ETV Bharat / sports

ಆಗ ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಆಟಗಾರ: ಈಗ ತರಕಾರಿ ಮಾರಿ ಜೀವನ ನಿರ್ವಹಣೆ - vegetable seller

2013 ರಿಂದ 2016ರವರೆಗೆ ಪಶ್ಚಿಮ ಬಂಗಾಳ ತಂಡ ಪರವಾಗಿ ಕಣಕ್ಕಿಳಿದಿದ್ದ ಸುಖ್​ದೇವ್​ - ​ ರಾಷ್ಟ್ರೀಯ ತಂಡದ ಪರವಾಗಿ ಆಡಬೇಕಾದವರು ಇಂದು ಕೋಲ್ಕತ್ತಾ ನಗರದಲ್ಲಿ ತರಕಾರಿ ವ್ಯಾಪಾರಿ.

national-level-handball-player-now-sells-vegetables-in-kolkata
ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಆಟಗಾರ: ಈಗ ತರಕಾರಿಗಳನ್ನು ಮಾರಿ ಜೀವನ ಸಾಗುತ್ತಿದ್ದಾರೆ
author img

By

Published : Jan 19, 2023, 10:15 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಒಂದು ಕಾಲದಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಂಡ್​ಬಾಲ್​ ಆಟಗಾರ, ಇಂದು ತರಕಾರಿ ಮಾರಾಟ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಕೋಲ್ಕತ್ತಾದ ಹ್ಯಾಂಡ್‌ಬಾಲ್ ಆಟಗಾರ ಸುಖ್​​ದೇವ್​ ಗಯೆನ್ 2013 ರಿಂದ 2016 ರವರೆಗೆ ಪಶ್ಚಿಮ ಬಂಗಾಳ ತಂಡ ಪರವಾಗಿ ಪಂಜಾಬ್​, ದೆಹಲಿ, ತಮಿಳುನಾಡು ಮತ್ತು ರಾಜಸ್ಥಾನ ಹೀಗೆ ಹಲವಾರು ತಂಡಗಳ ವಿರುದ್ಧ ಪಶ್ಚಿಮ ಬಂಗಾಳದ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಹ್ಯಾಂಡ್​ ಬಾಲ್​ ಕ್ರೀಡೆಯನ್ನು ಆಡುತ್ತಿದ್ದರು.

ರಾಷ್ಟ್ರೀಯ ತಂಡದ 16 ತಂಡದ ಸದಸ್ಯರ ತಂಡದಲ್ಲಿ ಸಹ ಸುಖ್​ದೇವ್​ ಆಯ್ಕೆಯಾಗಿದ್ದರು, ಆದರೆ, ದುರಾದೃಷ್ಟವಶಾತ್​ ರಾಷ್ಟ್ರೀಯ ತಂಡದ ಪರವಾಗಿ ಆಡಬೇಕಾದವರು ಇಂದು ಕೋಲ್ಕತ್ತಾ ನಗರದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವ ಸಾಗಿಸುತ್ತಿದ್ದಾರೆ. ಸುಖ್​ದೇವ್​ ಅವರದು ಕಡು ಬಡತನ ಕುಟುಂಬ, ವಯಸ್ಸಾದ ತಂದೆ, ಮೂವರು ಸಹೋದರರು, ಸುಖ್​ದೇವ್ ಅವರು​ ಹಿರಿಯರಾಗಿದ್ದರು, ತಂದೆ ಒಬ್ಬರಿಂದಲೇ ಕುಟುಂಬವನ್ನು ನಡೆಸಲು ಸಾದ್ಯವಿಲ್ಲ ಎಂದು ತಿಳಿದು ಸುಖ್​ದೇವ್​ ತನ್ನ ಕನಸುಗಳನ್ನು ಬದಿಗಿಟ್ಟು ಜೀವನ ಸಾಗಿಸಲು ಸಾಕಷ್ಟು ಕಡೆ ಕೆಲಸಕ್ಕಾಗಿ ಅಲೆದು ಕೊನೆಗೆ ತರಕಾರಿ ವ್ಯಾಪಾರ ಮಾಡಲು ಪ್ರಾರಂಭ ಮಾಡಿದರು.

