ETV Bharat / sports

ಹತ್ತೇ ಸೆಕೆಂಡ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್​ಗೇರಿದ ನೀರಜ್ ಚೋಪ್ರಾ! - ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2022 ಸುದ್ದಿ

ಒಲಿಂಪಿಕ್ಸ್‌ ಚಾಂಪಿಯನ್ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.39 ಮೀ. ದೂರ ಜಾವೆಲಿನ್​ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದರು.

Neeraj Chopra qualifies for maiden World Championships final, World Athletic Championship 2022, Neeraj Chopra entry to Final round, Neeraj Chopra news, World Athletic Championship 2022 news, javelin throw, ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022, ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಪ್ರವೇಶ, ನೀರಜ್ ಚೋಪ್ರಾ ಸುದ್ದಿ, ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2022 ಸುದ್ದಿ, ಜಾವೆಲಿನ್ ಎಸೆತ,
ಕೃಪೆ: Twitter
author img

By

Published : Jul 22, 2022, 7:25 AM IST

ಒರೆಗನ್‌(ಅಮೆರಿಕ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ಟೋಕಿಯೊ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಭಾರತದ ಸ್ಟಾರ್ ಅಥ್ಲೀಟ್ ಫೈನಲ್‌ಗೆ ಅರ್ಹತೆ ಪಡೆಯಲು ಕೇವಲ 10 ಸೆಕೆಂಡುಗಳನ್ನಷ್ಟೇ ತೆಗೆದುಕೊಂಡರು ಎಂಬುದಿಲ್ಲಿ ವಿಶೇಷವಾಗಿದೆ.

ಶುಕ್ರವಾರ ನಡೆದ ಪುರುಷರ ಜಾವೆಲಿನ್ ಎಸೆತದ ಎ ಗುಂಪಿನ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಸ್ಪರ್ಧಿಸಿದ್ದರು. ನಿಯಮಗಳ ಪ್ರಕಾರ, ಭಾನುವಾರದ ಫೈನಲ್‌ಗೆ ತಲುಪಲು 83.50 ಮೀಟರ್‌ಗಳ ಜಾವೆಲಿನ್ ಥ್ರೋ ಎಸೆಯುವ ಅಗತ್ಯವಿತ್ತು. ಫೈನಲ್​ಗೆ ಅಂತಿಮವಾಗಿ 12 ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮಾತ್ರ ಅವಕಾಶ ಸಿಗುತ್ತದೆ. ಅದರಂತೆ ನಿನ್ನೆ ನಡೆದ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.39 ಮೀ. ಜಾವೆಲಿನ್​ ಎಸೆದು ಫೈನಲ್​ಗೆ ಲಗ್ಗೆಯಿಟ್ಟರು.

ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅಂತಿಮ ಹಂತವು ಜುಲೈ 24ರಂದು (ಭಾನುವಾರ) ಭಾರತೀಯ ಕಾಲಮಾನ ಬೆಳಿಗ್ಗೆ 7.05ಕ್ಕೆ ನಡೆಯಲಿದೆ. ಇದು ನೀರಜ್ ಚೋಪ್ರಾ ಅವರ ಮೊದಲ ಸೀನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್ ಆಗಿದೆ. ಗ್ರೆನಡಾದ ಹಾಲಿ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಹಾಗೂ ಭಾರತದ ಮತ್ತೊಬ್ಬ ರೋಹಿತ್ ಯಾದವ್ ಬಿ ಗುಂಪಿನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಇದನ್ನೂ ಓದಿ: Interview: 'ಒಲಿಂಪಿಕ್​ ಚಾಂಪಿಯನ್​ ಆಗುವ ಒತ್ತಡ ಅನುಭವಿಸಿಲ್ಲ': ನೀರಜ್​ ಚೋಪ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.