ETV Bharat / sports

ಎಲಿಮಿನೇಟರ್​ ಪಂದ್ಯದಲ್ಲಿ ಪರ್ದೀಪ್ ಅಬ್ಬರ​: ಪುಣೇರಿ ಪಲ್ಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ ಯುಪಿ ಯೋಧ - ಯುಪಿ ಯೋಧ vs ಪುಣೇರಿ ಪಲ್ಟನ್ಸ್​

ದ್ವಿತೀಯಾರ್ಧದ ಕೆಲವೇ ನಿಮಿಷಗಳಲ್ಲಿ 3ನೇ ಬಾರಿ ಪಲ್ಟನ್ಸ್​ ತಂಡವನ್ನು ಗ್ರೌಂಟ್​ನಿಂದ ಹೊರ ಹಾಕಿದ ಯೋಧ 10ಕ್ಕೂ ಹೆಚ್ಚು ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಕೊನೆಯವರೆಗೂ ಮುನ್ನಡೆ ಕಾಪಾಡಿಕೊಂಡ ನಿತೇಶ್ ​ಕುಮಾರ್ ಪಡೆ 42 - 31ರ ಅಂತರದಲ್ಲಿ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯಿತು.

UP Yoddha beat Puneri Paltan and enter semifinal
ಪುಣೇರಿ ಪಲ್ಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ ಯುಪಿ ಯೋಧ
author img

By

Published : Feb 21, 2022, 9:28 PM IST

ಬೆಂಗಳೂರು: ರೆಕಾರ್ಡ್​ ಬ್ರೇಕರ್​ ಪರ್ದೀಪ್ ನರ್ವಾಲ್​ ಅವರ ಅಬ್ಬರದ ರೈಡಿಂಗ್​ ನೆರವಿನಿಂದ ಯುಪಿ ಯೋಧಾ 37-27ರ ಅಂತರದಿಂದ ಪುಣೇರಿ ಪಲ್ಟನ್ಸ್​ ತಂಡವನ್ನು ಬಗ್ಗು ಬಡಿದು ಸೆಮಿಫೈನಲ್ ಪ್ರವೇಶಿಸಿದೆ.

ಆರಂಭದಿಂದಲ್ಲಿ ಪಲ್ಟನ್ಸ್ ಆಟಕ್ಕೆ ಕಂಗೆಟ್ಟ ಯೋಧ ಕೇವಲ 7 ನಿಮಿಷಗಳಲ್ಲೇ ಆಲೌಟ್​ ಆಗಿ 1-9ರಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ, ಅಸಾಧಾರಣ ಕಮ್​ಬ್ಯಾಕ್ ಮಾಡಿದ ಯುಪಿ, ಪುಣೆ ತಂಡವನ್ನು ಮೊದಲಾರ್ಧದ ವೇಳೆಗೆ 2 ಬಾರಿ ಆಲೌಟ್ ಮಾಡಿ 27-15 ಮುನ್ನಡೆ ಕಾಯ್ದಕೊಂಡಿತು. ಆಕ್ರಮಣಕಾರಿ ಪ್ರದರ್ಶನ ತೋರಿದ ಪರ್ದೀಪ್​ 2 ಸೂಪರ್​ ರೈಡ್​ ಮಾಡಿದ್ದಲ್ಲದೇ ಅರ್ಧ ಸಮಯದಲ್ಲೇ ಸೂಪರ್​ 10 ಗಳಿಸಿಕೊಂಡರು.

ದ್ವಿತೀಯಾರ್ಧದ ಕೆಲವೇ ನಿಮಿಷಗಳಲ್ಲಿ 3ನೇ ಬಾರಿ ಪಲ್ಟನ್ಸ್​ ತಂಡವನ್ನು ಗ್ರೌಂಟ್​ನಿಂದ ಹೊರ ಹಾಕಿದ ಯೋಧ 10ಕ್ಕೂ ಹೆಚ್ಚು ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಕೊನೆಯವರೆಗೂ ಮುನ್ನಡೆಯವನ್ನು ಕಾಪಾಡಿಕೊಂಡ ನಿತೇಶ್ ​ಕುಮಾರ್ ಪಡೆ 42-31ರ ಅಂತರದಲ್ಲಿ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯಿತು.

ಪರ್ದೀಪ್ ನರ್ವಾಲ್ 3 ಸೂಪರ್ ರೈಡ್ ಸೇರಿದಂತೆ ಒಟ್ಟು 18 ಅಂಕ ಪಡೆದರೆ, ಡಿಫೆಂಡರ್ ಸುಮಿತ್​ 5, ನಾಯಕ ನಿತೇಶ್ ಕುಮಾರ್ 3 , ರೈಡರ್​ ಸುರೇಂದರ್​ ಗಿಲ್​ 5 ಅಂಕ ಪಡೆದು ಗೆಲುವಿನ ರೂವಾರಿಗಳಾದರು. ಪುಣೆ ಪರ ಅಸ್ಲಾಮ್​ ಇನಾಮ್ದಾರ್​ 10, ಆಕಾಶ್​ ಶಿಂದೆ 7, ಮೋಹಿತ್ ಗೋಯಟ್ 4, ಸೋಮ್​ಬೀರ್​ 3 ಅಮಕ ಪಡೆದರಾದರೂ ತಂಡದಕ್ಕೆ ಗೆಲುವು ತಂದುಕೊಡಲು ಇವರ ಆಟ ಸಾಕಾಗಲಿಲ್ಲ. ಯುಪಿ ಯೋಧ ಫೆಬ್ರವರಿ 23 ರಂದು ಮೊದಲ ಸೆಮಿಫೈನಲ್​ನಲ್ಲಿ ಪ್ರೊ ಕಬಡ್ಡಿ ಲೀಗ್​ನ ಬಲಿಷ್ಠ ತಂಡ ಪಾಟ್ನಾ ಪೈರೇಟ್ಸ್​ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ:ಎಲ್ಲ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಕ್ರಿಕೆಟರ್, ಕನ್ನಡತಿ ವನಿತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.