ಜ್ಯೂರಿಚ್(ಸ್ವಿಟ್ಜರ್ಲೆಂಡ್): ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಜ್ಯೂರಿಚ್ ಡೈಮಂಡ್ ಲೀಗ್ನ ಜಾವೆಲಿನ್ ಎಸೆತದಲ್ಲಿ ಎರಡನೇ ಸ್ಥಾನ ಪಡೆದೆಕೊಂಡರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದ ಮೂಲಕ ಚಿನ್ನ ಗೆದ್ದಿದ್ದ ಚೋಪ್ರಾ ಈ ಬಾರಿ ಡೈಮಂಡ್ ಲೀಗ್ನಲ್ಲಿ ಕೂದಲೆಳೆ ಅಂತರಲ್ಲಿ ಚಿನ್ನ ಪದಕವನ್ನು ತಪ್ಪಿಸಿಕೊಂಡರು. 85.71 ಮೀ ಎಸೆಯುವ ಮೂಲಕ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಂಕ ವಿವರ: ಝೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 85.86 ಮೀ ಎಸೆದು ಮೊದಲ ಸ್ಥಾನ ಗಿಟ್ಟಿಸಿಕೊಂಡರು. ನೀರಜ್ ಚೋಪ್ರಾ 85.71 ಮೀ ಎಸೆದು 2ನೇ ಸ್ಥಾನ, ಹಾಗೆ ಜರ್ಮನಿಯ ಜೂಲಿಯನ್ ವೆಬರ್ 85.04 ಮೀ ಎಸೆದು ಮೂರನೇ ಸ್ಥಾನ ಪಡೆದರು.
-
Zurich Diamond League: Neeraj Chopra secures second position in men's javelin throw
— ANI Digital (@ani_digital) August 31, 2023 " class="align-text-top noRightClick twitterSection" data="
Read @ANI Story | https://t.co/RPqzsB1Nr4#NeerajChopra #ZurichDL #ZurichDiamondLeague #athletics pic.twitter.com/RpwWCAV74q
">Zurich Diamond League: Neeraj Chopra secures second position in men's javelin throw
— ANI Digital (@ani_digital) August 31, 2023
Read @ANI Story | https://t.co/RPqzsB1Nr4#NeerajChopra #ZurichDL #ZurichDiamondLeague #athletics pic.twitter.com/RpwWCAV74qZurich Diamond League: Neeraj Chopra secures second position in men's javelin throw
— ANI Digital (@ani_digital) August 31, 2023
Read @ANI Story | https://t.co/RPqzsB1Nr4#NeerajChopra #ZurichDL #ZurichDiamondLeague #athletics pic.twitter.com/RpwWCAV74q
ಹೀಗಿತ್ತು ಪೈಪೋಟಿ: ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿ 80.79 ಮೀಟರ್ ಎಸೆದು ಸ್ಫರ್ದೆ ಆರಂಭಿಸಿದರು. ಈ ವೇಳೆ ಲಿಥುವೇನಿಯಾದ ಎಡಿಸ್ ಮಾಟುಸೆವಿಸಿಯಸ್ 81.62 ಮೀ ಎಸೆದು ಮುನ್ನಡೆ ಸಾಧಿಸಿದರು. 2 ನೇ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 83.46 ಮೀ ಎಸೆದು ನೀರಜ್ ಚೋಪ್ರಾ ಮತ್ತು ಎಡಿಸ್ಗೆ ಸವಾಲೆಸೆದರು. 2 ನೇ ಸುತ್ತಿನಲ್ಲಿ ನೀರಜ್ ಎಸೆತ ಫೌಲ್ ಆಗಿದ್ದರಿಂದ ಎಡಿಸ್ಗಿಂತ ಕೆಳಕ್ಕಿಳಿದು 3 ನೇ ಸ್ಥಾನ ಪಡೆದರು. ನಂತರ ಜರ್ಮನಿಯ ಜೂಲಿಯನ್ ವೆಬರ್ 84.75 ಮೀ. ಎಸೆದಿದ್ದರು. ಈ ವೇಳೆ ನೀರಜ್ ತಮ್ಮ 3ನೇ ಪ್ರಯತ್ನದಲ್ಲಿ ಫೌಲ್ ಆಗಿದ್ದರಿಂದ ಒಮ್ಮೆಲೇ ನೀರಜ್ 5 ನೇ ಸ್ಥಾನಕ್ಕೆ ಕುಸಿತ ಕಂಡರು. ಬಳಿಕ ಜೂಲಿಯನ್ ವೆಬರ್ ಮುನ್ನಡೆಯೊಂದಿಗೆ ತಮ್ಮ ಮೂರನೆ ಸುತ್ತನ್ನು ಕೊನೆಗೊಳಿಸಿದರು.
