ETV Bharat / sports

ಬಜರಂಗ್ ಬೆನ್ನಲ್ಲೇ ವಿಶ್ವಚಾಂಪಿಯನ್​ಶಿಪ್​ನಿಂದ ಹಿಂದೆ ಸರಿದ ರವಿ ದಹಿಯಾ

ನಾನು ಸಿದ್ಧತೆಯಿಲ್ಲದೆ ಅಕಾಡಕ್ಕಿಳಿಯಲು ಬಯಸುವುದಿಲ್ಲ. ಸಾಕಷ್ಟು ಅಭ್ಯಾಸವಿಲ್ಲದೆ ಸ್ಪರ್ಧಿಸುವುದರಿಂದ ಏನು ಪ್ರಯೋಜನವಿದೆ. ಹಾಗಾಗಿ, ನಾನು ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಬೇಕೆಂದು ನಿರ್ಧರಿಸಿದ್ದೇನೆ. ಯಾಕೆಂದರೆ, ನಾನು ಸಾಕಷ್ಟು ಅಭ್ಯಾಸವಿಲ್ಲದೆ ಟ್ರಯಲ್ಸ್​ಗೆ ಹೋಗಲು ಬಯಸುವುದಿಲ್ಲ..

World Championship
ರವಿಕುಮಾರ್ ದಹಿಯಾ
author img

By

Published : Aug 25, 2021, 10:33 PM IST

ನವದೆಹಲಿ : ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ಕುಸ್ತಿಪಟು ರವಿ ದಹಿಯಾ ಅಕ್ಟೋಬರ್‌ನಲ್ಲಿ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಭಾರತದ ಕುಸ್ತಿ ಫೆಡರೇಶನ್ (WFI) ಆಯೋಜಿಸುವ ಟ್ರಯಲ್ಸ್​ಗೆ ತಯಾರಾಗಲು ಸಮಯ ಸಾಕಾಗಿಲ್ಲ. ಆದ್ದರಿಂದ ತಾವು ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುತ್ತಿಲ್ಲ ಎಂದು ಬುಧವಾರ ರವಿಕುಮಾರ್​ ಹೇಳಿದ್ದಾರೆ. ಅಕ್ಟೋಬರ್ 2 ರಿಂದ 10ರವರೆಗೆ ನಾರ್ವೆಯ ಓಸ್ಲೋದಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆಯಲಿದೆ. ಇದಕ್ಕಾಗಿ ಡಬ್ಲ್ಯುಎಫ್‌ಐ ಮುಂದಿನ ವಾರ ಟ್ರಯಲ್ಸ್​ ಆಯೋಜಿಸಿತ್ತು.

"ನಾನು ಸಿದ್ಧತೆಯಿಲ್ಲದೆ ಅಕಾಡಕ್ಕಿಳಿಯಲು ಬಯಸುವುದಿಲ್ಲ. ಸಾಕಷ್ಟು ಅಭ್ಯಾಸವಿಲ್ಲದೆ ಸ್ಪರ್ಧಿಸುವುದರಿಂದ ಏನು ಪ್ರಯೋಜನವಿದೆ. ಹಾಗಾಗಿ, ನಾನು ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಬೇಕೆಂದು ನಿರ್ಧರಿಸಿದ್ದೇನೆ. ಯಾಕೆಂದರೆ, ನಾನು ಸಾಕಷ್ಟು ಅಭ್ಯಾಸವಿಲ್ಲದೆ ಟ್ರಯಲ್ಸ್​ಗೆ ಹೋಗಲು ಬಯಸುವುದಿಲ್ಲ" ಎಂದು ದಹಿಯಾ ಪಿಟಿಐಗೆ ತಿಳಿಸಿದ್ದಾರೆ.

ದಹಿಯಾ ವಿಶ್ವಚಾಂಪಿಯನ್​ಶಿಪ್​ನಿಂದ ಹೊರ ಬರುತ್ತಿರುವ ಎರಡನೇ ಸ್ಟಾರ್​ ಕುಸ್ತಿಪಟುವಾಗಿದ್ದಾರೆ. ಈಗಾಗಲೇ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ ಕೂಡ ಹಿಂದೆ ಸರಿದಿದ್ದರು. ಆದರೆ, ಅವರು ಮಂಡಿಯಲ್ಲಿ ಗಂಭೀರ ಗಾಯವಾಗಿರುವ ಕಾರಣ 6 ವಾರಗಳ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿರುವುದರಿಂದ ವಿಶ್ವ ಚಾಂಪಿಯನ್​ಶಿಪ್​ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದರು.

ಇದನ್ನು ಓದಿ:ಗಾಯದ ಕಾರಣ ವಿಶ್ವಚಾಂಪಿಯನ್​ಶಿಪ್​​ನಿಂದ​ ಬಜರಂಗ್ ಪೂನಿಯಾ ದೂರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.