ETV Bharat / sports

ಪ್ರೊ ಕಬಡ್ಡಿ ಲೀಗ್: ಯುಪಿ ವಿರುದ್ಧ ಗೆದ್ದ ಜೈಪುರ, ಯು ಮುಂಬಾ- ತಲೈವಾಸ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

author img

By

Published : Dec 27, 2021, 10:29 PM IST

ಜೈಪುರದ ಪರ ಅರ್ಜುನ್ ದೇಶ್ವಾಲ್ 11, ದೀಪಕ್​ ನಿವಾಸ್ ಹೂಡ 9 ರೈಡಿಂಗ್ ಅಂಕ ಪಡೆದರೆ, ಡಿಫೆಂಡರ್​ ನಿತಿನ್ 4 ಅಂಕ ಪಡೆದರು. ಯುಪಿ ಪರ ಸುರೇಂದರ್ ಗಿಲ್ 10 , ರೋಹಿತ್ ತೋಮರ್​ 7 ಅಂತ ಪಡೆದು ಮಿಂಚಿದರು.

Jaipur Pink Panthers Beat UP Yoddha
ಪ್ರೊ ಕಬಡ್ಡಿ ಲೀಗ್

ಬೆಂಗಳೂರು: ಅರ್ಜುನ್ ದೇಶ್ವಾಲ್​ ಮತ್ತು ದೀಪ್ ನಿವಾಸ್ ಹೂಡ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್​ 32-29ರ ಅಂತರದಿಂದ ಯುಪಿ ಯೋದ ತಂಡವನ್ನು ಮಣಿಸಿದರೆ, ಯು ಮುಂಬಾ ಮತ್ತು ತಮಿಳ್ ತಲೈವಾಸ್​ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.

ಪ್ರೋಕಬಡ್ಡಿ ಲೀಗ್​​ನ 16ನೇ ಪಂದ್ಯದಲ್ಲಿ ಜೈಪುರ ತಂಡ ಆರಂಭದಿಂದಲೇ ಮುನ್ನಡೆ ಸಾಧಿಸಿಕೊಂಡು ಸಾಗಿತು. ಮೊದಲಾರ್ಧದ ವೇಳೆ ಜೈಪುರ​ 19-12ರಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಯುಪಿ ಯೋದ ಚಾಣಾಕ್ಷತನದಿಂದ ಆಡಿತು. ಒಂದೊಂದೇ ಅಂಕವನ್ನು ಪಡೆಯುತ್ತ ಹಿನ್ನಡೆ ತಗ್ಗಿಸುತ್ತಿತ್ತು. ಆದರೆ, ನಿರ್ಣಾಯಕವಾಗಿ ಕೊನೆಯ ರೈಡ್​ನಲ್ಲಿ ಜೈಪುರ ತಂಡ ನಾಯಕ 2 ಅಂಕ ಪಡೆದು ಜಯಕ್ಕೆ ಕಾರಣರಾದರು.

ಜೈಪುರದ ಪರ ಅರ್ಜುನ್ ದೇಶ್ವಾಲ್ 11, ದೀಪಕ್​ ನಿವಾಸ್ ಹೂಡ 9 ರೈಡಿಂಗ್ ಅಂಕ ಪಡೆದರೆ, ಡಿಫೆಂಡರ್​ ನಿತಿನ್ 4 ಅಂಕ ಪಡೆದರು. ಯುಪಿ ಪರ ಸುರೇಂದರ್ ಗಿಲ್ 10 , ರೋಹಿತ್ ತೋಮರ್​ 7 ಅಂತ ಪಡೆದು ಮಿಂಚಿದರು.

ಇದಕ್ಕೂ ಮುನ್ನ ನಡೆದ ಯು ಮುಂಬಾ ಮತ್ತು ತಮಿಳ್ ತಲೈವಾಸ್​ ನಡುವಿನ ಪಂದ್ಯದ ಟೈನಲ್ಲಿ ಅಂತ್ಯವಾಯಿತು. ಮುಂಬೈ ಪರ ವಿ. ಅಜಿತ್ ಕುಮಾರ್​ 15 ಅಂಕ ಪಡೆದರೆ ಡಿಫೆಂಡರ್​ಗಳಾದ ರಾಹುಲ್ ಸೇತ್ಪತಿ ಮತ್ತು ರಿಂಕು ತಲಾ 22 ಅಂಕ ಪಡೆದರು. ತಲೈವಾಸ್ ಪರ ಮಂಜೀತ್​ 8, ಅತುಲ್ 7, ಡಿಫೆಂಡರ್​ಗಳಾದ ಸುರ್ಜೀತ್ ಸಿಂಗ್ ಮತ್ತು ಸಾಹಿಲ್ ಸಿಂಗ್ ತಲಾ 3 ಅಂಕ ಪಡೆದು ರೋಚಕ ಟೈ ಆಗಲು ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:U19 ಏಷ್ಯಾಕಪ್​: ಅಫ್ಘಾನಿಸ್ತಾನಕ್ಕೆ ಸೋಲುಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.