ಪ್ಯಾರಿಸ್(ಫ್ರಾನ್ಸ್): ಕೋವಿಡ್ ಲಸಿಕೆ ವಿಚಾರಕ್ಕೆ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸಲು ಸಾಧ್ಯವಾಗದ ಸೆರ್ಬಿಯಾದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೋವಿಡ್ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಈಗಾಗಲೇ ವ್ಯಾಕ್ಸಿನೇಷನ್ ನಿಯಮಗಳನ್ನು ಸಡಿಲಿಕೆ ಮಾಡಿದ್ದು, ಮೇ ತಿಂಗಳಲ್ಲಿ ನಡೆಯುವ ಫ್ರೆಂಚ್ ಓಪನ್ ಮೂಲಕ ಜೊಕೊವಿಕ್ಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಮಾರ್ಚ್ 14ರಿಂದ ಕ್ರೀಡಾ ಕ್ರೀಡಾಂಗಣಗಳು ಮತ್ತು ರೆಸ್ಟೋರೆಂಟ್‌ಗಳಂತಹ ಸ್ಥಳಗಳನ್ನು ಪ್ರವೇಶ ಪಡೆಯಲು ಜನರು ಇನ್ನು ಮುಂದೆ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತೋರಿಸಬೇಕಾಗಿಲ್ಲ ಎಂದು ಫ್ರೆಂಚ್ ಪ್ರಧಾನಮಂತ್ರಿ ಜೀನ್ ಕ್ಯಾಸ್ಟೆಕ್ಸ್ ಗುರುವಾರ ಘೋಷಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅಥವಾ ವ್ಯಾಕ್ಸಿನೇಷನ್ ನಿಯಮಗಳನ್ನು ಬಿಗಿಗೊಳಿಸದೇ ಇದ್ದರೆ, ನೊವಾಕ್ ಜೊಕೊವಿಕ್ ಅವರು ಫ್ರೆಂಚ್ ಓಪನ್ನಲ್ಲಿ ಭಾಗವಹಿಸುವ ಸಾಧ್ಯತೆ ದಟ್ಟವಾಗಿರುತ್ತದೆ.
ಇದನ್ನೂ ಓದಿ:ರಹಾನೆ-ಪೂಜಾರ ಭವಿಷ್ಯದ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್ ಶರ್ಮಾ
ಇನ್ನು ಕೋವಿಡ್ ಲಸಿಕೆಯನ್ನು ಕಡ್ಡಾಯ ಮಾಡಿದರೆ, ಮುಂದಿನ ದಿನಗಳಲ್ಲೂ ಕೂಡಾ ಗ್ರ್ಯಾಂಡ್ ಸ್ಲ್ಯಾಮ್ಗಳಿಂದ ದೂರ ಇರುವುದಾಗಿ ನೊವಾಕ್ ಜೊಕೊವಿಕ್ ಹೇಳಿದ್ದಾರೆಂದು ಬಿಬಿಸಿ ವರದಿ ಮಾಡಿತ್ತು.