ETV Bharat / sports

ರೈಡಿಂಗ್​ನಲ್ಲಿ ಫೇಲ್, ಸೂಪರ್ ಟ್ಯಾಕಲ್​ ಮಾಡಿ ಸೋಲು ತಪ್ಪಿಸಿದ ಕ್ಯಾಪ್ಟನ್​ ಶೆರಾವತ್​​ - ತೆಲುಗು ಟೈಟನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಟೈ

ಮಿಂಚಿನಂತೆ ರೈಡಿಂಗ್​ ಮಾಡುತ್ತಿದ್ದ ಪವನ್​ ಕಳೆದ ಮೂರು ಪಂದ್ಯಗಳಲ್ಲಿ ಬುಲ್ಸ್​ಗೆ ಜಯ ತಂದುಕೊಟ್ಟಿದ್ದರು. ಆದರೆ ಟೈಟನ್ಸ್ ಎದುರು ಮಂಕಾದ ಅವರು ಕೇವಲ 3 ಟಚ್​ ಪಾಯಿಂಟ್​ ಸಹಿತ 8 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ 20ಕ್ಕೂ ಹೆಚ್ಚು ನಿಮಿಷ ಹೊರಗೆ ಕಾಲ ಕಳೆದಿದ್ದರಿಂದ ಪಂದ್ಯವನ್ನು ಗೆಲ್ಲುವ ಅವಕಾಶ ಕೈತಪ್ಪಿತು.

Bengaluru Bulls tie with Telugu Titans
ಬೆಂಗಳೂರು ಬುಲ್ಸ್- ತೆಲುಗು ಟೈಟನ್ಸ್​ ಪಂದ್ಯ ಟೈ
author img

By

Published : Jan 1, 2022, 10:39 PM IST

ಬೆಂಗಳೂರು: ತೆಲುಗು ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ 35 ಸೆಕೆಂಡ್​ಗಳ ಆಟದಲ್ಲಿ ಅದ್ಭುತ ಆಟವಾಡಿದ ಬೆಂಗಳೂರು ಬುಲ್ಸ್​ ಸೋಲುತ್ತಿದ್ದ ಪಂದ್ಯವನ್ನು ರೋಚಕ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಳೆದ ಮೂರು ಪಂದ್ಯಗಳಲ್ಲಿ ಮಿಂಚಿನಂತೆ ರೈಡಿಂಗ್​ ಮಾಡಿ ಬುಲ್ಸ್​ಗೆ ಜಯ ತಂದುಕೊಟ್ಟಿ ಪವನ್​, ಇಂದು ಟೈಟನ್ಸ್ ಎದುರು ಮಂಕಾದರು. ಅವರು ಕೇವಲ 3 ಟಚ್​ ಪಾಯಿಂಟ್​ ಸಹಿತ 8 ಅಂಕ ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ 20ಕ್ಕೂ ಹೆಚ್ಚು ನಿಮಿಷ ಹೊರಗೆ ಕಾಲ ಕಳೆದಿದ್ದರಿಂದ ಪಂದ್ಯವನ್ನು ಗೆಲ್ಲುವ ಅವಕಾಶ ಕೈತಪ್ಪಿತು.

ಅರಂಭದಿಂದ ಕೊನೆ 2 ನಿಮಿಷದವರೆಗೆ ಎರಡೂ ತಂಡಗಳ ನುಡುವೆ ಸಮಬಲ ಹೋರಾಟ ಕಂಡುಬಂದಿತ್ತು. ಆದರೆ ಒಂದುವರೆ ನಿಮಿಷವಿದ್ದ ಸಂದರ್ಭದಲ್ಲಿ ಟೈಟನ್ಸ್ ತಂಡದ ಆದರ್ಶ್​ ಸೂಪರ್​ ರೈಡ್ ಮಾಡಿ ಟೈಟನ್ಸ್​ಗೆ 3 ಅಂಕ ಮುನ್ನಡೆ ತಂದುಕೊಟ್ಟರು. ಕೊನೆಯ 35 ಸೆಕೆಂಡ್ ಇರುವಾಗ ಬುಲ್ಸ್ ಆಲೌಟ್ ಆಗಿ 31-34ರ ಅಂಕಗಳ ಹಿನ್ನೆಡೆ ಅನುಭವಿಸಿತ್ತು.

