ಬೆಂಗಳೂರು: ಕಳೆದ 6 ಪಂದ್ಯಗಳಲ್ಲಿ 5 ರಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ಇಂದು ತನ್ನ ಆಕ್ರಮಣ ಕಾರಿ ಆಟವನ್ನು ಬದಿಗೊತ್ತಿ ತಾಳ್ಮೆಯ ಆಟವನ್ನು ಪ್ರದರ್ಶಿಸಿ ಬಲಿಷ್ಠ ಯುಪಿ ತಂಡವನ್ನು 31-26ರಲ್ಲಿ ಮಣಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.
ಯು ಮುಂಬಾ ಮತ್ತು ತಮಿಳ್ ತಲೈವಾಸ್ ವಿರುದ್ಧ ಹೀನಾಯ ಪ್ರದರ್ಶನ ತೋರಿ ಭಾರಿ ಅಂತರದಿಂದ ಸೋಲು ಕಂಡಿದ್ದ ಪವನ್ ಪಡೆ, ಇಂದಿನ ಪಂದ್ಯದಲ್ಲಿ ಆರಂಭದಿಂದ ಅಂತ್ಯದವರೆಗೆ ಎಚ್ಚರಿಕೆಯಿಂದ ಆಡಿತು. ಮೊದಲ ಹತ್ತು ನಿಮಿಷದೊಳಗೆ ಯೋಧ ತಂಡವನ್ನು ಆಲ್ ಔಟ್ ಮಾಡಿದ ಬುಲ್ಸ್ ಮೊದಲಾರ್ಧದ ವೇಳೆಗೆ 19-13ರಲ್ಲಿ ಮುನ್ನಡೆ ಪಡೆದುಕೊಂಡಿತು. ಅದೇ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಳ್ಳವಲ್ಲಿ ಯಶಸ್ವಿಯಾಯಿತು.
-
MATCH SET. SCORE SETTLED. 💯
— ProKabaddi (@ProKabaddi) February 1, 2022 " class="align-text-top noRightClick twitterSection" data="
The Bulls are back on track with a terrific victory over their arch-rivals 💥#SuperhitPanga #VIVOProKabaddi #BLRvUP pic.twitter.com/RX0ieeYts1
">MATCH SET. SCORE SETTLED. 💯
— ProKabaddi (@ProKabaddi) February 1, 2022
The Bulls are back on track with a terrific victory over their arch-rivals 💥#SuperhitPanga #VIVOProKabaddi #BLRvUP pic.twitter.com/RX0ieeYts1MATCH SET. SCORE SETTLED. 💯
— ProKabaddi (@ProKabaddi) February 1, 2022
The Bulls are back on track with a terrific victory over their arch-rivals 💥#SuperhitPanga #VIVOProKabaddi #BLRvUP pic.twitter.com/RX0ieeYts1
ಬೆಂಗಳೂರು ಪರ ಪವನ್ ಶೆರಾವತ್ 9 ಅಂಕ ಪಡೆದರೆ, ಇವರಿಗೆ ಸಾಥ್ ನೀಡಿದ ಭರತ್ 6 ಅಂಕ ಪಡೆದರು. ಅಮನ್ 7 ಟ್ಯಾಕಲ್ ಅಂಕ ಪಡೆದು ಯುಪಿ ರೈಡರ್ಗಳ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಸೌರಭ್ ನಂಡಲ್ 3 , ಅಂಕಿತ್ 2 ಆಂಕ ಪಡೆದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬೆಂಗಳೂರು ಡಿಫೆಂಡರ್ಗಳ ವಿರುದ್ಧ ಯುಪಿ ರೈಡರ್ಗಳ ಆಟ ನಡೆಯಲಿಲ್ಲ. ಪರ್ದೀಪ್ ನರ್ವಾಲ್ 12 ರೈಡ್ನಲ್ಲಿ ಕೇವಲ 4 ಅಂಕ ಪಡೆದರೆ ಸುರೇಂದ್ರ ಗಿಲ್ 9 ರೈಡ್ನಲ್ಲಿ ಕೇವಲ 2 ಅಂಕ ಮಾತ್ರ ಪಡೆದರು. ಸಬ್ಸ್ಟಿಟ್ಯೂಟ್ ಆಗಿ ಬಂದ ಶ್ರೀಕಾಂತ್ ಜಾಧವ್ 6 ಅಂಕ ಪಡೆದರು. ಡಿಫೆಂಡಿಂಗ್ನಲ್ಲಿ ನಿತೇಶ್ ಕುಮಾರ್ 6 ಮತ್ತು ಸುಮಿತ್ 4 ಅಂಕ ಪಡೆದು ಮಿಂಚಿದರಾದರೂ ಸೋಲನ್ನು ತಪ್ಪಿಸಲಾಗಲಿಲ್ಲ.
ಬೆಂಗಳೂರು ಬುಲ್ಸ್ 17 ಪಂದ್ಯಗಳಲ್ಲಿ 9 ಜಯ ಮತ್ತು 7 ಸೋಲು ಹಾಗೂ ಒಂದು ಟೈನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದರೆ, ಸೋಲು ಕಂಡ ಯೋಧ 14 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಹಾಗೂ 3 ಟೈ ಸಾಧಿಸಿ 6ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿತು.
ಇದನ್ನೂ ಓದಿ:ನಿರ್ಮಲಾ ಬಜೆಟ್ನಲ್ಲಿ ಕ್ರೀಡಾಕ್ಷೇತ್ರಕ್ಕೂ ಬಲ.. ಕಳೆದ ವರ್ಷಕ್ಕಿಂತ 305 ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಣೆ