ETV Bharat / sports

ಡೈಮಂಡ್ ಲೀಗ್ ಗೆದ್ದು ಇತಿಹಾಸ ನಿರ್ಮಿಸಿದ ಭರ್ಜಿ ದೊರೆ ನೀರಜ್​ ಚೋಪ್ರಾ - ಅಗ್ರ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ

ಭಾರತದ ಭರ್ಜಿ ದೊರೆ ನೀರಜ್​ ಚೋಪ್ರಾ ಗಾಯದಿಂದ ಚೇತರಿಸಿಕೊಂಡು ಮತ್ತೊಂದು ಪ್ರಶಸ್ತಿಗೆ ಗುರಿ ಇಟ್ಟು ಗೆದ್ದಿದ್ದಾರೆ. ಸ್ವಿಸ್​​ನಲ್ಲಿ ನಡೆದ ಡೈಮಂಡ್​ ಲೀಗ್​ ಅನ್ನು ಗೆದ್ದು ಜ್ಯೂರಿಚ್​ ಲೀಗ್​ಗೆ ನೀರಜ್​ ಚೋಪ್ರಾ ಅರ್ಹತೆ ಪಡೆದರು.

lausanne-diamond-league-title
ಭರ್ಜಿ ದೊರೆ ನೀರಜ್​ ಛೋಪ್ರಾ
author img

By

Published : Aug 27, 2022, 6:54 AM IST

ಲೌಸನ್ನೆ: ಗಾಯದಿಂದ ಚೇತರಿಸಿಕೊಂಡ ಬಳಿಕ ಭಾರತದ ಜಾವೆಲಿನ್​ ದೊರೆ ನೀರಜ್​ ಚೋಪ್ರಾ ಸ್ವಿಟ್ಜರ್​ಲ್ಯಾಂಡ್​ನಲ್ಲಿ ನಡೆದ ಡೈಮಂಡ್​ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು.

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕಾಮನ್​ವೆಲ್ತ್​ ಗೇಮ್ಸ್​ನಿಂದ ಹೊರಗುಳಿದಿದ್ದ ನೀರಜ್​ ಸ್ವಿಸ್​​ನ ಡೈಮಂಡ್​ ಲೀಗ್​ನಲ್ಲಿ 89.08 ಮೀಟರ್​ ದೂರ ಜಾವೆಲಿನ್​ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿದರು.

ಗಾಯದಿಂದ ಒಂದು ತಿಂಗಳು ಆಟದಿಂದ ದೂರವಿದ್ದ ನೀರಜ್​ ಚೋಪ್ರಾ ಅವರು ಪುನರ್ವಸತಿ ಕೇಂದ್ರದಲ್ಲಿ ಅಭ್ಯಾಸ ನಡೆಸಿ ಮೈದಾನಕ್ಕೆ ಮರಳಿದ ಬೆನ್ನಲ್ಲೇ ಪ್ರಶಸ್ತಿ ಜಯಿಸಿದರು. ಮೊದಲ ಎಸೆತದಲ್ಲಿಯೇ 89.08 ಮೀ ಎಸೆದ ನೀರಜ್​, ಬಳಿಕ ಎರಡನೇ ಥ್ರೋ 85.18 ಮೀ ಆಗಿತ್ತು. 6 ನೇ ಎಸೆತದಲ್ಲಿ 80.4 ಮೀಟರ್​ ಎಸೆದರು. ಲೀಗ್​ನಲ್ಲಿ ಅತಿಹೆಚ್ಚು ದೂರ ಎಸೆದ ನೀರಜ್​ ಚಾಂಪಿಯನ್​ ಆದರು.

ಇದಕ್ಕೂ ಮೊದಲು ಡೈಮಂಡ್​ ಲೀಗ್​ನಲ್ಲಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅಗ್ರ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದರು. ಅವರು 2012 ರಲ್ಲಿ ನ್ಯೂಯಾರ್ಕ್‌ನಲ್ಲಿ ಮತ್ತು 2014 ರಲ್ಲಿ ದೋಹಾದಲ್ಲಿ ನಡೆದದ ಲೀಗ್​ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. 2015 ರಲ್ಲಿ ಶಾಂಘೈ ಮತ್ತು ಯುಜೀನ್ ಲೀಗ್​ನಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದೀಗ ನೀರಜ್​ ಲೀಗ್​ನಲ್ಲಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದರು.

ಗಾಯದ ಬಳಿಕದ ಗೆಲುವು ಖುಷಿ ತಂದಿದೆ: "ನನ್ನ ಫಲಿತಾಂಶದಿಂದ ಸಂತೋಷಗೊಂಡಿದ್ದೇನೆ. 89 ಮೀಟರ್​ ಎಸೆದಿರುವುದು ಖುಷಿ ತಂದಿದೆ. ಗಾಯದಿಂದ ಚೇತರಿಸಿಕೊಂಡಿದ್ದೇನೆ. ಲೀಗ್ ಗೆದ್ದಿರುವುದು ಸಂತಸ ತಂದಿದೆ. ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಬೇಕಾಯಿತು. ಇದು ನನ್ನನ್ನು ಸ್ವಲ್ಪ ಆತಂಕಕ್ಕೀಡು ಮಾಡಿತ್ತು. ಇದೀಗ ನಾನು ವಾಪಸ್​ ಆಗಿದ್ದೇನೆ" ಎಂದು ನೀರಜ್​ ​ಚೋಪ್ರಾ ಹೇಳಿದರು.

ಜ್ಯೂರಿಚ್​​ನಲ್ಲಿ ಸೆಪ್ಟೆಂಬರ್ 7 ಮತ್ತು 8 ರಂದು ನಡೆಯುವ ಡೈಮಂಡ್ ಲೀಗ್ ಫೈನಲ್‌ಗೂ ನೀರಜ್​ ಅರ್ಹತೆ ಪಡೆದರು. ಈ ಲೀಗ್​ನಲ್ಲಿ 8 ಪಾಯಿಂಟ್‌ ಪಡೆದು 15 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಜ್ಯೂರಿಚ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು. ಇವರ ಹೊರತಾಗಿ ಇನ್ನೂ ಆರು ಸ್ಪರ್ಧಿಗಳು ಜ್ಯೂರಿಚ್​ ಪ್ರಯಾಣ ಬೆಳೆಸಲಿದ್ದಾರೆ.

ಓದಿ: ಪಾಕ್​ಗೆ ಮತ್ತೊಂದು ಆಘಾತ: ಏಷ್ಯಾ ಕಪ್​​ನಿಂದ ಹೊರಬಿದ್ದ ವೇಗಿ ಮೊಹಮ್ಮದ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.