ETV Bharat / sports

ಪ್ಯಾರಾ ಏಷ್ಯನ್​ ಗೇಮ್ಸ್​: ಜಾವಲಿನ್​ ಥ್ರೋನಲ್ಲಿ ಭಾರತಕ್ಕೆ ಚಿನ್ನದ ಗರಿ.. ಮುಂದುವರಿದ ಪದಕಗಳ ಬೇಟೆ

ಪ್ಯಾರಾ ಏಷ್ಯನ್​ ಗೇಮ್ಸ್​ನ ಜಾವಲೀನ್​ ಥ್ರೋನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ.

ಅಥ್ಲೀಟಿ ಹ್ಯಾನಿ
ಅಥ್ಲೀಟಿ ಹ್ಯಾನಿ
author img

By ETV Bharat Karnataka Team

Published : Oct 25, 2023, 12:18 PM IST

Updated : Oct 25, 2023, 1:02 PM IST

ಹ್ಯಾಂಗ್​ಝೌ: ಚೀನಾದ ಹ್ಯಾಂಗ್​ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್​ ಗೇಮ್ಸ್​ನ ಮೂರನೇ ದಿನ ಜಾವಲಿನ್​ ಥ್ರೋನಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಪುರುಷರ ಎಫ್37 ಈವೆಂಟ್​ನಲ್ಲಿ ಭಾರತದ ಹ್ಯಾನಿ 55.97 ಮೀಟರ್‌ ದೂರ ಭರ್ಜಿ ಎಸೆಯುವ ಮೂಲಕ ಹಿಂದಿನ 46.28 ಮೀಟರ್‌ಗಳ ಪ್ಯಾರಾ ಏಷ್ಯನ್​ ಗೇಮ್ಸ್ ದಾಖಲೆಯನ್ನು ಮುರಿದಿದ್ದಾರೆ. ಇವರ ಹೊರತಾಗಿ ಭಾರತ್ ಬಾಬಿ ಕೂಡ ಇದೇ ಸ್ಪರ್ಧೆಯಲ್ಲಿ 42.23 ಮೀಟರ್‌ಗಳೊಂದಿಗೆ ಆರನೇ ಸ್ಥಾನ ಪಡೆದಿದ್ದಾರೆ.

ಇದಕ್ಕೂ ಮೊದಲು ಸುಮಿತ್ ಆಂಟಿಲ್ ಮತ್ತು ಪುಷ್ಪೇಂದ್ರ ಸಿಂಗ್ ಅವರು ಪುರುಷರ ಎಫ್ 64 ಜಾವೆಲಿನ್ ಥ್ರೋ ಈವೆಂಟ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಆಂಟಿಲ್ 73.29 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. ಮೊದಲ ಥ್ರೋನಲ್ಲಿ 66.22 ಮೀ ಎಸೆಯುವುದರೊಂದಿಗೆ ಪ್ರಾರಂಭಿಸಿದ ಅವರು ಎರಡನೇ ಪ್ರಯತ್ನದಲ್ಲಿ 70.48 ಮೀಟರ್‌ ಮತ್ತು ಅಂತಿಮವಾಗಿ ಮೂರನೇ ಪ್ರಯತ್ನದಲ್ಲಿ 73.29 ಮೀ ದೂರ ಭರ್ಜಿ ಎಸೆದು ತಮ್ಮದೆ ಆದ ದಾಖಲೆ ಮುರಿದು ಚಿನ್ನದ ಪದಕವನ್ನು ಗೆದ್ದರು.

