ಬ್ರೆಜಿಲ್: ಮೂತ್ರನಾಳದ ಸೋಂಕಿಗೆ ಚಿಕಿತ್ಸೆಗೆ ಒಳಗಾಗಿದ್ದ ಫುಟ್ಬಾಲ್ ದಿಗ್ಗಜ ಪೀಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 81 ವರ್ಷದ ಪೀಲೆ ಅವರನ್ನು ಫೆ.13 ರಂದು ಕೊಲೊನ್ ಕ್ಯಾನ್ಸರ್‌ಗೆ ಚಿಕಿತ್ಸೆ ಮುಂದುವರಿಸಲು ಸಾವೊ ಪಾಲೊದಲ್ಲಿನ ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು ಪೀಲೆ ಅವರಿಗೆ ಮೂತ್ರನಾಳದ ಸೋಂಕು ಇರುವುದನ್ನು ಪತ್ತೆ ಹಚ್ಚಿದ್ದರು.
ಪೀಲೆ ಸ್ಥಿರವಾದ ಕ್ಲಿನಿಕಲ್ ಸ್ಥಿತಿಯಲ್ಲಿದ್ದಾರೆ, ಈಗಾಗಲೇ ಅವರು ಮೂತ್ರನಾಳದ ಸೋಂಕಿನಿಂದ ಗುಣಮುಖರಾಗಿದ್ದಾರೆ. 2021ರ ಸೆಪ್ಟೆಂಬರ್‌ನಲ್ಲಿ ಗುರುತಿಸಲಾದ ಕೊಲೊನ್ ಟ್ಯೂಮರ್‌ಗೆ ಚಿಕಿತ್ಸೆಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಾಗುತ್ತದೆ ಎಂದು ಐನ್‌ಸ್ಟೈನ್ ಆಸ್ಪತ್ರೆ ಮೂಲಗಳು ತಿಳಿಸಿದೆ.
ಯುದ್ಧ ಪೀಡಿತ ಉಕ್ರೇನ್‌ಗೆ ಬೆಂಬಲ ನೀಡಿದ್ದ ಸಂದೇಶವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಶಾಂತಿ, ಸ್ವಾತಂತ್ರ್ಯ ಮತ್ತು ಪ್ರೀತಿ ಮೇಲುಗೈ ಸಾಧಿಸಲು ದೇವರನ್ನು ಕೇಳುತ್ತೇನೆ ಎಂದು ಕಳೆದ ಶುಕ್ರವಾರ ಬರೆದುಕೊಂಡಿದ್ದರು.
ಇದನ್ನೂ ಓದಿ: ಕಿಡ್ನಿ ಕಸಿ ಸರ್ಜರಿಗೊಳಗಾದ ಮಾಜಿ ಕ್ರಿಕೆಟಿಗನ ಚಿಕಿತ್ಸಾ ವೆಚ್ಚ HCAದಿಂದ ಭರಿಸುವುದಾಗಿ ಅಜರುದ್ದೀನ್ ಘೋಷಣೆ