ನವದೆಹಲಿ: ಕರೋನ ವೈರಸ್ ಭೀತಿಯಿಂದ ಮುಂದಿನ ತಿಂಗಳು ನಡೆಯಲಿರುವ ರೈಫಲ್ಸ್ ಒಲಿಂಪಿಕ್ಸ್ ಟೆಸ್ಟ್ಗೆ ಭಾರತ ತಂಡವನ್ನು ಕಳುಹಿಸದಿರಲು ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ನಿರ್ಧರಿಸಿದೆ.
ಭಾರತ ತಂಡದ ಶೂಟರ್ಗಳು ಏಪ್ರಿಲ್ 16ರಿಂದ 26ರವರೆಗೆ ನಡೆಯಲಿರುವ ಒಲಿಂಪಿಕ್ಸ್ ಶೂಟಿಂಗ್ ಟೆಸ್ಟ್ ಇವೆಂಟ್ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಕೊರಿಯಾ ಪ್ರಯಾಣಿಸಬೇಕಿತ್ತು. ಆದರೆ ವಿಶ್ವದೆಲ್ಲೆಡೆ ಭಯಭೀತಗೊಳಿಸಿರುವ ಕೊರೊನ ವೈರಸ್ಗೆ ಹೆದರಿ ಅಲ್ಲಿಗೆ ಭಾರತದ ಶೂಟರ್ಗಳನ್ನು ಕಳುಹಿಸದಿರಲು ಎನ್ಆರ್ಎಐ ನಿರ್ಧರಿಸಿದೆ.
ಮೊದಲಿಗೆ ಈ ಟೆಸ್ಟ್ ಇವೆಂಟ್ಗೆ ಸಂಬಂಧಿಸಿದಂತೆ ನಾವು ನಮ್ಮ ತಂಡವನ್ನು ಆಯ್ಕೆ ಮಾಡಿದ್ದೇವೆ. ಆದರೆ, ನಾನು ನಮ್ಮ ಮಕ್ಕಳನ್ನು ಯಾವುದೇ ಅಪಾಯಕ್ಕೆ ತಳ್ಳುವುದಕ್ಕೆ ಹೋಗುವುದಿಲ್ಲ. ಒಂದು ವೇಳೆ, ನಮಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಥವಾ ಅಂತಾರಾಷ್ಟ್ರೀಯ ಒಲಿಂಪಿಕ್ ಒಕ್ಕೂಟದಿಂದ ಯಾವುದೇ ಸಲಹೆ ಪಡೆದರೂ ಅಥವಾ ನಮ್ಮ ಮೌಲ್ಯಮಾಪನದ ದೃಷ್ಟಿಯಿಂದ ಹೋಗಬೇಕು ಎನಿಸಿದರೂ ಅದೊಂದು ಬೆದರಿಕೆ ಎಂದೇ ನಾನು ಭಾವಿಸುತ್ತೇನೆ ಎಂದು" ಎನ್ಆರ್ಐ ಅಧ್ಯಕ್ಷ ರಣೀಂದರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾನು ಯಾರೊಬ್ಬರನ್ನು ಅಪಾಯಕ್ಕೆ ತಳ್ಳುವುದಿಲ್ಲ, ಒಂದು ವೇಳೆ, ನಾವು ಅಲ್ಲಿಗೆ ತೆರಳಿದರೆ ಯಾರಿಗಾದರೂ ಕೊರೊನ ವೈರಸ್ಗೆ ತುತ್ತಾಗುವ ಅವಕಾಶವಿರುತ್ತದೆ. ನಾವು ಟೆಸ್ಟ್ಗೆ ತೆರಳದಿದ್ದರೆ ಹಣ ಕಳೆದುಕೊಂಡರೂ ಚಿಂತೆಯಿಲ್ಲ. ನಮ್ಮ ಶೂಟರ್ಗಳನ್ನು ತರಬೇತಿಗಾಗಿ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.