ಟೇಬಲ್​ ಟೆನಿಸ್​ನಲ್ಲಿ ಕಂಚು: ಪುರುಷರ ಟೇಬಲ್​ ಟೆನಿಸ್​ ಸಿಂಗಲ್ಸ್​ ವಿಭಾಗದಲ್ಲಿ ಸಂದೀಪ್​ ಡಾಂಗಿ ಅದ್ಭುತ ಪ್ರದರ್ಶನ ತೋರಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಮತ್ತೊಂದೆಡೆ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ SL3-SU5ನಲ್ಲಿ ತುಳಸಿಮತಿ ಮುರುಗೇಶನ್ ಜೋಡಿ ಕಂಚಿನ ಪದಕವನ್ನು ಗೆದ್ದಿದ್ದಾರೆ

ಡಿಸ್ಕಸ್​ ಥ್ರೋನಲ್ಲಿ ಭಾರತಕ್ಕೆ ಬೆಳ್ಳಿ: ಮಹಿಳೆಯರ ಡಿಸ್ಕಸ್​ ಥ್ರೋ-F54/55 ಈವೆಂಟ್‌ನಲ್ಲಿ ಭಾರತದ ನಾರಿ ಪೂಜಾ ಅವರು 18.17 ಎಸೆತದೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಆರ್ಚರಿಯಲ್ಲಿ ಕಂಚು: ಮಹಿಳೆಯರ ಆರ್ಚರಿ ಡಬಲ್ಸ್​ ಕಾಂಪೌಂಡ್​ ಈವೆಂಟ್​ನಲ್ಲಿ ಭಾರತದ​ ಪ್ಯಾರಾ ಆರ್ಚರ್ಸ್ ಶೀತಲ್ ದೇವಿ ಮತ್ತು ಸರಿತಾ ಸುರಕ್ಷಿತ ಬೆಳ್ಳಿ ಪದಕ ಗೆದ್ದಿದ್ದಾರೆ. ಆದರೆ, ಫೈನಲ್​ನಲ್ಲಿ ಚೀನಾ ವಿರುದ್ಧ 152 - 150 ಅಂತರದಿಂದ ಭಾರತ ಸೋಲನುಭವಿಸಿತು. ಇದಕ್ಕೂ ಮುನ್ನ ಪುರುಷರ ಡಬಲ್ಸ್​ ರಿಕರ್ವ್​ನಲ್ಲಿ ಆರ್ಚರಿ ಹರ್ವಿಂದರ್​ ಸಿಂಗ್​ ಮತ್ತು ಸಾಹಿಲ್​ ಜೋಡಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಬ್ಯಾಡ್ಮಿಂಟನ್​ನಲ್ಲಿ ಕಂಚು: ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್​ -​ಎಸ್​ಎಲ್​-3 ಈವೆಂಟ್​ನಲ್ಲಿ ಪ್ಯಾರಾ ಬ್ಯಾಡ್ಮಿಂಟನ್​ ಮಾನ್ಸಿ ಜೋಶಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

200 ಮೀ ಓಟದ ಸ್ಪರ್ಧೆಯಲ್ಲಿ ಕಂಚು: ಪುರುಷರ 200 ಮೀಟರ್​ ಓಟದಲ್ಲಿ ಭಾರತದ ಅಥ್ಲೀಟಿ ನಾರಾಯಣ ಠಾಕೂರ್​ 29.83 ಸೆಕೆಂಡ್​ನಲ್ಲಿ ಗುರಿಯನ್ನು ತಲುಪುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದರೊಂದಿಗೆ ಭಾರತ ಪ್ಯಾರಾ ಏಷ್ಯನ್ ಗೇಮ್ಸ್ 2023ರ ಪದಕಗಳ ಸಂಖ್ಯೆಯು 43 ಆಗಿದೆ. ಇದರಲ್ಲಿ 11 ಚಿನ್ನ, 14 ಬೆಳ್ಳಿ ಮತ್ತು 18 ಕಂಚು ಸೇರಿವೆ. ಅಂಕಪಟ್ಟಿಯಲ್ಲಿ ಭಾರತದ 5ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್​ ವಿಶ್ವಕಪ್ 2023​ : ಇಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿರುವ ನೆದರ್ಲೆಂಡ್​: ಹೀಗಿದೆ ಪಿಚ್​ ವರದಿ

Last Updated : Oct 25, 2023, 1:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.