ಆದರೆ 10 ಅಂಕ ಪಡೆದು ಉತ್ತಮ ಲಯದಲ್ಲಿದ್ದ ಅಂಕಿತ್​ರನ್ನು ಮಹೇಂದರ್​ ಟ್ಯಾಕಲ್ ಮಾಡಿದರು. ನಂತರ ಮಿಂಚಿನ ವೇಗದಲ್ಲಿ ರೈಡ್​ ಮಾಡಿದ ಪವನ್​ 3 ಸೆಕೆಂಡ್​ ಉಳಿದಿರುವಂತೆ ಒಂದು ಅಂಕ ಪಡೆದು ಅಂತರವನ್ನು 33-34ಕ್ಕೆ ತಂದು ನಿಲ್ಲಿಸಿದರು. ಕೊನೆಯಲ್ಲಿ ರೈಡಿಂಗ್ ಬಂದ ಮಾಜಿ ಬುಲ್ಸ್ ಆಟಗಾರ ರೋಹಿತ್​ ಕುಮಾರ್​​ರನ್ನು ಬಾಕ್​ಲೈನ್​ ದಾಟದಂತೆ ತಡೆದರಲ್ಲದೆ ಪವನ್​ ಅದ್ಭುತವಾಗಿ ಟ್ಯಾಕಲ್​ ಮಾಡಿ ಸೋಲುತ್ತಿದ್ದ ಪಂದ್ಯವನ್ನು ಟೈನಲ್ಲಿ ಅಂತ್ಯವಾಗುವಂತೆ ಮಾಡಿದರು. ​

ಟೈಟನ್ಸ್ ತಂಡದ ಅಂಕಿತ್ ಬೆನಿವಾಲ್​ 10 ಅಂಕ ಪಡೆದು ಪಂದ್ಯದ ಅತ್ಯುತ್ತಮ ರೈಡರ್ ಎನಿಸಿಕೊಂಡರು. ಸಂದೀಪ್​ ಕೊಂಡೋಲಾ 4ಟ್ಯಾಕಲ್ ಪಾಯಿಂಟ್ ಪಡೆದರೆ ಸುರೀಂದರ್ ಸಿಂಗ್ 2 ಮತ್ತು ರೋಹಿತ್ ಕುಮಾರ್​ 2 ಟ್ಯಾಕಲ್ ಸೇರಿದಂತೆ 3 ಅಂಕಪಡೆದರು. ಕನ್ನಡಿಗ ರಾಕೇಶ್ ಗೌಟ್​ ಪೂರ್ತಿ ಪಂದ್ಯವಾಡದಿದ್ದರೂ 4 ಅಂಕ ಪಡೆದರು.

ಬುಲ್ಸ್ ಪರ ಚಂದ್ರನ್ ರಂಜಿತ್​ 6 ಬೋನಸ್​ ಸಹಿತ 9 ರೈಡಿಂಗ್ ಅಂಕ ಪಡೆದರೆ, ರೈಡಿಂಗ್​ನಲ್ಲಿ ಮಂಕಾದ ಪವನ್​ ಶೆರಾವತ್​ 3 ಟಚ್​ ಪಾಯಿಂಟ್ ಸೇರಿದಂತೆ 8 ರೈಡಿಂಗ್ ಮತ್ತು ಒಂದು ಅದ್ಭುತ ಟ್ಯಾಕಲ್ ಸೇರಿ 8 ಅಂಕ ಪಡೆದರು. ಎಂದಿನಂತೆ ಡಿಫೆಂಡಿಗ್​ನಲ್ಲಿ ಮಿಂಚಿದ ಮಹೇಂದರ್​ ಸಿಂಗ್ ಮತ್ತು ಸೌರಭ್ ನಂಡಲ್​ ತಲಾ 3 ಟ್ಯಾಕಲ್​ ಸೇರಿದಂತೆ 4 ಅಂಕಗಳಿಸಿ ಪಂದ್ಯ ಟೈ ಆಗಲು ನೆರವಾದರು.

ಇದಕ್ಕು ಮುನ್ನ ನಡೆದ ಯು ಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯವೂ ಕೂಡ 28-28ರಲ್ಲಿ ಟೈನಲ್ಲಿ ಅಂತ್ಯವಾಯಿತು.

ಇದನ್ನೂ ಓದಿ:ಭಾರತವನ್ನು ಟಿ20 ವಿಶ್ವಕಪ್​ನಲ್ಲಿ ಮಣಿಸಿದ್ದು 2021ರ ಪಾಕಿಸ್ತಾನಕ್ಕೆ ಸರ್ವಶ್ರೇಷ್ಠ ಕ್ಷಣ: ಬಾಬರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.