ETV Bharat / sports

ಕ್ರಿಶ್ಚಿಯಾನೊ ರೊನಾಲ್ಡೊ ಕಣಕ್ಕಿಳಿಯದಿದ್ದರೆ ನಮಗೆ ಖುಷಿ: ಮೊರಾಕ್ಕೊ ಕೋಚ್​ ವಾಲಿದ್​

ಮೊರಾಕ್ಕೊ ವಿರುದ್ಧ ಇಂದು ರಾತ್ರಿ ನಡೆಯುವ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಫೋರ್ಚುಗೀಸ್​ ತಂಡ ಎದುರಾಗಲಿದೆ. ಫುಟ್ಬಾಲ್​ ಮಾಂತ್ರಿಕ ಕ್ರಿಶ್ಚಿಯಾನೊ ರೊನಾಲ್ಡೊ ಈ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೇ ಎಂಬುದು ಕುತೂಹಲದ ವಿಷಯವಾಗಿದೆ.

morocco-coach-walid
ಮೊರಾಕ್ಕೊ ಕೋಚ್​
author img

By

Published : Dec 10, 2022, 12:52 PM IST

ದೋಹಾ: ಫಿಫಾ ವಿಶ್ವಕಪ್​ನ ಗುಂಪು ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೋಲು ಗಳಿಸದ ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊರನ್ನು ಪ್ರಿಕ್ವಾರ್ಟರ್​ ಫೈನಲ್​ ಪಂದ್ಯದಿಂದ ತಂಡ ಹೊರಗಿಟ್ಟಿತ್ತು. ಇದು ಒಳಗೊಳಗೇ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಈ ನಡೆಯಿಂದ ಬೇಸರಗೊಂಡಿರುವ ರೊನಾಲ್ಡೊ ತಂಡ ತೊರೆಯುವ ಬಗ್ಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಇಂದು ರಾತ್ರಿ 8.30ಕ್ಕೆ ನಡೆಯುವ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್​ ತಂಡ ಮೊರಾಕ್ಕೊ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ರೊನಾಲ್ಡೊ ಆಡುವರೇ ಇಲ್ಲವೇ? ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ವಿಶ್ವಶ್ರೇಷ್ಠ ಫುಟ್ಬಾಲರ್​ ಕಣಕ್ಕಿಳಿಯದಿದ್ದರೆ ನಮಗೇ ಲಾಭ ಎಂದು ಮೊರಾಕ್ಕೊ ಕೋಚ್​ ವಾಲಿದ್​ ರೆಗ್ರಾಗುಯಿ ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಾಲಿದ್, ಪೋರ್ಚುಗಲ್​ ಬಲಿಷ್ಠ ತಂಡ. ರೊನಾಲ್ಡೊ ಸಾಧನೆ ಇತಿಹಾಸದ ಪುಟಗಳಲ್ಲಿದೆ. ಅಂತಹ ದಿಗ್ಗಜ ಆಟಗಾರ ಇಂದಿನ ಪಂದ್ಯದಲ್ಲಿ ಆಡದಿದ್ದರೆ, ಅದು ನಮಗೆ ಖುಷಿಯ ವಿಚಾರ. ಎದುರಾಳಿ ಕೋಚ್​ ಆಗಿ ನಾನು ಇದನ್ನು ಸಂಭ್ರಮಿಸುವೆ. ಆದರೂ ಇದು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರದು. ನಮ್ಮ ಆಟಗಾರರು ಅದ್ಭುತ ಲಯದಲ್ಲಿದ್ದಾರೆ. ಪಂದ್ಯ ಗೆದ್ದು ಸೆಮಿಫೈನಲ್​ ತಲುಪಿ ಇತಿಹಾಸ ನಿರ್ಮಿಸುವುದೇ ನಮ್ಮ ಮುಂದಿರುವ ಗುರಿ ಎಂದು ಹೇಳಿದ್ದಾರೆ.

ಪ್ರಿ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಸ್ವಿಜರ್​ಲ್ಯಾಂಡ್​ ವಿರುದ್ಧ ಆರಂಭದಲ್ಲಿಯೇ ಕ್ರಿಶ್ಚಿಯಾನೊ ರೊನಾಲ್ಡೊರನ್ನು ಮೈದಾನದಿಂದ ಹೊರಹಾಕಿದ ಪೋರ್ಚುಗಲ್​ ಕೋಚ್​ ಫರ್ನಾಂಡೋ ಸ್ಯಾಂಟೋಸ್, ಬದಲಿಯಾಗಿ 21 ವರ್ಷದ ಗೊನ್ಕಾಲೊ ರಾಮೋಸ್​ರನ್ನು ಕಣಕ್ಕಿಳಿಸಿದರು. ರಾಮೋಸ್​ ಮಿಂಚಿನ ಆಟವಾಡಿ ಹ್ಯಾಟ್ರಿಕ್​ ಗೋಲು ಬಾರಿಸಿದರು. ಇದರಿಂದ ತಂಡ 6-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

ಇದು ಫುಟ್ಬಾಲ್​ ಮಾಂತ್ರಿಕ ರೊನಾಲ್ಡೊರನ್ನು ಕೆರಳಿಸಿದೆ. ಪಂದ್ಯದಲ್ಲಿ ತಮ್ಮನ್ನು ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದು, ತಂಡದಿಂದಲೇ ಹೊರಹೋಗುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸ್ಪಷ್ಟನೆ ನೀಡಿದ್ದ ಕೋಚ್​ ಫರ್ನಾಂಡೋ ಸ್ಯಾಂಟೋಸ್, ಸ್ವಿಸ್​ ವಿರುದ್ಧ ರೊನಾಲ್ಡೊರನ್ನು ಕೂರಿಸಿದ್ದು ಪಂದ್ಯದ ತಂತ್ರ. ರೊನಾಲ್ಡೊ ಬಳಿ ಚರ್ಚಿಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಓದಿ: ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್​ಗೆ.. ನೆದರ್​ಲ್ಯಾಂಡ್ಸ್​ ಕನಸು ಭಗ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.