ಟೋಕಿಯೊ( ಜಪಾನ್): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಜ್ಯೋತಿ ಮಾರ್ಚ್ 25 ರಿಂದ ಆರಂಭವಾಗಲಿದೆ. ಈಶಾನ್ಯ ಜಪಾನ್‌ನ ಫುಕುಶಿಮಾ ಪ್ರಾಂತ್ಯದಲ್ಲಿ ನಿಗದಿಯಂತೆ ರಿಲೇ ಪ್ರಾರಂಭವಾಗಲಿದೆ ಎಂದು ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ.
2011 ರ ಸುನಾಮಿ ಮತ್ತು ಭೂಕಂಪದಿಂದ ತೀವ್ರವಾಗಿ ಹಾನಿಗೊಳಗಾದ ಫುಕುಶಿಮಾದ ಜೆ - ವಿಲೇಜ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಟಾರ್ಚ್ ರಿಲೇಗೆ ಭವ್ಯ ಆರಂಭ ನೀಡಲಾಗುವುದು ಎಂದು ಟೋಕಿಯೋ 2020 ಸಂಘಟನಾ ಸಮಿತಿ ಹೇಳಿದೆ. ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಟೋಕಿಯೊದಿಂದ ರಿಲೇ ಆರಂಭವಾಗುವ ಫುಕುಶಿಮಾ ಪ್ರಯಾಣಿಸುವವರ ಸಂಖ್ಯೆಯನ್ನು ನಿರ್ಬಂಧಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರಾರಂಭವನ್ನು ಸರಳೀಕರಿಸಲಾಗಿದ್ದು, ಸಮಾರಂಭದಲ್ಲಿ ಪ್ರದರ್ಶನ ನೀಡುವವರ ಸಂಖ್ಯೆ ಕಡಿಮೆ ಮಾಡಲಾಗಿದೆ. ಕ್ರೀಡಾಜ್ಯೋತಿ ಜಪಾನ್‌ನಲ್ಲಿ 121 ದಿನಗಳವರೆಗೆ ಸಂಚರಿಸಲಿದ್ದು, ಜುಲೈ 23 ರಂದು ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ತಲುಪುವ ಮೊದಲು ಎಲ್ಲಾ 47 ಪ್ರಾಂತಗಳಲ್ಲಿ ಜ್ಯೋತಿ ಸಂಚರಿಸಲಿದೆ. ಆರಂಭಿಕ ಸಮಾರಂಭ ಮತ್ತು ಮೊದಲ ದಿನದ ಫುಕುಶಿಮಾ ಟಾರ್ಚ್ ರಿಲೇ ಸಾರ್ವಜನಿಕರಿಗೆ ಮುಕ್ತವಾಗುವುದಿಲ್ಲ, ಆದರೆ ಟೋಕಿಯೋ 2020 ಅಧಿಕೃತ ಚಾನೆಲ್ ಮೂಲಕ ನೇರ ಪ್ರಸಾರವಾಗಲಿದೆ.
ಓದಿ : ಐಎಸ್ಎಲ್ "ಭಾರತೀಯ ಕ್ರೀಡಾ ಉದ್ಯಮಕ್ಕೆ ಹೊಸ ಮಾನದಂಡ": ಸೌರವ್ ಗಂಗೂಲಿ