ಬೆಂಗಳೂರು: ಪವನ್ ಶೆರಾವತ್ ಅಬ್ಬರದ ರೈಡಿಂಗ್ ಮತ್ತು ಡಿಫೆಂಡರ್ಗಳ ಅದ್ಭುತ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ 61-22 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಅನುಭವಿ ಡಿಫೆಂಡಿರ್ಗಳನ್ನು ಹೊಂದಿದ್ದ ಡೆಲ್ಲಿ ತಂಡ ಪವನ್ ಆರ್ಭಟವನ್ನು ಯಾವುದೇ ಹಂತದಲ್ಲಿಯೂ ತಡೆಯಲು ಸಾಧ್ಯವಾಗದೆ 5 ಬಾರಿ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿದೆ.
ಬುಧವಾರ ನಡೆದ 2ನೇ ಪಂದ್ಯದಲ್ಲಿ ಸ್ಟಾರ್ ರೈಡರ್ ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ದಬಾಂಗ್ ಡೆಲ್ಲಿ ಡಿಫೆಂಡಿಂಗ್ ಮತ್ತು ರೈಡಿಂಗ್ ಎರಡರಲ್ಲೂ ಟೂರ್ನಿಯಲ್ಲೇ ತೀರಾ ಕಳಪೆ ಪ್ರದರ್ಶನ ತೋರಿತು.
ಇತ್ತ ರೈಡಿಂಗ್ನಲ್ಲಿ ಪವನ್ ಅಬ್ಬರಿಸುತ್ತಿದ್ದರೆ, ಅತ್ತ ಬುಲ್ಸ್ ಡಿಫೆಂಡರ್ಗಳು ಡೆಲ್ಲಿಯ ರೈಡರ್ಗಳನ್ನು ಹಿಂದಿರುಗಲು ಬಿಡದೆ ತಮ್ಮ ಬಲೆಗೆ ಬೀಳಿಸಿಕೊಳ್ಳವಲ್ಲಿ ಯಶಸ್ವಿಯಾದರು. ಮೊದಲಾರ್ಧದಲ್ಲಿ 3 ಬಾರಿ ಆಲೌಟ್ ಮಾಡಿದ ಬುಲ್ಸ್ ಒಟ್ಟಾರೆ ಪಂದ್ಯದಲ್ಲಿ ಡೆಲ್ಲಿಯನ್ನು 5 ಬಾರಿ ಆಲೌಟ್ ಮಾಡುವ ಬರೋಬ್ಬರಿ 39 ಅಂಕಗಳ ಅಂತರದಿಂದ ಜಯ ಸಾಧಿಸಿತು. ಇದು ಈ ವರ್ಷದ ಗರಿಷ್ಠ ಅಂತರದ ಗೆಲುವಾಯಿತು. ಪವನ್ ಶೆರಾವತ್ 27 ಅಂಕ ಪಡೆದು ಟೂರ್ನಿಯಲ್ಲೇ ಗರಿಷ್ಠ ಅಂಕ ಪಡೆದ ರೈಡರ್ ಎನಿಸಿಕೊಂಡರು.
-
𝗣𝗮𝘄𝗮𝗻 🦁-𝗮𝘄𝗮𝘁 𝗻𝗲, 𝗮𝗸𝗲𝗹𝗲, 𝗗𝗲𝗹𝗵𝗶 𝘁𝗲𝗮𝗺 𝘀𝗲 𝘇𝘆𝗮𝗱𝗮 𝗽𝗼𝗶𝗻𝘁𝘀 𝗯𝗮𝗻𝗮𝘆𝗲!😵💫@BengaluruBulls with a HUGE win over the title favourites, @DabangDelhiKC! 💥#SuperhitPanga pic.twitter.com/nDWPhlEbF4
— ProKabaddi (@ProKabaddi) January 12, 2022 " class="align-text-top noRightClick twitterSection" data="
">𝗣𝗮𝘄𝗮𝗻 🦁-𝗮𝘄𝗮𝘁 𝗻𝗲, 𝗮𝗸𝗲𝗹𝗲, 𝗗𝗲𝗹𝗵𝗶 𝘁𝗲𝗮𝗺 𝘀𝗲 𝘇𝘆𝗮𝗱𝗮 𝗽𝗼𝗶𝗻𝘁𝘀 𝗯𝗮𝗻𝗮𝘆𝗲!😵💫@BengaluruBulls with a HUGE win over the title favourites, @DabangDelhiKC! 💥#SuperhitPanga pic.twitter.com/nDWPhlEbF4