4 ನೇ ಸುತ್ತಿನಲ್ಲಿ ಝೆಕ್ನ ಜಾಕುಬ್ 85.86 ಮೀ ಎಸೆದು ಎಲ್ಲರಿಗಿಂತ ಮುನ್ನಡೆ ಸಾಧಿಸಿದರು. ಈ 4 ನೇ ಸುತ್ತಿನಲ್ಲಿ ಚೋಪ್ರಾ 85.22 ಮೀ ದೂರಕ್ಕೆ ಎಸೆದು 2ನೇ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಚೋಪ್ರಾ 5 ನೇ ಸ್ಥಾನದಿಂದ ಕಮ್ ಬ್ಯಾಕ್ ಮಾಡಿದರು. ಆದರೆ, 5ನೇ ಸುತ್ತಿನಲ್ಲಿ ಗೋಲ್ಡನ್ ಬಾಯ್ಗೆ ತಮ್ಮ ಲಕ್ ಮತ್ತು ಪ್ರಯತ್ನ ಕೈ ಕೊಟ್ಟಿತು. 5 ನೇ ಸುತ್ತಿನಲ್ಲಿ ಚೋಪ್ರಾ 2 ಹಾಗೂ 3 ನೇ ಸುತ್ತಿನಂತೆ ಫೌಲ್ ಆದರು. ಕೊನೆಯ ಸುತ್ತು 6ರಲ್ಲಿ ಚೋಪ್ರಾ ಸಾಕಷ್ಟು ಪ್ರಯತ್ನಿಸಿ ಅಂತಿಮವಾಗಿ 85.71 ಮೀ ದೂರ ಎಸೆದರು. ಜಾಕುಬ್ ವಡ್ಲೆಜ್ನದು 85.86 ಮೀ ಅಂತಿಮ ಅಂಕವಾಗಿತ್ತು. ನೀರಜ್ ಚೋಪ್ರಾರವರದು ಅಂತಿಮವಾಗಿ 85.71 ಮೀ ದೂರ ಜಾವೆಲಿನ್ ಎಸೆದು ಸ್ವಲ್ಪದರಲ್ಲೇ ಚಿನ್ನದ ಪದಕವನ್ನು ಕಳೆದುಕೊಂಡರು.
ಇನ್ನು, ಉಳಿದ ಸ್ಫರ್ದೆಗಳಲ್ಲಿ ನೋಡುವುದಾದರೆ, ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಮುರಳಿ ಶ್ರೀಶಂಕರ್ 7.99 ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಈ ಆಟದಲ್ಲಿ ಗ್ರೀಸ್‌ನ ಮಿಲ್ಟಿಡಿಯಾಸ್ ಟೆಂಟೊಗ್ಲೋ 8.20 ಮೀ ಜಿಗಿದು ಚಿನ್ನದ ಪದಕ ಗೆದ್ದುಕೊಂಡರು. ಹಾಗೆ ತಮಯ್ ಗೇಲ್ 8.07 ಮೀ ಜಿಗಿತದೊಂದಿಗೆ ಎರಡನೇ ಸ್ಥಾನ ಪಡೆದರೆ, 8.05 ಮೀ ಜಿಗಿತದೊಂದಿಗೆ ಅಮೆರಿಕದ ಲಾಸನ್ ಜರಿಯನ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. (ANI)
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