ಬೆಂಗಳೂರು: ನಾಯಕ ಪವನ್ ಶೆರಾವತ್ ಅವರ ಮಿಂಚಿನ ರೈಡಿಂಗ್ ಹಾಗೂ ಮೋರೆ ಮತ್ತು ಮಹೇಂದರ್ ಸಿಂಗ್ ಅವರ ಡಿಫೆಂಡಿಂಗ್ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ 42-28 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿದೆ.
ವೈಟ್ಫೀಲ್ಡ್ನ ಶೆರಟಾನ್ ಗ್ರ್ಯಾಂಡ್ ಹೋಟೆಲ್ನ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಂಚಿನ ರೈಡಿಂಗ್ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಶೆರಾವತ್ ಒಟ್ಟು 22 ಅಂಕಗಳಿಸಿ ಹರಿಯಾಣ ಸ್ಟೀಲರ್ಸ್ ಡಿಫೆಂಡಿಂಗ್ ಪಡೆಯನ್ನು ಛಿದ್ರಗೊಳಿಸಿದರು.
ಚಂದ್ರನ್ ರಂಜಿತ್ ವಿಫಲರಾಗಿದ್ದರಿಂದ ಪವನ್ ರೈಡಿಂಗ್ ಜವಾಬ್ದಾರಿಯನ್ನು ಸಂಪೂರ್ಣ ತೆಗೆದುಕೊಂಡು 15 ಟಚ್ ಪಾಯಿಂಟ್ ಗಳಿಸಿಕೊಂಡರೆ, 5 ಬೋನಸ್ ಮತ್ತು 2 ಟ್ಯಾಕಲ್ ಕೂಡ ಮಾಡಿ 22 ಅಂಕ ಗಳಿಸಿದರು.
ಒಂದು ಕಡೆ ಪವನ್ ಸ್ಟೀಲರ್ ಡಿಫೆನ್ಸ್ ಪಡೆಯನ್ನು ತಬ್ಬಿಬ್ಬುಗೊಳಿಸುತ್ತಿದ್ದರೆ ಇತ್ತ ಮಹೇಂದರ್ ಸಿಂಗ್ ಮತ್ತು ಜಿಬಿ ಮೋರೆ ಹರಿಯಾಣ ಸ್ಟೀಲರ್ಸ್ ರೈಡರ್ಗಳನ್ನು ಬಂದ ಹಾಗೆ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೋರೆ 5 ಅಂಕ ಪಡೆದರೆ, ಮಹೇಂದರ್ 4, ಅಮನ್ 3, ಸೌರಭ್ ನಂಡಲ್ 3 ಟ್ಯಾಕಲ್ ಅಂಕ ಗಿಟ್ಟಿಸಿಕೊಂಡರು.
-
Super raids, raid points aur Pawan ke jhonkhe - Bengaluru ko jeet se koi kaise roke! 🛫@BengaluruBulls register their third win of the season, this time against @HaryanaSteelers! 🔥#SuperhitPanga #HSvBLR pic.twitter.com/arVx8iY1WP
— ProKabaddi (@ProKabaddi) December 30, 2021 " class="align-text-top noRightClick twitterSection" data="
">Super raids, raid points aur Pawan ke jhonkhe - Bengaluru ko jeet se koi kaise roke! 🛫@BengaluruBulls register their third win of the season, this time against @HaryanaSteelers! 🔥#SuperhitPanga #HSvBLR pic.twitter.com/arVx8iY1WP
— ProKabaddi (@ProKabaddi) December 30, 2021Super raids, raid points aur Pawan ke jhonkhe - Bengaluru ko jeet se koi kaise roke! 🛫@BengaluruBulls register their third win of the season, this time against @HaryanaSteelers! 🔥#SuperhitPanga #HSvBLR pic.twitter.com/arVx8iY1WP
— ProKabaddi (@ProKabaddi) December 30, 2021
ಸ್ಟೀಲರ್ಸ್ ಪರ ವಿಕಾಸ್ ಖಂಡೋಲಾ 7, ರೋಹಿತ್ ಗುಲಿಯಾ 5 ರೈಡಿಂಗ್ ಅಂಕ ಪಡೆದರೆ, ಜೈದೀಪ್ ಕುಲ್ದೀಪ್ 4, ರವಿಕುಮಾರ್ ಮತ್ತು ಸುರೇಂದರ್ ನಾಡಾ ತಲಾ 2 ಟ್ಯಾಕಲ್ ಅಂಕ ಪಡೆದರು.
ಮತ್ತೊಂದು ಪಂದ್ಯದಲ್ಲಿ ಯು ಮುಂಬಾ 37-28 ಅಂಕಗಳ ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿತು. ರೈಡರ್ಗಳಾದ ವಿ.ಅಜಿತ್ ಕುಮಾರ್ 11, ಅಭಿಶೇಕ್ ಸಿಂಗ್ 10 ಪಡೆದರೆ, ಫಜಲ್ ಅಟ್ರಾಚಲಿ 3, ಹರೀಂದರ್ ಕುಮಾರ್ ಮತ್ತು ರಿಂಕು 2 ಟ್ಯಾಕಲ್ ಅಂಕ ಪಡೆದರು.
ಇತ್ತ ಪ್ಯಾಂಥರ್ಸ್ ಪರ ಏಕಾಂಗಿ ಹೋರಾಟ ಮಾಡಿದ ಅರ್ಜುನ್ ದೇಶ್ವಾಲ್ 14 ಅಂಕ ಪಡೆದರು. ನಾಯಕ ದೀಪಕ್ ಕೇವಲ 4 ಅಂಕ ಪಡೆದು ಮಂಕಾದರು. ಡಿಫೆಂಡರ್ಗಳಾದ ವಿಶಾಲ್ ಮತ್ತು ಶಾವುಲ್ ಕುಮಾರ್ ತಲಾ 3 ಅಂಕ ಪಡೆದರು.
ಇದನ್ನೂ ಓದಿ:U19 ಏಷ್ಯಾಕಪ್: ಬಾಂಗ್ಲಾದೇಶ ಮಣಿಸಿ ಫೈನಲ್ ಪ್ರವೇಶಿಸಿದ ಭಾರತದ ಯಂಗ್ ಟೈಗರ್ಸ್