— ProKabaddi (@ProKabaddi) January 12, 2022𝗣𝗮𝘄𝗮𝗻 🦁-𝗮𝘄𝗮𝘁 𝗻𝗲, 𝗮𝗸𝗲𝗹𝗲, 𝗗𝗲𝗹𝗵𝗶 𝘁𝗲𝗮𝗺 𝘀𝗲 𝘇𝘆𝗮𝗱𝗮 𝗽𝗼𝗶𝗻𝘁𝘀 𝗯𝗮𝗻𝗮𝘆𝗲!😵💫@BengaluruBulls with a HUGE win over the title favourites, @DabangDelhiKC! 💥#SuperhitPanga pic.twitter.com/nDWPhlEbF4
— ProKabaddi (@ProKabaddi) January 12, 2022
ಪವನ್ 22 ಟಚ್ ಪಾಯಿಂಟ್ ಮತ್ತು 5 ಬೋನಸ್ ಸಹಿತ 27 ಅಂಕ ಪಡೆದು ಮಿಂಚಿದರೆ, ಭರತ್ 2 ಟ್ಯಾಕಲ್ ಸಹಿತ 7, ಚಂದ್ರನ್ ರಂಜಿತ್ 2 ಟ್ಯಾಕಲ್ ಸಹಿತ 5, ಸೌರಭ್ ನಂಡಲ್, ಮಹೇಂದರ್ ಸಿಂಗ್ ಮತ್ತು ಅಮನ್ ತಲಾ 3 ಟ್ಯಾಕಲ್ ಅಂಕ ಪಡೆದು ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬುಲ್ಸ್ಗೆ ಆಲೌಟ್ ಮೂಲಕವೇ 10 ಪಾಯಿಂಟ್ ಸಂದಿದ್ದು ಮತ್ತೊಂದು ವಿಶೇಷ.
ಇತ್ತ ಡೆಲ್ಲಿ ತಂಡದಲ್ಲಿ ನವೀನ್ ಕುಮಾರ್ ಅನುಪಸ್ಥಿತಿ ಎದ್ದು ಕಂಡಿತು. ಇಡೀ ಪಂದ್ಯದಲ್ಲಿ ಡೆಲ್ಲಿ ರೈಡರ್ಗಳು ಟಚ್ ಮಾಡಿ ಪಡೆದಿದ್ದು ಕೇವಲ 7 ಅಂಕ ಮಾತ್ರ. ರೈಡಿಂಗ್ನಲ್ಲಿ ಬಂದ 16 ಅಂಕಗಳಲ್ಲಿ 9 ಬೋನಸ್ಗಳೇ ಸೇರಿದ್ದವು. ಇನ್ನು ಮಂಜಿತ್ ಚಿಲ್ಲರ್, ಜೋಗಿಂದರ್ ಸಿಂಗ್, ಸಂದೀಪ್ ನರ್ವಾಲ್ ಮತ್ತು ಜೀವ ಕುಮಾರ್ ಅಂತಹ ಅನುಭವಿ ಹಾಗೂ ಬಲಿಷ್ಠ ಡಿಫೆಂಡರ್ಗಳಿದ್ದರೂ ಕೇವಲ 4 ಟ್ಯಾಕಲ್ ಅಂಕಗಳನ್ನು ಪಡೆಯಲಷ್ಟೇ ಶಕ್ತವಾದರು.
ಮತ್ತೊಂದು ಪಂದ್ಯದಲ್ಲಿ, ಹರಿಯಾಣ ಸ್ಟೀಲರ್ಸ್ ಮತ್ತು ಯುಪಿ ಯೋಧ ನಡುವಿನ ಪಂದ್ಯ 36-36ರ ರೋಚಕ ಟೈನಲ್ಲಿ ಅಂತ್ಯವಾಯಿತು. ಈ ಪಂದ್ಯದಲ್ಲಿ ಕೊನೆಯ 53 ಸೆಕೆಂಡ್ಗಳಲ್ಲಿ 2 ಅಂಕ ಮುನ್ನಡೆ ಸಾಧಿಸಿದ್ದ ಯುಪಿಗೆ ಗೆಲ್ಲುವ ಅವಕಾಶ ಇತ್ತಾದರೂ ತಂತ್ರಗಾರಿಕೆಯ ವೈಫಲ್ಯದಿಂದ ಟೈ ಮಾಡಿಕೊಂಡಿತು.
ಯುಪಿ ಯೋಧ ಪರ ಸುರೇಂದರ್ ಗಿಲ್ 14 ಅಂಕ ಪಡೆದರೆ ಹರಿಯಾಣ ಪರ ವಿಕಾರ್ಶ ಖಂಡೋಲ 17 ಅಂಕಗಳನ್ನು ಪಡೆದು ಮಿಂಚಿದರು.
ಇದನ್ನೂ ಓದಿ:ಇಂಡಿಯಾ ಓಪನ್: ದ್ವಿತೀಯ ಸುತ್ತು ಪ್ರವೇಶಿಸಿದ ಸೈನಾ, ಲಕ್ಷ್ಯ, ಪ್ರಣಯ್