ಇದನ್ನೂ ಓದಿ: ಪುರುಷರ ಹಾಕಿ ವಿಶ್ವಕಪ್​: ಭಾರತ vs ವೇಲ್ಸ್​ ತಂಡದ ಹಾಕಿ ಪಂದ್ಯ ವೀಕ್ಷಿಸಲು ಬಂದ ಕೀನ್ಯಾ ಮಾಜಿ ಹಾಕಿ ಆಟಗಾರ

"ನಾನು 2013 ಸಮಯದಲ್ಲಿ ಹ್ಯಾಂಡ್​ಬಾಲ್​​ ಆಟವನ್ನು ಪ್ರಾರಂಭಿಸಿದೆ. 2016ರ ಸಮಯದಲ್ಲಿ ಬ್ಯಾಕ್ ಟು ಬ್ಯಾಕ್ ನ್ಯಾಷನಲ್ಸ್ ಆಡಿದ್ದೇನೆ. ಆದರೆ, ನಮ್ಮ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಮನೆಯ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿಲ್ಲ, ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡಲು ಪ್ರಾರಂಭಿಸಿದೆ, ಆ ಸಮಯದಲ್ಲಿ ಮನೆ ಸಾಗಿಸಲು ಕೆಲಸದ ಅಗತ್ಯವಿತ್ತು ಬೇರೆ ಯಾವ ಕೆಲಸಗಳು ಸಿಗಲಿಲ್ಲ. ಅದಕ್ಕಾಗಿ, ನಾನು ತರಕಾರಿಗಳನ್ನು ಮಾರಾಟ ಮಾಡಲು ಶುರು ಮಾಡಿದೆ. ಕೊರೊನಾ ಲಾಕ್‌ಡೌನ್‌ ಆಗುವ ಮುಂಚೆಯಿಂದಲೂ ಇಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದೇನೆ. ಲಾಕ್‌ಡೌನ್ ಸಮಯದಲ್ಲಿ ವ್ಯಾಪಾರ ಇಲ್ಲದೇ ಆರ್ಥಿಕವಾಗಿ ಬಹಳ ಕಷ್ಟ ಅನುಭವಿಸಿದೆ. ಆದರೆ, ಈಗ ಪರಿಸ್ಥಿತಿ ಉತ್ತಮವಾಗಿದೆ” ಎಂದು ಸುಖ್​ದೇವ್​ ಈಟಿವಿ ಭಾರತ್​ಗೆ ತಿಳಿಸಿದರು.

ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: 72 ಗಂಟೆಯೊಳಗೆ ವಿವರಣೆ ನೀಡಲು SAI ಸೂಚನೆ

ಸುಖ್​ದೇವ್​ ಮತ್ತೆ ಹ್ಯಾಂಡ್​ಬಾಲ್​ ಆಟವನ್ನು ಆಡುವ ಆಸೆಯನ್ನು ಹೊಂದಿದ್ದಾರೆ. ಇದಕ್ಕಾಗಿ ಸುಖ್​ದೇವ್​ ಅವರು ವಾರದ ಆರು ದಿನ ತರಕಾರಿ ಮಾರಾಟ ಮಾಡುತ್ತಾರೆ. ಭಾನುವಾರದಂದು ಹ್ಯಾಂಡ್‌ಬಾಲ್ ಅಭ್ಯಾಸಕ್ಕಾಗಿ ಒಂದು ದಿನವನ್ನು ಮೀಸಲಿಟ್ಟಿದ್ದಾರೆ. "ನನಗೆ ಇನ್ನೊಂದು ಅವಕಾಶ ಸಿಕ್ಕರೆ, ನಾನು ಮತ್ತೆ ಹ್ಯಾಂಡ್​ಬಾಲ್​ ಕೋರ್ಟ್‌ಗೆ ಹೋಗುತ್ತೇನೆ" ಎಂದು ಸುಖ್​ದೇವ್​ ಹೇಳಿದರು.

ಇದನ್ನೂ ಓದಿ: ಸಚಿನ್,​ ಕೊಹ್ಲಿ ದಾಖಲೆ ಮುರಿದ ದ್ವಿಶತಕ ವೀರ: ಇನ್ನೂರರ ಗಡಿ ಮುಟ್ಟಿದ ಅತ್ಯಂತ ಕಿರಿಯ ಗಿಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.