ಬೆಂಗಳೂರು : ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಬೆಂಗಳೂರು ಬುಲ್ಸ್ ಶನಿವಾರ ನಡೆಯುವ ತ್ರಿಬಲ್ ಪಂಗಾದಲ್ಲಿ ಪುನೇರಿ ಪಲ್ಟನ್ ವಿರುದ್ಧ ಕಣಕ್ಕಿಳಿಯಲಿದೆ.
ಜನವರಿ 2ರಂದು ನಡೆದಿದ್ದ ಪಂದ್ಯದಲ್ಲಿ ಬುಲ್ಸ್ 40-29ರಿಂದ ಪುಣೆ ತಂಡವನ್ನು ಬಗ್ಗುಬಡಿದಿತ್ತು. ಇದೀಗ ಮತ್ತೆ ಅದೇ ತಂಡವನ್ನು ಮಣಿಸಿ ಮತ್ತೆ ಪಿಕೆಎಲ್ 8ರಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ.
ಕಳೆದ ಎರಡು ಪಂದ್ಯಗಳಲ್ಲಿ ಪಾಟ್ನಾ ಮತ್ತು ಬೆಂಗಾಲ್ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರೋಚಕ ಸೋಲು ಕಂಡಿರುವ ಬೆಂಗಳೂರು ಬುಲ್ಸ್ ಲೀಗ್ನಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿರುವ ಪುಣೆ ವಿರುದ್ಧ ಗೆದ್ದು ಮತ್ತೆ ಗೆಲುವಿನ ಹಳಿಗೆ ಮರಳಲು ಸಿದ್ಧವಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇತ್ತ ಬೆಂಗಾಲ್ ವಾರಿಯರ್ಸ್ ಮತ್ತು ಯು ಮುಂಬಾದಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿದ್ದ ಪುಣೆ ಕಳೆದ ಎರಡು ಪಂದ್ಯಗಳಲ್ಲಿ ಯುಪಿ ಯೋಧಾ ಮತ್ತು ಹರಿಯಾಣ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದೆ. ಇದೀಗ ಬೆಂಗಳೂರು ಮಣಿಸಿ ಮತ್ತೆ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ.
ಶನಿವಾರ ಮೂರು ಪಂದ್ಯಗಳು ನಡೆಯಲಿವೆ. ಯು ಮುಂಬಾ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟನ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಮಿಳ್ ತಲೈವಾಸ್ ಕಾದಾಡಲಿವೆ.
ಇದನ್ನೂ ಓದಿ:ವಿವಾದಾತ್ಮಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ಗೆ ಒಂದು ಅಂಕದಿಂದ ರೋಚಕ ಸೋಲು