ETV Bharat / sports

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಗಡುವು ವಿಸ್ತರಿಸಿರುವ ಕ್ರೀಡಾ ಸಚಿವಾಲಯವು ಸ್ವಯಂ ನಾಮನಿರ್ದೇಶನ ಮಾಡಿಕೊಳ್ಳಲು ಕ್ರೀಡಾಪಡುಗಳಿಗೆ ಅವಕಾಶ ನೀಡಿದೆ.

National Sports Awards
ಕ್ರೀಡಾ ಸಚಿವ ಕಿರಣ್​​ ರಿಜಿಜು
author img

By

Published : Jun 4, 2020, 3:02 PM IST

Updated : Jun 5, 2020, 12:49 PM IST

ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ಕ್ರೀಡಾ ಸಚಿವಾಲಯವು ಜೂನ್ 22 ರವರೆಗೆ ವಿಸ್ತರಿಸಿದೆ. ಅಲ್ಲದೆ, ಲಾಕ್​​ಡೌನ್​ ನಡುವೆ ಅರ್ಜಿ ಸಲ್ಲಿಸಲು ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸ್ವಯಂ ನಾಮನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬುಧವಾರ (ಜೂನ್​ 3) ಕೊನೆಯ ದಿನವಾಗಿತ್ತು. ಕೊರೊನಾಪ್ರೇರಿತ ಲಾಕ್​ಡೌನ್​​ನಿಂದಾಗಿ ಕ್ರೀಡಾಪಟುಗಳಿಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗಿತ್ತು.

ಈ ಮೊದಲು ಪ್ರಶಸ್ತಿಗೆ ಸರ್ಜಿ ಸಲ್ಲಿಸುವಾಗ ಅಧಿಕಾರಿಗಳ ಮತ್ತು ವ್ಯಕ್ತಿಗಳ ಶಿಫಾರಸ್ಸು ಕಡ್ಡಾಯವಾಗಿತ್ತು. ಈಗ ಆ ಷರತ್ತನ್ನು ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಸ್ವಯಂ ನಾಮನಿರ್ದೇಶನ (ಯಾರೊಬ್ಬರ ಸಹಾಯವಿಲ್ಲದೆ ಕ್ರೀಡಾಪಟುಗಳೇ ಶಿಫಾರಸ್ಸು ಮಾಡುವುದು) ಮಾಡಲು ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ ಎಂದು ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಅಲ್ಲದೆ, ನಿಗದಿತ ಅಧಿಕಾರಿಗಳು / ವ್ಯಕ್ತಿಗಳ ಶಿಫಾರಸು ಅಗತ್ಯವಿರುವ ಅರ್ಜಿಯ ಭಾಗವನ್ನು ಖಾಲಿ ಬಿಡಬಹುದು. ಕೊರೊನಾ ವೈರಸ್​​​ನಿಂದಾಗಿ ಎಲ್ಲರೂ ಕಡ್ಡಾಯವಾಗಿ ಇ-ಮೇಲ್ ಮೂಲಕವೇ ಶಿಫಾರಸ್ಸು ಅರ್ಜಿಗಳನ್ನು ಕಳುಹಿಸಬೇಕು ಎಂದೂ ಸುತ್ತೋಲೆಯಲ್ಲಿ ಹೇಳಿದೆ.

ನಿಗದಿತ ಮಾನದಂಡಗಳ ಪ್ರಕಾರ, ರಾಷ್ಟ್ರೀಯ ಫೆಡರೇಶನ್, ಕ್ರೀಡಾ ಮಂಡಳಿ ಮತ್ತು ಮಾಜಿ ಪ್ರಶಸ್ತಿ ಪುರಸ್ಕೃತರ ಶಿಫಾರಸ್ಸಿನೊಂದಿಗೆ ಮಾತ್ರ ರಾಷ್ಟ್ರೀಯ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಬೇಕಾಗಿತ್ತು. ಈಗ ಆ ನಿಯಮವನ್ನು ಸಡಿಲಗೊಳಿಸಲಾಗಿದೆ. ಕ್ರೀಡಾಪಟುಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ಕಿರಣ್​​ ರಿಜಿಜು ಹೇಳಿದ್ದಾರೆ.

Last Updated : Jun 5, 2020, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.