ನೋಯ್ಡಾ: 65ನೇ ಪುರುಷರ ಫ್ರೀಸ್ಟೈಲ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸರ್ವೀಸಸ್ನ ಪಂಕಜ್ ಮತ್ತು ರವೀಂದರ್ ಕ್ರಮವಾಗಿ 57 ಮತ್ತು 61 ಕೆಜಿ ವಿಭಾಗದ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪಕದಕಕ್ಕೆ ಮುತ್ತಿಕ್ಕಿದ್ದಾರೆ.
57 ಕೆಜಿ ವಿಭಾಗದಲ್ಲಿ ಪಂಕಜ್ ಚಿನ್ನದ ಪದಕ ಪಡೆದರೆ, ಹರಿಯಾಣದ ಅಮನ್ ಬೆಳ್ಳಿ, ಶುಬಮ್ ಮತ್ತು ದೆಹಲಿಯ ರಾಹುಲ್ ಕಂಚಿನ ಪದಕ ಪಡೆದರು. 61 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಸೂರಜ್ ಬೆಳ್ಳಿ ಪದಕ, ದೆಹಲಿಯ ನವೀನ್ ಮತ್ತು ಪಂಜಾಬ್ನ ತಾನಾಜಿ ಕಂಚಿನ ಪದಕ ಪಡೆದಿದ್ದಾರೆ.
74 ಕೆಜಿ ವಿಭಾಗದಲ್ಲಿ ಪಂಜಾಬ್ನ ಸಂದೀಪ್ ಸಿಂಗ್ ಚಿನ್ನದ ಪದಕ, ರೈಲ್ವೇಸ್ನ ಜೀತೇಂದರ್ ಬೆಳ್ಳಿ ಹಾಗೂ ಹರಿಯಾಣದ ಅಮಿತ್ ಧಂಕರ್ ಹಾಗೂ ಹರಿಯಾಣದ ವಿಜಯ್ ಕಂಚಿನ ಪದಕ ಪಡೆದಿದ್ದಾರೆ.
92 ಕೆಜಿ ವಿಭಾಗದಲ್ಲಿ ರೈಲ್ವೇಸ್ನ ಪ್ರವೀಣ್ ಚಿನ್ನ, ಮಹಾರಾಷ್ಟ್ರದ ಪೃಥ್ವಿರಾಜ್ ಬೆಳ್ಳಿ, ಪಂಜಾಬ್ನ ಲವ್ಪ್ರೀತ್ ಸಿಂಗ್ ಮತ್ತು ರೈಲ್ವೇಸ್ನ ಗೋಪಾಲ್ ಯಾದವ್ ಕಂಚಿನ ಪದಕ ಪಡೆದಿದ್ದಾರೆ.
125 ಕೆಜಿ ವಿಭಾಗದಲ್ಲಿ ರೈಲ್ವೇಸ್ನ ಸುಮಿತ್ ಚಿನ್ನ, ಹರಿಯಾಣದ ದಿನೇಶ್ ಧಂಕರ್ ಬೆಳ್ಳಿ, ಹರಿಯಾಣ ಪ್ರತ್ಯಕ್ಷ್ ಮತ್ತು ರಾಜಸ್ಥಾನದ ಅನಿಲ್ ಕುಮಾರ್ ಮೊದಲ ದಿನ ನಡೆದ ಪಂದ್ಯಗಳಲ್ಲಿ ಕಂಚಿನ ಪದಕ ಪಡೆದಿದ್ದಾರೆ.