ETV Bharat / sports

ತನಿಖೆ ನಡೆಯುತ್ತಿರುವುದರಿಂದ ಸುಶೀಲ್ ಕುಮಾರ್ ಕುರಿತು ಯಾವುದೇ ನಿರ್ಧಾರವಿಲ್ಲ: ಡಬ್ಲ್ಯೂಎಫ್ಐ - ಛತ್ರಸಾಲ್ ಕೊಲೆ ಪ್ರಕರಣ

ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಪ್ರಮುಖ ಆರೋಪಿಯಾಗಿ ಗುರ್ತಿಸಲ್ಪಟ್ಟಿದ್ದರು. ಅವರನ್ನು ನವದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದರು.

ಸುಶೀಲ್ ಕುಮಾರ್
ಸುಶೀಲ್ ಕುಮಾರ್
author img

By

Published : May 24, 2021, 7:19 PM IST

ನವದೆಹಲಿ: ಕೊಲೆ ಆರೋಪದಿಂದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ಬಂಧನವಾಗಿರುವುದು ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಕಳಂಕ ತಂದಿದೆ ಎಂದು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅಭಿಪ್ರಾಯಪಟ್ಟಿದ್ದಾರೆ.

ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಪ್ರಮುಖ ಆರೋಪಿಯಾಗಿ ಗುರ್ತಿಸಲ್ಪಟ್ಟಿದ್ದರು. ಅವರನ್ನು ನವದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದರು. ಇವರ ಜೊತೆಗೆ ಇದೇ ಪ್ರಕೆಣದ ಆರೋಪಿ ಅಜಯ್ ಎಂಬಾತನನ್ನು ಸಹ ಬಂಧಿಸಲಾಗಿತ್ತು.

ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದ ಸುಶೀಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವುದು ವಿಶ್ವದಾದ್ಯಂತ ಕುಸ್ತಿ ಆಟಕ್ಕೆ ಕಳಂಕ ತಂದಿದೆ ಎಂದು ವಿನೋದ್ ತೋಮರ್​ ಹೇಳಿದ್ದಾರೆ.

"ಕಾನೂನು ಅವರನ್ನು ತಪ್ಪಿತಸ್ಥ ಅಥವಾ ನಿರಪರಾಧಿ ಕರೆದರೂ ಈಗ ಏನಾಗಿದೆಯೋ ಅದು ಕುಸ್ತಿಗೆ ಒಳ್ಳೆಯದಂತೂ ಅಲ್ಲ. ಸುಶೀಲ್ ಕಷ್ಟಪಟ್ಟು ದುಡಿದು, ಕುಸ್ತಿಯನ್ನು ಎತ್ತರಕ್ಕೆ ತಂದು ಮಹತ್ವಾಕಾಂಕ್ಷಿ ಕುಸ್ತಿಪಟುಗಳಿಗೆ ಸಹಾಯ ಮಾಡಿದ ವ್ಯಕ್ತಿ." ಎಂದು ವಿನೋದ್ ಎಎನ್​ಐಗೆ ತಿಳಿಸಿದ್ದಾರೆ.

ಯಾವುದು ನಿಜ ಎಂಬುದು ನಮಗೆ ಗೊತ್ತಿಲ್ಲ. ಅವರು ಏನಾದರೂ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ಆ ಕಾನೂನು ಸ್ಪಷ್ಟಪಡಿಸುತ್ತದೆ. ಆದರೆ ಒಕ್ಕೂಟ ಅವರ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ. ಅವರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ಘೋಷಿಸುವವರೆಗೂ, ಒಕ್ಕೂಟವು ಅವರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

"ನಾವು ಶೀಘ್ರದಲ್ಲೇ ಸುಶೀಲ್ ಕುಮಾರ್ ಬಗ್ಗೆ ಫೆಡರೇಶನ್ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಅವರ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಈಗ ಇದು ನ್ಯಾಯಾಲಯದ ವಿಷಯವಾಗಿದೆ ಮತ್ತು ನ್ಯಾಯಾಲಯವೇ ತೀರ್ಮಾನಿಸಲಿ" ಎಂದು ವಿನೋದ್ ತಿಳಿಸಿದ್ದಾರೆ.

ಇದನ್ನು ಓದಿ:ಕುಸ್ತಿಪಟು ಕೊಲೆ ಪ್ರಕರಣ.. ಸುಶೀಲ್ ಕುಮಾರ್ ಬಂಧನಕ್ಕೂ ಮುನ್ನ 18 ದಿನ ಪೊಲೀಸರಿಂದ ತಪ್ಪಿಸಿಕೊಂಡ ರೋಚಕ ಕಹಾನಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.