ಪ್ಯಾರಿಸ್( ಫ್ರಾನ್ಸ್) : ಫ್ರೆಂಚ್ ಓಪನ್‌ನ ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರು ನಂ. 1 ಆಟಗಾರ ಕಾರ್ಲೋಸ್ ಅಲ್ಕರೇಜ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಫೈನಲ್‌ಗೆ ಕಾಲಿಟ್ಟಿದ್ದು, ಮತ್ತೊಂದು ಗ್ರ್ಯಾಂಡ್ಸ್ಲ್ಯಾಮ್ನ ಸನಿಹಕ್ಕೆ ತಲುಪಿದ್ದಾರೆ. 23ನೇ ಗ್ರ್ಯಾಂಡ್ಸ್ಲಾಮ್ ಗೆಲುವಿಗೆ ಕೇವಲ ಒಂದು ಜಯ ಮಾತ್ರ ಅಗತ್ಯವಿದೆ.
ಶುಕ್ರವಾರ ನಡೆದ ಫ್ರೆಂಚ್ ಓಪನ್‌ನಲ್ಲಿ ಇಬ್ಬರು ಅಗ್ರ ಟೆನಿಸ್ ಆಟಗಾರರು ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. ಕಾರ್ಲೋಸ್ ಅವರನ್ನು 6-3, 5-7, 6-1, 6-1 ಅಂತರದಿಂದ ಸೋಲಿಸಿ, ಜೊಕೊವಿಕ್ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಜೊಕೊವಿಕ್ ವಿರುದ್ಧ ಅಲ್ಕರೇಜ್ ಮೇಲುಗೈ ಸಾಧಿಸದುವ ಮೂಲಕ ಮೊದಲ ಸೆಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಆದರೆ, ಎರಡನೇ ಸೆಟ್‌ನ ಬಳಿಕ ಅಲ್ಕರೇಜ್ ಅವರು ಕೈ ಹಾಗೂ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ಹೀಗಾಗಿ, ಜೊಕೊವಿಕ್ ದಾಳಿಯನ್ನು ಅತ್ಯಂತ ಚತುರತೆಯಿಂದ ಎದುರಿಸಲು Alcaraz ವಿಫಲವಾದರು. ಕೊನೆಯ ಎರಡು ಸೆಟ್‌ಗಳು ಕೂಡ ಸಂಪೂರ್ಣವಾಗಿ ಬದಲಾಯಿತು. ಹೀಗಾಗಿ, ಜೊಕೊವಿಕ್ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡರು. ರೋಮಾಂಚಕ ಹಣಾಹಣಿಯ ಎರಡನೇ ಸೆಟ್ ಆಟದ ವೇಳೆ ಕಾರ್ಲೋಸ್ ಅದ್ಭುತವಾದ ಶಾಟ್ ಒಂದನ್ನು ಬೀಸಿದರು. ಕೆಲವೇ ನಿಮಿಷಗಳಲ್ಲಿ ಈ ಶಾಟ್ ವೈರಲ್ ಆಯಿತು.
ಇದನ್ನೂ ಓದಿ : ಫ್ರೆಂಚ್ ಓಪನ್ ಟೆನ್ನಿಸ್: 12ನೇ ಬಾರಿ ಪ್ರಶಸ್ತಿ ಗೆದ್ದು ವಿಶ್ವದಾಖಲೆ ಬರೆದ ನಡಾಲ್!
ಇದು ಜೊಕೊವಿಕ್‌ಗೆ 45ನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ಆಗಿದ್ದು, Alcarazಗೆ ಎರಡನೇ ಪಂದ್ಯವಾಗಿತ್ತು. ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಜೊಕೊವಿಕ್, ಎದುರಾಳಿ ಆಟಗಾರ ಕಾರ್ಲೋಸ್ ಅನುಭವಿಸಿದ ಗಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾನು ಆವರ ಬೇಸರವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಗಾಯಗೊಂಡ ಬಗ್ಗೆ ವಿಷಾದವಿದೆ. ಅವರು ಶೀಘ್ರಚವಾಗಿ ಚೇತರಿಸಿಕೊಳ್ಳುತ್ತಾರೆಂದು ಎಂದು ನಾನು ಭಾವಿಸುತ್ತೇನೆ. ನಾನು ಅವರಿಗೆ ನೆಟ್‌ನಲ್ಲಿಯೂ ಹೇಳಿದ್ದೇನೆ, ಆತ ಬಹಳ ಚಿಕ್ಕ ವಯಸ್ಸಿನವ. ಮುಂದಿನ ದಿನಗಳಲ್ಲಿಸಾಕಷ್ಟು ಸಮಯ ಇದೆ. ಈ ಟೂರ್ನಿಯನ್ನು ಭವಿಷ್ಯದಲ್ಲಿ ಆತ ಸಾಕಷ್ಟು ಬಾರಿ ಗೆಲ್ಲಲಿದ್ದಾನೆ. ಇದು ಖಂಡಿತಾ" ಎಂದು ಹೇಳಿದರು.
ಇದನ್ನೂ ಓದಿ : ಫ್ರೆಂಚ್ ಓಪನ್ ಫೈನಲ್ : ಜೋಕೊವಿಕ್ ವಿರುದ್ಧ ಗೆದ್ದು ಫೆಡರರ್ ದಾಖಲೆ ಸರಿಗಟ್ತಾರಾ ನಡಾಲ್?
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ 3ನೇ ಶ್ರೇಯಾಂಕದ ಜೊಕೊವಿಕ್ ಅವರು ನಾರ್ವೆಯ 4ನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಅಥವಾ 22ನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ರೂಡ್ ಕಳೆದ ವರ್ಷ ಎರಡು ಬಾರಿ ರನ್ನರ್-ಅಪ್ ಆಗಿದ್ದರು.
ಇದನ್ನೂ ಓದಿ : ಫ್ರೆಂಚ್ ಓಪನ್ : 3ನೇ ಸುತ್ತಿಗೆ ಜೋಕೊವಿಕ್ ; ಫೆಡರರ್ - ಆಶ್ಲೆಗ್ ಬಾರ್ಟಿ ಔಟ್