ETV Bharat / sports

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರಕಟ ; ನೀರಜ್ ಚೋಪ್ರಾ ಸೇರಿ 11 ಕ್ರೀಡಾಪಟುಗಳ ಹೆಸರು ಘೋಷಣೆ - Neeraj Chopra latest News

ಈ ಹಿಂದೆ ಈ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಭಾರತದ ಹಾಕಿ ತಂಡ ಐತಿಹಾಸಿಕ ಪ್ರದರ್ಶನದ ತೋರಿದ್ದರಿಂದ ಲೆಜೆಂಡರಿ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನಿಟ್ಟು ಮರು ನಾಮಕರಣ ಮಾಡಿದ್ದಾರೆ..

Neeraj, Mithali and Chhetri among 11 recommended for Khel Ratna; 35 named for Arjuna Award
ನೀರಜ್ ಚೋಪ್ರಾ
author img

By

Published : Oct 27, 2021, 6:27 PM IST

ನವದೆಹಲಿ : ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 11 ಕ್ರೀಡಾಪಟುಗಳನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ಇಂದು (ಬುಧವಾರ) ಶಿಫಾರಸು ಮಾಡಿದೆ.

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಪಡೆದ ನೀರಜ್ ಚೋಪ್ರಾ, ಒಲಿಂಪಿಕ್ ಪದಕ ಇತರೆ ವಿಜೇತರಾದ ರವಿ ದಹಿಯಾ, ಪಿಆರ್ ಶ್ರೀಜೇಶ್ ಮತ್ತು ಲವ್ಲಿನಾ ಬೊರ್ಗೊಹೈ ಅವರನ್ನು ಸೇರಿದಂತೆ ಒಟ್ಟು 11 ಕ್ರೀಡಾಪಟುಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಭಾರತದ ಹಿರಿಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ಮಿಥಾಲಿ ರಾಜ್ ಹಾಗೂ ಫುಟ್​ಬಾಲ್​ ಆಟಗಾರ ಸುನಿಲ್ ಛೆಟ್ರಿ ಅವರ ಹೆಸರನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ. ಸುನಿಲ್ ಛೆಟ್ರಿ ಭಾರತದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಶಿಫಾರಸು ಮಾಡಿದ ಮೊದಲ ಭಾರತೀಯ ಫುಟ್ಬಾಲ್ ಆಟಗಾರರಾಗಿದ್ದಾರೆ.

2021 ಭಾರತಕ್ಕೆ ವಿಶೇಷ ವರ್ಷವಾಗಿದೆ. ಹಲವಾರು ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇನ್ನು ಇದರೊಂದಿಗೆ 35 ಭಾರತೀಯ ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ ಘೋಷಣೆ ಮಾಡಲಾಗಿದೆ.

ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ 11 ಭಾರತೀಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ :

  1. ನೀರಜ್ ಚೋಪ್ರಾ (ಅಥ್ಲೆಟಿಕ್ಸ್)
  2. ರವಿ ದಹಿಯಾ (ಕುಸ್ತಿ)
  3. ಪಿಆರ್ ಶ್ರೀಜೇಶ್ (ಹಾಕಿ)
  4. ಲವ್ಲಿನಾ ಬೊರ್ಗೊಹೈ (ಬಾಕ್ಸಿಂಗ್)
  5. ಸುನಿಲ್ ಛೆಟ್ರಿ (ಫುಟ್‌ಬಾಲ್)
  6. ಮಿಥಾಲಿ ರಾಜ್ (ಮಹಿಳಾ ಕ್ರಿಕೆಟ್)
  7. ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)
  8. ಸುಮಿತ್ ಆಂಟಿಲ್ (ಜಾವೆಲಿನ್)
  9. ಅವನಿ ಲೇಖರ (ಶೂಟಿಂಗ್)
  10. ಕೃಷ್ಣ ನಗರ (ಬ್ಯಾಡ್ಮಿಂಟನ್)
  11. ಎಂ ನರ್ವಾಲ್ (ಶೂಟಿಂಗ್)

ಈ ಹಿಂದೆ ಈ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಭಾರತದ ಹಾಕಿ ತಂಡ ಐತಿಹಾಸಿಕ ಪ್ರದರ್ಶನದ ತೋರಿದ್ದರಿಂದ ಲೆಜೆಂಡರಿ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನಿಟ್ಟು ಮರು ನಾಮಕರಣ ಮಾಡಿದ್ದಾರೆ. ಹೆಸರು ಮರು ನಾಮಕರಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಹೆಸರಿನಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.