ರಲ್ಲಿ ರೋಚಕ ಟೈನಲ್ಲಿ ಅಂತ್ಯಗೊಂಡಿತು.

ಇದನ್ನೂ ಓದಿ:ವಿಶ್ವಚಾಂಪಿಯನ್​ ಲೋಹ್ ಕೀನ್ ಮಣಿಸಿ ಇಂಡಿಯಾ ಓಪನ್ ಗೆದ್ದ ಲಕ್ಷ್ಯ ಸೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.